Milk Price Hike: ಹೆಚ್ಚುತ್ತಿರುವ ಹಣದುಬ್ಬರ ಮತ್ತು ವೆಚ್ಚದಿಂದಾಗಿ ಹಾಲಿನ ದರ ಇತ್ತೀಚಿನ ದಿನಗಳಲ್ಲಿ ಏರಿಕೆ ಕಾಣುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಮದರ್ ಡೈರಿ ಹಾಲಿನ ದರವನ್ನು ಹೆಚ್ಚಿಸಿತ್ತು. ಈ ಬೆನ್ನಲ್ಲೇ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಂದಿನಿ ಬ್ರಾಂಡ್ ಹಾಲು (ಪ್ರತಿ ಲೀಟರ್) ಮತ್ತು ಮೊಸರು (ಕೆಜಿಗೆ) ದರದಲ್ಲಿ 2 ರೂಪಾಯಿ ಹೆಚ್ಚಳ ಘೋಷಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ʼಐದನಿʼಯ ಮೂಲಕ ಬಂತು ʼಐಹೊಳೆʼಯ ಚರಿತ್ರೆ ಸಾರುವ ಹಾಡುಗಳು..!


ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬರಲಿವೆ. ಸ್ಪೆಷಲ್ ಮಿಲ್ಕ್, ಶುಭಂ, ಸಮೃದ್ಧಿ ಮತ್ತು ಸ್ಯಾಚುರೇಶನ್ ಹಾಗೂ ಮೊಸರು ಸೇರಿದಂತೆ 9 ಬಗೆಯ ಹಾಲಿನ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹಾಲು ಮತ್ತು ಮೊಸರಿನ ಪರಿಷ್ಕೃತ ದರ:


ಡಬಲ್ ಟೋನ್ಡ್ ಹಾಲಿನ ಬೆಲೆ 38 ರೂ., ಟೋನ್ಡ್ ಹಾಲು 39 ರೂ., ಹೋಮೋಜೆನೈಸ್ಡ್ ಟೋನ್ಡ್ ಹಾಲು ರೂ. 40, ಸ್ಪೆಷಲ್ ಮಿಲ್ಕ್ ರೂ. 45, ಶುಭಂ ಹಾಲು ರೂ. 45, ಸಮೃದ್ಧಿ ಹಾಲು ರೂ. 50 ಮತ್ತು ಸಂತೃಪ್ತಿ ಹಾಲಿನ ಬೆಲೆ 52 ರೂ ಆಗಿದೆ. ಇನ್ನು ನಂದಿನಿ ಮೊಸರಿನ ಬೆಲೆ 47 ರೂ. ಆಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ರಾಜ್ಯದ 4 ಕೋಟಿ ಜನರಿಗೆ ಆರೋಗ್ಯ ಕಾರ್ಡ್ : ಸಿಎಂ ಬೊಮ್ಮಾಯಿ


ದರ ಹೆಚ್ಚಿಸಿದ್ದ ಮದರ್ ಡೈರಿ:


ಈ ಹಿಂದೆ, ಮದರ್ ಡೈರಿಯು ದೆಹಲಿ-ಎನ್‌ಸಿಆರ್‌ನಲ್ಲಿ ಪೂರ್ಣ ಕೆನೆ ಹಾಲಿನ ದರವನ್ನು ಲೀಟರ್‌ಗೆ 1 ರೂಪಾಯಿಯಂತೆ ಹೆಚ್ಚಳ ಮಾಡಿತ್ತು. ಇದರ ಜೊತೆಗೆ ಟೋಕನೈಸ್ಡ್ ಹಾಲಿನ ಬೆಲೆ ಲೀಟರ್‌ಗೆ 2 ರೂ. ಏರಿಕೆ ಕಂಡಿತ್ತು. ಮದರ್ ಡೈರಿಯ ಹೆಚ್ಚಿದ ದರಗಳು ನವೆಂಬರ್ 21 ರಿಂದ ಜಾರಿಗೆ ಬಂದಿವೆ. ದೆಹಲಿ-ಎನ್‌ಸಿಆರ್‌ನಲ್ಲಿ ಪ್ರತಿದಿನ 30 ಲಕ್ಷ ಲೀಟರ್‌ಗೂ ಹೆಚ್ಚು ಹಾಲು ಪೂರೈಸುವ ಮದರ್ ಡೈರಿ ಈ ವರ್ಷ ನಾಲ್ಕನೇ ಬಾರಿಗೆ ಬೆಲೆಯನ್ನು ಏರಿಕೆ ಮಾಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.