SC On Women In NDA - ಇತ್ತೀಚೆಗಷ್ಟೇ ಖಾಯಂ ಸೇವಾ ಆಯೋಗದಲ್ಲಿ (Permanent Service Commission) ಮಹಿಳೆಯರನ್ನು ಸೇರಿಸುವ ಕುರಿತು ಮಹತ್ವದ ತೀರ್ಪು ನೀಡಿದ್ದ ಸರ್ವೋಚ್ಛ ನ್ಯಾಯಾಲಯ ಇದೀಗ ಮಹಿಳೆಯರಿಗೆ ಮತ್ತೊಂದು ದೊಡ್ಡ ಪರಿಹಾರ ನೀಡಿದೆ. ಸುಪ್ರೀಂ ಕೋರ್ಟ್ ಈಗ ಮಹಿಳೆಯರಿಗೆ NDA ಅಂದರೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Defence Academy) ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಿದೆ. ಈ ವರ್ಷದ ಸೆಪ್ಟೆಂಬರ್ 5 ರಂದು ನಡೆಯಲಿರುವ NDA ಪರೀಕ್ಷೆಯಿಂದ ಈ ಆದೇಶವು ಜಾರಿಗೆ ಬರಲಿದೆ. ಪ್ರಕರಣದ ವಿಚಾರಣೆಯ ಸಮಯದಲ್ಲಿ, ಸೇನೆಯು ಮಹಿಳೆಯರನ್ನು NDA ಪರೀಕ್ಷೆಗೆ ಸೇರಿಸದಿರುವುದು ನೀತಿ ನಿರ್ಧಾರ ಎಂದು ಹೇಳಿದೆ. ಇದಕ್ಕೆ ಸರ್ವೋಚ್ಛ ನ್ಯಾಯಾಲಯ ಛೀಮಾರಿ ಹಾಕಿದ್ದು, ಇದು ಒಂದು ವೇಳೆ ನೀತಿಗತ ನಿರ್ಧಾರವಾಗಿದ್ದರೆ, ಅದು ತಾರತಮ್ಯದಿಂದ ಕೂಡಿದೆ ಎಂದು ಹೇಳಿದರು. ಆದರೆ ಮಹಿಳೆಯರು ಸೆಪ್ಟೆಂಬರ್ 5 ರಂದು ಪರೀಕ್ಷೆಗೆ ಹಾಜರಾಗುವ ಆದೇಶವು ಸುಪ್ರೀಂ ಕೋರ್ಟ್‌ನ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.
ಇದನ್ನೂ ಓದಿ-ಸುನಂದಾ ಪುಷ್ಕರ್ ಸಾವು ಪ್ರಕರಣ: ಕಾಂಗ್ರೆಸ್ ನಾಯಕ ಶಶಿ ತರೂರ್ ಖುಲಾಸೆ..!
ಈ ಹಿಂದೆ, ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಮಂಗಳವಾರ NDA ಪರೀಕ್ಷೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡದಿರುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯ ಪ್ರಕರಣವಲ್ಲ ಎಂದು ಹೇಳಿತ್ತು. ಇದಷ್ಟೇ ಅಲ್ಲ, ಕೇಂದ್ರ ಸರ್ಕಾರವು NDA ಮೂಲಕ ಬರುವ ಪುರುಷ ಉದ್ಯೋಗಿಗಳಿಗೆ ಹೋಲಿಸಿದರೆ ಅವರ ವೃತ್ತಿಜೀವನದಲ್ಲಿ ಯಾವುದೇ ವಿಶೇಷ ಪ್ರಯೋಜನವನ್ನು ಪಡೆಯುವುದಿಲ್ಲ ಎಂದು ಹೇಳಿತ್ತು. ಮಹಿಳೆಯರು ಸೇನೆಗೆ ಪ್ರವೇಶಿಸಲು ಶಾರ್ಟ್ ಸರ್ವೀಸ್ ಕಮಿಷನ್ ಒಂದೇ ಮಾರ್ಗವಾಗಿದೆ. ಈ ಹಿಂದೆ, ಸರ್ವೋಚ್ಚ ನ್ಯಾಯಾಲಯವು ಮಹಿಳೆಯರನ್ನು ಕಾಯಂ ಆಯೋಗದಲ್ಲಿ ಸೇರಿಸುವಂತೆ ಸೇನೆಗೆ ಹೇಳಿತ್ತು ಎಂಬುದು ಇಲ್ಲಿ ಗಮನಾರ್ಹ. ಇದಷ್ಟೇ ಅಲ್ಲ, ಸೇನೆಯ ನಿಯಮಗಳನ್ನು ತಪ್ಪೆಂದು ನ್ಯಾಯಾಲಯ (Supreme Court) ಹೇಳಿದೆ ಮತ್ತು ಅವು ಅಸಂಬದ್ಧ ಮತ್ತು ಅನಿಯಂತ್ರಿತ ಎಂದೂ ಸಹ ಹೇಳಿದೆ.
ಇದನ್ನೂ ಓದಿ-ಮುಂದಿನ 30 ವರ್ಷಗಳಲ್ಲಿ 3 ಅಡಿ ಸಮುದ್ರದ ನೀರಿನಲ್ಲಿ ಮುಳುಗಲಿವೆ ಭಾರತದ ಈ ನಗರಗಳು: NASA ವರದಿ
ವಕೀಲರಾದ ಕುಶ್ ಕಲ್ರಾ ಪರವಾಗಿ ಮಹಿಳೆಯರನ್ನು NDA ಮತ್ತು ಭಾರತೀಯ ನೌಕಾ ಅಕಾಡೆಮಿಗೆ (Indian Naval Academy) ಸೇರಿಸಬೇಕೆಂದು ಒತ್ತಾಯಿಸಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯನ್ನು ಆಲಿಸಿದ ನಂತರವೇ ಸುಪ್ರೀಂ ಕೋರ್ಟ್ ಈ ನಿರ್ಧಾರವನ್ನು ಪ್ರಕಟಿಸಿದೆ. ಪ್ರಸ್ತುತ, ಈ ಎರಡೂ ಅಕಾಡೆಮಿಗಳಲ್ಲಿ ಮಹಿಳೆಯರನ್ನು ನೇಮಕ ಮಾಡಲಾಗಿಲ್ಲ. ಈ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೋರಿತ್ತು. ಇದೆಕ್ಕೆ ಸರ್ಕಾರವು ಈ ಅರ್ಜಿಯು ಸಾಮಾನ್ಯ ಸಾರ್ವಜನಿಕ ಹಿತಾಸಕ್ತಿಗಾಗಿ ಅಲ್ಲ, ಆದರೆ ನೀತಿ ನಿರ್ಧಾರದ ಬಗ್ಗೆ ಮಾತ್ರ ಎಂದು ಸರ್ಕಾರ ಹೇಳಿತ್ತು. ಇದರ ಮೇಲೆ, ಬುಧವಾರ ಮತ್ತೊಮ್ಮೆ ವಿಚಾರಣೆ ಆರಂಭವಾಗಿದ್ದು, ಇದರಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ್ ರಾಯ್ ಅವರು ಮಹಿಳೆಯರ ಪರವಾಗಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಇದನ್ನೂ ಓದಿ-Afghanistan Crisis: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪೋಷಕರಿಂದ ಬೇರ್ಪಟ್ಟ 7 ತಿಂಗಳ ಮುಗ್ಧ ಹಸುಳೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ