ನವದೆಹಲಿ : ನೀವು ವಾಹನವನ್ನು ಖರೀದಿಸಲು ಯೋಜಿಸುತ್ತಿದ್ದರೆ ಅಥವಾ ಈಗಾಗಲೇ ಖರೀದಿಸಿದ್ದರೆ, ಅದಕ್ಕಾಗಿ ವಾಹನ ವಿಮಾ ಪಾಲಿಸಿಯನ್ನು (Vehicle insurance) ತೆಗೆದುಕೊಳ್ಳುವುದು ಅವಶ್ಯಕ. ಯಾವುದೇ ರೀತಿಯ ಅಪಘಾತ, ಕಳ್ಳತನಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಭರಿಸಲು ಇದು ನಿಮಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ವಾಹನ ವಿಮಾ ಪಾಲಿಸಿಯನ್ನು ಖರೀದಿಸುವಾಗ ಅನೇಕ ಬಾರಿ ಕ್ಲೈಮ್ (insurance claim) ತಿರಸ್ಕೃತಗೊಳ್ಳುತ್ತದೆ. ಪಾಲಿಸಿಯನ್ನು ಖರೀದಿಸುವಾಗ ಅಗತ್ಯ ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಪಾಲಿಸಿಯ ನಿಯಮಗಳು (New insurance rules) ಗೊತ್ತಿಲ್ಲದಿದ್ದರೆ, ಹಲವು ಬಾರಿ ಅನಾಹುತಗಳಿಗೆ ಕಾರಣವಾಗಬಹುದು. ವಿಮಾ ಕಂಪನಿಗಳು ನಿಮ್ಮ ಕ್ಲೈಮ್ ಅನ್ನೇ ತಿರಸ್ಕರಿಸಬಹುದು.


COMMERCIAL BREAK
SCROLL TO CONTINUE READING

ಕಾರು ವಿಮಾ ಪಾಲಿಸಿಯ ಅಡಿಯಲ್ಲಿ ಯಾವ ದಾಖಲೆಗಳು ಮತ್ತು ಷರತ್ತುಗಳು ಅಗತ್ಯ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತೇವೆ. ಇದರಿಂದ ವಿಮಾ ಕಂಪನಿಗಳು ನಿಮ್ಮ ವಿಮಾ ಕ್ಲೈಮ್  (Insurance claim) ಅನ್ನು ತಕ್ಷಣವೇ ಇತ್ಯರ್ಥಪಡಿಸಬಹುದು. ಒಂದು ವೇಳೆ ವಿಮಾ ಕಂಪನಿಗಳು ಕ್ಲೈಮ್ ಅನ್ನು ಅನುಮೋದಿಸದಿದ್ದರೆ, ಹಾನಿಗೊಳಗಾದ ಕಾರನ್ನು ಸರಿಪಡಿಸಲು ನಿಮ್ಮ ಸ್ವಂತ ಹಣವನ್ನು ಖರ್ಚು ಮಾಡಬೇಕಾಗಿ ಬರುತ್ತದೆ. 


ಇದನ್ನೂ ಓದಿ : Changes From 1st October: ಅಕ್ಟೋಬರ್ 1ರಿಂದ ಬದಲಾಗಲಿವೆ ಹಲವು ನಿಯಮ, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ


ಖಾಸಗೀ ಕಾರನ್ನು ವಾಣಿಜ್ಯ ಕಾರಣಗಳಿಗೆ ಬಳಸುವುದು :
ಮೋಟಾರು ವಾಹನ ಕಾಯಿದೆಯಡಿ, ವಾಣಿಜ್ಯ ವಾಹನಗಳಿಗೆ ವಿಮಾ ರಕ್ಷಣೆ ಮತ್ತು ಕಾನೂನುಗಳು ಭಿನ್ನವಾಗಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ವೈಯಕ್ತಿಕ ಕಾರನ್ನು ವಾಣಿಜ್ಯ ಕಾರಣಗಳಿಗೆ ಬಳಸಿದರೆ, ಅಪಘಾತದ ಸಂದರ್ಭದಲ್ಲಿ, ವಿಮಾ ಕಂಪನಿಗಳು (insurance company) ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಬಹುದು.


ಕಾರನ್ನು ಮಾರ್ಪಡಿಸುವುದು : 
ಪಾಲಿಸಿ ಅವಧಿಯಲ್ಲಿ ನೀವು ನಿಮ್ಮ ಕಾರಿನಲ್ಲಿ ಬಿಡಿಭಾಗಗಳನ್ನು ಮಾರ್ಪಡಿಸಿದ್ದಲ್ಲಿ ಅಥವಾ ಹಾಕಿದ್ದರೆ, ಪಾಲಿಸಿಯನ್ನು ನವೀಕರಿಸುವಾಗ ವಿಮಾದಾರರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಇಲ್ಲವಾದರೆ, ವಿಮಾ ಕಂಪನಿಯು ಅದನ್ನು ಪರಿಶೀಲಿಸಿದ ನಂತರ  ಹೆಚ್ಚುವರಿ ಪರಿಕರಗಳನ್ನು ಒಳಗೊಂಡಿರುವುದರಿಂದ ನೀವು ಕಾರ್ ವಿಮೆಯ (Car insurance) ಲಾಭವನ್ನು ಪಡೆಯದೇ ಇರಬಹುದು. ಹಾಗಾಗಿ ವಿಮೆ ಮಾಡಿಸುವ ಸಂದರ್ಭದಲ್ಲಿ ಈ ಬಗ್ಗೆ  ಮಾಹಿತಿ ಇರಲಿ.


ಇದನ್ನೂ ಓದಿ : 7th Pay Commission: Family Pension ವ್ಯಾಪ್ತಿ ವಿಸ್ತರಿಸಿದ ಸರ್ಕಾರ, ಎಷ್ಟು ಪಟ್ಟು ಜಾಸ್ತಿ ಸಿಗಲಿದೆ ಪೆನ್ಶನ್ ಗೊತ್ತಾ


ಸುಳ್ಳು ಹೇಳಿ  ಕ್ಲೈಂ ಮಾಡುವುದು ಸರಿಯಲ್ಲ : 
ವಿಮಾ ಪಾಲಿಸಿಯನ್ನು ಖರೀದಿಸುವಾಗ, ಜನರು ಹಣವನ್ನು ಉಳಿಸಲು ಕಾರಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಮರೆಮಾಡುತ್ತಾರೆ. ಅಥವಾ ಅನೇಕ ಜನರು ನಕಲಿ ಕ್ಲೈಂ  (Fake claim) ಸಹ ಮಾಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ಎರಡೂ ಕಾರಣಗಳಿಗಾಗಿ ಕ್ಲೈಮ್ ತಿರಸ್ಕರಿಸಲ್ಪಡುತ್ತದೆ. 


ಸಮಯಕ್ಕೆ ಪ್ರೀಮಿಯಂ ಪಾವತಿಸಿ :
ನೀವು ಸಮಯಕ್ಕೆ ಸರಿಯಾಗಿ ಪ್ರೀಮಿಯಂ ಪಾವತಿಸದಿದ್ದರೆ, ನಿಮ್ಮ ಪಾಲಿಸಿ (Policy) ಅಮಾನ್ಯವಾಗುತ್ತದೆ. ಆದಾಗ್ಯೂ, ಭಾರತದ ಹೆಚ್ಚಿನ ಕಂಪನಿಗಳು 90 ದಿನಗಳ ಕಾಲಾವಕಾಶವನ್ನು ನೀಡುತ್ತವೆ. ಈ ಅವಧಿಯಲ್ಲಿ ಪಾಲಿಸಿಯನ್ನು ನವೀಕರಿಸದಿದ್ದರೆ, ನೀವು ಕಾರು ವಿಮೆಯ ಎಲ್ಲಾ ಪ್ರಯೋಜನಗಳನ್ನು ಕಳೆದುಕೊಳ್ಳುತ್ತೀರಿ.


ಚಾಲನಾ ಪರವಾನಗಿ ಕಡ್ಡಾಯ : 
ಚಾಲನಾ ಪರವಾನಗಿ ಇಲ್ಲದೆ ಕಾರನ್ನು ಚಾಲನೆ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗಿರುತ್ತದೆ. ಇದರ ಹೊರತಾಗಿಯೂ, ಇಂದಿಗೂ ಸಹ, ಸಾವಿರಾರು ಜನರು ದೇಶದಲ್ಲಿ ಪರವಾನಗಿ ಇಲ್ಲದೆ ಕಾರುಗಳನ್ನು ಓಡಿಸುತ್ತಾರೆ. ನೀವು ಡ್ರೈವಿಂಗ್ ಲೈಸೆನ್ಸ್ (Driving License) ಇಲ್ಲದೆ ಕಾರನ್ನು ಚಲಾಯಿಸುತ್ತಿದ್ದು, ನಿಮ್ಮ ಕಾರು ಅಪಘಾತಕ್ಕೀಡಾದರೆ ವಿಮಾ ಕಂಪನಿ ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸುತ್ತದೆ.


ಇದನ್ನೂ ಓದಿ : National Digital Health Mission: ಈಗ ಪ್ರತಿಯೊಬ್ಬರಿಗೂ ಸಿಗಲಿದೆ ಒಂದು ಅನನ್ಯ ಆರೋಗ್ಯ ID


ಸ್ಥಳೀಯ ಮೆಕ್ಯಾನಿಕ್‌ನಿಂದ ಕಾರನ್ನು ದುರಸ್ತಿ ಮಾಡಬೇಡಿ :
ಸ್ಥಳೀಯ ಮೆಕ್ಯಾನಿಕ್‌ನಿಂದ ವಾಹನವನ್ನು ದುರಸ್ತಿ ಮಾಡಿಸಲು ಹೋಗಬೇಡಿ. ಅಪಘಾತ ಅಥವಾ ಇತರ ಯಾವುದೇ ಕಾರಣದಿಂದ ಕಾರು ಹಾಳಾಗಿದ್ದರೆ, ಅದನ್ನು ನೀವೇ ದುರಸ್ತಿ ಮಾಡಬೇಡಿ ಅಥವಾ ಸ್ಥಳೀಯ ಮೆಕ್ಯಾನಿಕ್ ಸಹಾಯವನ್ನು ಪಡೆಯಬೇಡಿ. ಇದನ್ನು ಮಾಡುವುದರಿಂದ ವಿಮಾ ಕಂಪನಿಗಳು ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.