ನವದೆಹಲಿ : ನೀವು ಜನ್ ಧನ್ ಬ್ಯಾಂಕ್ ಖಾತೆಯನ್ನೂ ತೆರೆದಿದ್ದರೆ ಈ ಸುದ್ದಿ ನಿಮಗಾಗಿ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ, ದೇಶದ ಬಡವರಿಗೆ ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೂನ್ಯ ಬ್ಯಾಲೆನ್ಸ್‌ ಖಾತೆ ತೆರೆಯಲಾಗುತ್ತದೆ. ಈ ಯೋಜನೆಯಡಿ (PMJDY), ಗ್ರಾಹಕರಿಗೆ ಹಲವು ರೀತಿಯ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ. ಈಗ ನೀವು ಮಿಸ್ಡ್ ಕಾಲ್ ಮೂಲಕ ಮನೆಯಲ್ಲಿ ಕುಳಿತು ನಿಮ್ಮ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. ಮನೆಯಲ್ಲಿ ಕುಳಿತ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ನೀವು ಹೇಗೆ ಸುಲಭವಾಗಿ ತಿಳಿದುಕೊಳ್ಳಬಹುದು ಎಂದು ಈ ಕೆಳೆಗೆ ನೋಡಿ..


COMMERCIAL BREAK
SCROLL TO CONTINUE READING

ಈ ರೀತಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿ 


ನಿಮ್ಮ ಜನ್ ಧನ್(PM Jan Dhan) ಖಾತೆ ಬ್ಯಾಲೆನ್ಸ್ ಅನ್ನು ನೀವು ಎರಡು ರೀತಿಯಲ್ಲಿ ಪರಿಶೀಲಿಸಬಹುದು. ಇದರಲ್ಲಿ, ಮೊದಲನೆಯದು ಮಿಸ್ಡ್ ಕಾಲ್ ಮತ್ತು ಎರಡನೇ ದಾರಿ ಪಿಎಫ್‌ಎಂಎಸ್ ಪೋರ್ಟಲ್ ಮೂಲಕ. ಈ ಎರಡರ ಸಂಪೂರ್ಣ ಪ್ರಕ್ರಿಯೆಯ ನಿಮಗಾಗಿ..


ಇದನ್ನೂ ಓದಿ : PM Modi Temple: ಪ್ರಧಾನಿ ನರೇಂದ್ರ ಮೋದಿ ದೇವಸ್ಥಾನ ಕಟ್ಟಿಸಿದ ಬಿಜೆಪಿ ಕಾರ್ಯಕರ್ತ..!


PFMS ಪೋರ್ಟಲ್ ಮೂಲಕ


PFMS ಪೋರ್ಟಲ್‌ನಿಂದ ಬ್ಯಾಲೆನ್ಸ್(Balance) ಅನ್ನು ತಿಳಿಯಲು, ನೀವು ಮೊದಲು ಈ ಲಿಂಕ್‌ಗೆ ಹೋಗಿ https://pfms.nic.in/NewDefaultHome.aspx#. ಇಲ್ಲಿ ನೀವು 'ನಿಮ್ಮ ಪಾವತಿಯನ್ನು ತಿಳಿಯಿರಿ' ಮೇಲೆ ಕ್ಲಿಕ್ ಮಾಡಿ. ಈಗ ನೀವು ನಿಮ್ಮ ಖಾತೆ ಸಂಖ್ಯೆಯನ್ನು ನಮೂದಿಸಿ. ಇಲ್ಲಿ ನೀವು ಖಾತೆ ಸಂಖ್ಯೆಯನ್ನು ಎರಡು ಬಾರಿ ನಮೂದಿಸಬೇಕು. ಅದರ ನಂತರ ನೀವು ಕೊಟ್ಟಿರುವ ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ. ಈಗ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ನಿಮ್ಮ ಮುಂದೆ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.


ಇದನ್ನೂ ಓದಿ : Ration card : ಪಡಿತರ ಚೀಟಿದಾರರಿಗೆ 4 ತಿಂಗಳ ಉಚಿತ ಪಡಿತರದ ಜೊತೆಗೆ ಈ ಪ್ರಯೋಜನ : ಶೀಘ್ರದಲ್ಲೇ ಈ ಕೆಲಸ ಮಾಡಿ


ಮಿಸ್ಡ್ ಕಾಲ್ ಮೂಲಕ


ಮಿಸ್ಡ್ ಕಾಲ್(Missed Call) ಮೂಲಕ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಸಹ ನೀವು ಪರಿಶೀಲಿಸಬಹುದು. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜನ್ ಧನ್ ಖಾತೆಯನ್ನು ಹೊಂದಿದ್ದರೆ, ನೀವು ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. ಇದಕ್ಕಾಗಿ, ನೀವು 18004253800 ಅಥವಾ 1800112211 ಸಂಖ್ಯೆಗೆ ಮಿಸ್ಡ್ ಕಾಲ್ ಮಾಡಬಹುದು. ಗ್ರಾಹಕರ ಟಿಪ್ಪಣಿ, ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಿಂದ ನೀವು ಮಿಸ್ಡ್ ಕಾಲ್ ಮಾಡಬೇಕು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ