Keeway 300 CC Babbar Bike Launched:  ಹಂಗೇರಿಯನ್ ಬೈಕ್ ತಯಾರಕ ಕೀವೇ ಭಾರತದಲ್ಲಿ ತನ್ನ ನಾಲ್ಕನೇ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. ಕಂಪನಿಯು ತನ್ನ ಹೊಚ್ಚ ಹೊಸ ಮೋಟಾರ್ ಸೈಕಲ್ ಕೀವೇ V302C ಅನ್ನು ಬಿಡುಗಡೆ ಮಾಡಿದೆ. ಇದು 300 ಸಿಸಿ ವಿಭಾಗದ ಬಾಬರ್ ಬೈಕ್ ಆಗಿದೆ. ಈ ಬೈಕ್‌ನ ಲುಕ್ ನಿಮಗೆ ಹಾರ್ಲೆ ಡೇವಿಡ್‌ಸನ್ ಐರನ್ 883 ಅನ್ನು ನೆನಪಿಸಲಿದೆ. ವಿಶೇಷವೆಂದರೆ ಈ ಬೈಕ್ ಅನ್ನು ಕೇವಲ 10 ಸಾವಿರ ರೂಪಾಯಿಗೆ ಬುಕ್ ಮಾಡಬಹುದು. ಕೀವೇ V302C ಬಾಬರ್ ಬೈಕ್ ಬೆಲೆ ರೂ.3.89 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದನ್ನು ಮೂರು ಬಣ್ಣದ ಆಯ್ಕೆಗಳಲ್ಲಿ ತರಲಾಗಿದೆ. ಪ್ರತಿಯೊಂದು ಬಣ್ಣದ ಆಯ್ಕೆಯ ಬೆಲೆಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.


COMMERCIAL BREAK
SCROLL TO CONTINUE READING

ಬೆಲೆ ಎಷ್ಟು (ಎಕ್ಸ್ ಶೋ ರೂಂ)
ಗ್ಲಾಸಿ ಗ್ರೇ ಬಣ್ಣದ ಬೆಲೆ - 3,89,000 ರೂ
ಹೊಳಪು ಕಪ್ಪು ಬಣ್ಣದ ಬೆಲೆ - 3,99,000 ರೂ
ಗಾಢ ಕೆಂಪು ಬಣ್ಣದ ಬೆಲೆ - 4,09,000 ರೂ


ಇದನ್ನೂ ಓದಿ-Reliance AGM 2022: Jio 5G ಸೇವೆ ಬಿಡುಗಡೆಗೆ ಮುಹೂರ್ತ ಫಿಕ್ಸ್, ದಿನಾಂಕ ಘೋಷಿಸಿದ ಮುಕೇಶ್ ಅಂಬಾನಿ


ಎಂಜಿನ್ ಸಾಮರ್ಥ್ಯ ಮತ್ತು ಶಕ್ತಿ
ಕೀವೇ V302C ಬಾಬರ್ ಮೋಟಾರ್‌ಸೈಕಲ್ 298 cc V-ಟ್ವಿನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 8,500 rpm ನಲ್ಲಿ 29.1 Bhp ಮತ್ತು 6,500 rpm ನಲ್ಲಿ 26.5 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ವಿಶೇಷವೆಂದರೆ ಇದು ಚೈನ್ ಬದಲಿಗೆ ಬೆಲ್ಟ್ ಫೈನಲ್ ಡ್ರೈವ್ ಹೊಂದಿದೆ. ಇದು ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಮಿಶ್ರಲೋಹದ ವೀಲ್ ಗಳೊಂದಿಗೆ ಬರುತ್ತದೆ. ಬೈಕ್‌ನ ಎರಡೂ ತುದಿಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಇದು ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಅನ್ನು ಹೊಂದಿದೆ.


ಇದನ್ನೂ ಓದಿ-SBI ನ 45 ಕೋಟಿ ಗ್ರಾಹಕರಿಗೊಂದು ಮಹತ್ವದ ಮಾಹಿತಿ, ತಪ್ಪದೆ ತಿಳಿದುಕೊಳ್ಳಿ


ತೂಕದ ಬಗ್ಗೆ ಹೇಳುವುದಾದರೆ, 300 ಸಿಸಿ ಸೆಗ್ಮೆಂಟ್ ಬಾಬರ್ ಬೈಕ್ ಗಳಲ್ಲಿ ಇದು ತುಂಬಾ ಭಾರವನ್ನು ಹೊಂದಿಲ್ಲ. ಇದರ ತೂಕ ಕೇವಲ 167 ಕೆಜಿ. ಕಂಪನಿಯು ಸೀಟ್ ಎತ್ತರವನ್ನು 690 ಎಂಎಂ ನಲ್ಲಿ ಇರಿಸಿದೆ. ಅಂದರೆ, ಕಡಿಮೆ ಎತ್ತರದ ಜನರು ಸಹ ಇದನ್ನು ಸುಲಭವಾಗಿ ಓಡಿಸಬಹುದು. ಇದು ಮುಂಭಾಗದಲ್ಲಿ 120mm ಟ್ರಾವೆಲ್ ಜೊತೆಗೆ USD ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು 42mm ಟ್ರಾವೆಲ್ ನೊಂದಿಗೆ ಹಿಂಭಾಗದಲ್ಲಿ ಆಯಿಲ್ ಡ್ಯಾಂಪ್ಡ್ ಟೆಲಿಸ್ಕೋಪಿಕ್ ಕಾಯಿಲ್ ಸ್ಪ್ರಿಂಗ್‌ಗಳನ್ನು ಹೊಂದಿದೆ. ಕಿವೇ ಇಂಡಿಯಾ ಇದೀಗ ಈ ಮೋಟಾರ್‌ಸೈಕಲ್ ನ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ ಮತ್ತು ಬೈಕ್ ನ ವಿತರಣೆಗಳು ಸೆಪ್ಟೆಂಬರ್ 2022 ರಲ್ಲಿ ಪ್ರಾರಂಭವಾಗಲಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.