Ratan Tata : ಕೋಟ್ಯಾಂತರ ಭಾರತೀಯರಿಗೆ ರೋಲ್ ಮಾಡೆಲ್ ಆಗಿರುವ ರತನ್ ಟಾಟಾ ಅವರು ಟಾಟಾ ಗ್ರೂಪ್ ನ ಅದ್ಬುತ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ. ಹಾಗಾದರೆ ಬಿಲಿಯನೇರ್ ಆದ ಟಾಟಾ ಅವರಿಗೆ ಯಾಕೆ ಮದುವೆಯಾಗಿಲ್ಲ? ಅವರಿಗೆ ಪ್ರೀತಿಯಾಗಿಲ್ವಾ? ರತನ್ ಟಾಟಾ ಅವರ ಸಾಧನೆ ಬಿಟ್ಟು ವೈಯಕ್ತಿಕ ಜೀವನದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.
ರತನ್ ಟಾಟಾ ಅವರು ಒಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಜೀವನ ಸಂತೋಷಕರವಾಗಿತ್ತು ಎಂದಿದ್ದರು. ಅವರ ಪೋಷಕರು ವಿಚ್ಚೇಧನ ಪಡೆದಾಗ ಟಾಟಾ ಸಾಕಷ್ಟು ನೋವನ್ನು ಅನುಭವಿಸಿದ್ದರಂತೆ. ರತನ್ ಟಾಟಾ ಅವರು ಏಂಜಲೀಸ್ ನಲ್ಲಿ ಇದ್ದಾಗ ಪ್ರೀತಿಯಲ್ಲಿದ್ದರಂತೆ. ಆದರೆ ಅಜ್ಜಿಯ ಅರೋಗ್ಯ ಸಮಸ್ಯೆಯ ಕಾರಣ ಅವರು ಭಾರತಕ್ಕೆ ಹಿಂದಿರುಗ ಬೇಕಾಗಿತ್ತು.
ಅವರು ಪ್ರೀತಿಸಿದ ಹುಡುಗಿ ಅವರನ್ನು ಭಾರತದಲ್ಲಿ ಬೇಟಿ ಮಾಡಲು ಸಿದ್ದರಾಗಿದ್ದರಂತೆ ಆದರೆ ಆಗ ಭಾರತ -ಚೀನಾ ಯುದ್ಧ ಪ್ರಾರಂಭಾಗಿದ್ದರಿಂದ ಅವರ ಪೋಷಕರು ಅವಳಿಗೆ ಅವಕಾಶ ನೀಡಲಿಲ್ಲ. ಇದರಿಂದ ರತನ್ ಟಾಟಾ ಅವರು ತಾವು ಮನಸಾರೆ ಪ್ರೀತಿಸಿದ ಹುಡುಗಿಯಿಂದ ದೂರವಾಗಿದ್ದಾರೆ.
ನನಗೆ ಜೀವನ ಸಂಗಾತಿ ಇಲ್ಲವೆಂದು ನಾನು ಬೇಸರದಲ್ಲಿಲ್ಲ. "ನಾನು ನಿರಂತರವಾಗಿ ಕೆಲಸದಲ್ಲಿ ತೊಡಗಿರುತ್ತಿದ್ದೆ..ಪ್ರಯಾಣಿಸುತ್ತಿದ್ದೆ. ನನಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿಲ್ಲ. ಆದರೆ ನಾನು ಹಿಂತಿರುಗಿ ನೋಡಿದಾಗ ಯಾವುದಕ್ಕು ಬೇಸರವಾಗುವುದಿಲ್ಲ" ಎಂದು ರತನ್ ಟಾಟಾ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.