Ratan Tata in Bollywood :ಉದ್ಯಮಿ ರತನ್ ಟಾಟಾ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.ಅನಾರೋಗ್ಯದ ನಿಮಿತ್ತ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೆಲಕಾಲ ದಾಖಲಾಗಿದ್ದರು. ರತನ್ ಟಾಟಾ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ವ್ಯಾಪಾರ ವ್ಯವಹಾರದಲ್ಲಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದ ರತನ್ ಟಾಟಾ ಸಿನಿರಂಗದಲ್ಲಿಯೂ ಆಸಕ್ತಿ ಹೊಂದಿದ್ದರು. ರತನ್ ಟಾಟಾ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದರು ಎನ್ನುವ ವಿಚಾರ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇಂದು ನಾವು ರತನ್ ಟಾಟಾ ನಿರ್ಮಿಸಿದ ಸಿನಿಮಾದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ರತನ್ ಟಾಟಾ ನಿರ್ಮಾಣದ ಮೊದಲ ಮತ್ತು ಕೊನೆಯ ಚಿತ್ರ ಯಾವುದು ನೋಡೋಣ. 


COMMERCIAL BREAK
SCROLL TO CONTINUE READING

ರತನ್ ಟಾಟಾ ಅವರಿಗೂ ಸಿನಿಮಾಗಳಲ್ಲಿ ಆಸಕ್ತಿ ಇತ್ತು ಬಹುತೇಕರಿಗೆ ಗೊತ್ತಿಲ್ಲದ ಸತ್ಯ. ಸಿನಿ ಜಗತ್ತಿನ ಆಸಕ್ತಿಯ ಕಾರಣದಿಂದಲೇ ಅವರು ಸಿನಿಮಾ ನಿರ್ಮಾಣದಲ್ಲಿಯೂ ಅದೃಷ್ಟ ಪರೀಕ್ಷಿಸಿದ್ದರು.  


ಇದನ್ನೂ ಓದಿ : ದೊಡ್ಡ ಕಂಪನಿಯ ಆಫರ್ ತಿರಸ್ಕರಿಸಿ.. ʼಈʼ ಖ್ಯಾತ ವ್ಯಕ್ತಿಯಿಂದ ಬಿಜಿನೆಸ್‌ ಸಾಮ್ರಾಜ್ಯವನ್ನೇ ನಿರ್ಮಿಸಿದ್ರು ರತನ್ ಟಾಟಾ! ಅಷ್ಟಕ್ಕೂ ಅವರ್ಯಾರು ಗೊತ್ತೇ?


2004 ರಲ್ಲಿ ರತನ್ ಟಾಟಾ ಚಿತ್ರ ನಿರ್ಮಾಣಕ್ಕೆ ಇಳಿದಿದ್ದರು. ಈ ಚಿತ್ರವನ್ನು ಟಾಟಾ ಇನ್ಫೋಮೀಡಿಯಾ ಬ್ಯಾನರ್ ಅಡಿಯಲ್ಲಿ ಉದ್ಯಮಿ ರತನ್ ಟಾಟಾ ನಿರ್ಮಿಸಿದ್ದಾರೆ. ವಿಕ್ರಮ್ ಭಟ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.ಬಾಲಿವುಡ್ ನ ಹಲವು ದೊಡ್ಡ ತಾರೆಯರು ಇದರಲ್ಲಿ ನಟಿಸಿದ್ದರು.ಆದರೆ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡುವಲ್ಲಿ ವಿಫಲವಾಯಿತು. ಹೌದು ರತನ್ ಟಾಟಾ ನಿರ್ಮಾಣದ ಮೊದಲ ಚಿತ್ರ ‘ಐತ್‌ಬಾರ್‌’. ಅಮಿತಾಬ್ ಬಚ್ಚನ್ ಜೊತೆಗೆ ಬಿಪಾಶಾ ಬಸು ಮತ್ತು ಜಾನ್ ಅಬ್ರಹಾಂ ಈ ಸಿನಿಮದ ಮುಖ್ಯ ಭೂಮಿಕೆಯಲ್ಲಿದ್ದರು.


ಅಮೇರಿಕನ್ ಚಲನಚಿತ್ರ 'ಫಿಯರ್'ನಿಂದ ಸ್ಫೂರ್ತಿ ಪಡೆದು ನಿರ್ಮಿಸಿದ ಚಿತ್ರ ಇದಾಗಿತ್ತು. ಈ ಚಿತ್ರದಲ್ಲಿ ಬಿಪಾಶಾ ಬಸು ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬಿಗ್ ಬಿ ಅವರ ತಂದೆಯಾಗಿ ನಟಿಸಿದ್ದಾರೆ.ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮತ್ತು ಜಾನ್ ಅಬ್ರಹಾಂ ನಡುವೆ ಸಾಕಷ್ಟು ಫೈಟಿಂಗ್ ದೃಶ್ಯಗಳಿವೆ. 


ಇದನ್ನೂ ಓದಿ : ತಮ್ಮ ಕಂಪನಿಯಲ್ಲೇ ಉದ್ಯೋಗಕ್ಕಾಗಿ 'ರೆಸ್ಯೂಮ್' ರೆಡಿ ಮಾಡಿದ್ದರು ರತನ್‌ ಟಾಟಾ! ಘಟನೆಯ ಹಿಂದಿನ ಸತ್ಯ ಏನು ಗೊತ್ತಾ..?


ರತನ್ ಟಾಟಾ ಅವರು ಈ ಚಿತ್ರದಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. ಆದರೆ ಅವರ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ಮಾಧ್ಯಮ ವರದಿಗಳ ಪ್ರಕಾರ, ಈ ಚಿತ್ರವು ಭಾರತದಲ್ಲಿ 4.25 ಕೋಟಿ ರೂ ಕಲೆಕ್ಷನ್ ಮಾಡಿದ್ದರೆ, ವಿಶ್ವಾದ್ಯಂತ 7.96 ಕೋಟಿ ರೂ.ಗಳಿಸಿತ್ತು. ಅಂದರೆ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಫ್ಲಾಪ್ ಆಗಿತ್ತು. ಈ ಚಿತ್ರಕ್ಕೆ ಮಾಡಿದ ಖರ್ಚು ಕೂಡಾ ಹಿಂದಕ್ಕೆ ಪಡೆಯುವುದು ಸಾಧ್ಯವಾಗಲಿಲ್ಲ. 


ಈ ಸಿನಿಮಾದಿಂದ ಕೈ ಸುಟ್ಟುಕೊಂಡ ರತನ್ ಟಾಟಾ ಮತ್ತೆ ಸಿನಿಮಾ ನಿರ್ಮಾಣದತ್ತ ತಲೆ ಹಾಕಲೇ ಇಲ್ಲ. ಹಾಗಾಗಿ ಅವರ ನಿರ್ಮಾಣದ ಮೊದಲ ಮತ್ತು ಕೊನೆಯ ಚಿತ್ರ  ಐತ್‌ಬಾರ್‌.   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.