Post Office Scheme: ಹಣದುಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಆದಾಯವನ್ನು ಲೆಕ್ಕಿಸದೆ ಉಳಿತಾಯ ಮಾಡುವುದು ಸ್ವಲ್ಪ ಕಷ್ಟವಾಗುತ್ತದೆ. ಆದಾಯಕ್ಕೆ ತಕ್ಕಂತೆ ಖರ್ಚು ಕೂಡ ಹೆಚ್ಚಾಗುತ್ತಿದೆ. ನೀವು ಪೋಷಕರಾಗಿದ್ದರೆ ಈಗಲೇ ನಿಮ್ಮ ಮಗುವಿನ ಭವಿಷ್ಯದ ಬಗ್ಗೆ ಯೋಚಿಸಬೇಕು. ಇಂದಿನಿಂದಲೇ ನಿಮ್ಮ ಮಕ್ಕಳಿಗಾಗಿ ಉಳಿತಾಯ ಮಾಡಲು ಪ್ರಾರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ಶಿಕ್ಷಣ ಮತ್ತು ಇತರ ಖರ್ಚುಗಳನ್ನು ಮಾಡಲು ತುಂಬಾ ಕಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಭವಿಷ್ಯವನ್ನು ಸುಧಾರಿಸಲು ಮಕ್ಕಳ ಜೀವ ವಿಮಾ ಯೋಜನೆ ಉತ್ತಮ ಯೋಜನೆಯಾಗಿದೆ.


COMMERCIAL BREAK
SCROLL TO CONTINUE READING

ಬಾಲ ಜೀವನ್ ಬಿಮಾ ಯೋಜನೆಯು ಅಂಚೆ ಕಛೇರಿ ಯೋಜನೆಯಾಗಿದೆ. ಈ ಯೋಜನೆಯಲ್ಲಿ, ದಿನಕ್ಕೆ ಕೇವಲ ರೂ.6 ಹೂಡಿಕೆ ಮಾಡುವ ಮೂಲಕ ನಿಮ್ಮ ಮಗುವಿನ ಭವಿಷ್ಯವನ್ನು ನೀವು ಸುರಕ್ಷಿತಗೊಳಿಸಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನಿಮ್ಮ ಮಗುವಿನ ಶಿಕ್ಷಣ ವೆಚ್ಚಕ್ಕಾಗಿ ಮುಂಚಿತವಾಗಿ ಹಣವನ್ನು ಸಂಗ್ರಹಿಸಬಹುದು. ಈ ವಿಮಾ ಯೋಜನೆಯ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ,


ಅಂಚೆ ಇಲಾಖೆಯು ಮಕ್ಕಳಿಗಾಗಿ ಬಾಲ ಜೀವನ್ ಬಿಮಾ ಯೋಜನೆ ಜಾರಿಗೆ ತಂದಿದೆ. ಮಗುವಿನ ಪೋಷಕರು ಮಾತ್ರ ಈ ಯೋಜನೆಯನ್ನು ಖರೀದಿಸಬಹುದು. ಈ ಯೋಜನೆಯನ್ನು ಪಡೆಯಲು ಕೆಲವು ಷರತ್ತುಗಳೂ ಕೂಡ ವಿಧಿಸಲಾಗಿದೆ. ಉದಾಹರಣೆಗೆ, ಯೋಜನೆಯನ್ನು ತೆಗೆದುಕೊಳ್ಳಲು ಸಿದ್ಧರಿರುವ ಪೋಷಕರ ವಯಸ್ಸು 45 ವರ್ಷಗಳಿಗಿಂತ ಹೆಚ್ಚಿರಬಾರದು. 45 ವರ್ಷ ಮೇಲ್ಪಟ್ಟ ಪೋಷಕರು ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತಿಲ್ಲ.


ಇದನ್ನೂ ಓದಿ-Petrol-Diesel Price: ವಾಹನ ಸವಾರರಿಗೆ ಭಾರಿ ಸಂತಸದ ಸುದ್ದಿ!


5 ರಿಂದ 20 ವರ್ಷದ ಮಕ್ಕಳು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಡಿ, ಪೋಷಕರು ತಮ್ಮ ಇಬ್ಬರು ಮಕ್ಕಳಿಗೆ ಮಾತ್ರ ಪಾಲಿಸಿಯನ್ನು ಖರೀದಿಸಬಹುದು. ಇದರರ್ಥ ಪೋಷಕರು ತಮ್ಮ ಇಬ್ಬರು ಮಕ್ಕಳಿಗೆ ಮಾತ್ರ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು, ಮೂರನೇ ಮಗುವಿಗೆ ಹೂಡಿಕೆ ಮಾಡಲು ಸಾಧ್ಯವಿಲ್ಲ.


ಇದನ್ನೂ ಓದಿ-PNG-CNG Price Drop: ಹಣದುಬ್ಬರದ ಹೊಡೆತಕ್ಕೆ ತತ್ತರಿಸಿದ ದೇಶದ ನಾಗರಿಕರಿಗೊಂದು ಭಾರಿ ನೆಮ್ಮದಿಯ ಸುದ್ದಿ


ಈ ಯೋಜನೆಯಲ್ಲಿ, ನಿಮ್ಮ ಮಗುವಿಗಾಗಿ ನೀವು ದಿನಕ್ಕೆ ರೂ.6 ರಿಂದ ರೂ.18 ರವರೆಗಿನ ಪ್ರೀಮಿಯಂ ಅನ್ನು ನೀವು ಠೇವಣಿ ಮಾಡಬಹುದು. 5 ವರ್ಷಗಳವರೆಗೆ, ಈ ಪಾಲಿಸಿಯಲ್ಲಿ ಪ್ರತಿದಿನ ರೂ 6 ಪ್ರೀಮಿಯಂ ಅನ್ನು ಠೇವಣಿ ಮಾಡಬೇಕು. ಈ ಯೋಜನೆಯಲ್ಲಿ, 20 ವರ್ಷಗಳವರೆಗೆ 18 ರೂ ಪ್ರೀಮಿಯಂ ಪಾವತಿಸಬೇಕು. ಪಾಲಿಸಿಯ ಮುಕ್ತಾಯದ ನಂತರ, ನೀವು 1 ಲಕ್ಷ ರೂಪಾಯಿಗಳ ಒಟ್ಟು ಮೊತ್ತವನ್ನು ಪಡೆಯುವಿರಿ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.