ನವದೆಹಲಿ: Cyber Insurance - ಕರೋನಾ ಸಾಂಕ್ರಾಮಿಕ ಸಮಯದಲ್ಲಿ (Covid-19 Pandemic) ಆನ್‌ಲೈನ್ ವಂಚನೆ ಪ್ರಕರಣಗಳಲ್ಲಾದ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ವಿಮಾ (Insurance) ನಿಯಂತ್ರಕ IRDAI ಸೈಬರ್ ವಿಮಾ ವ್ಯಾಪ್ತಿಯನ್ನು ಹೆಚ್ಚಿಸಿದೆ. IDRAI ಸೈಬರ್ (Cyber Security) ಇನ್ಶೂರೆನ್ಸ್ ಅಡಿಯಲ್ಲಿ ಬರುವ ವಿಷಯಗಳ ಕುರಿತು ಸಂಪೂರ್ಣ ಸ್ಪಷ್ಟೀಕರಣ ನೀಡಿದೆ. ಸೈಬರ್ ವಂಚನೆ, ಅನಧಿಕೃತ ವಹಿವಾಟುಗಳು, ಇಮೇಲ್ ಸ್ಪೂಫಿಂಗ್ ನಿಂದ ವಿತ್ತೀಯ ನಷ್ಟದ ವಿರುದ್ಧ ರಕ್ಷಣೆ ನೀಡಲುIRDAI ವಿಮಾ ಕಂಪನಿಗಳಿಗೆ ನಿರ್ದೇಶನ ನೀಡಿದೆ.
ಸೈಬರ್ ಇನ್ಸೂರೆನ್ಸ್ ಮೇಲೆ IRDAI ಹೊಸ ನಿರ್ದೇಶನ
ಐಆರ್ಡಿಎ ಪ್ರಕಾರ, ಇನ್ಮುಂದೆ ಸೈಬರ್ ವಿಮೆಯ (Cyber Insurance Policy) ವ್ಯಾಪ್ತಿಯನ್ನು ಹೆಚ್ಚಿಸಲಾಗುತ್ತಿದೆ. ಇದರಲ್ಲಿ, ಕಂಪನಿಗಳು ಸೈಬರ್ ವಿಮಾ ಪಾಲಿಸಿಯನ್ನು ಸರಳಗೊಳಿಸಲಿವೆ. ಐಆರ್ಡಿಎ ಪ್ರಕಾರ, ಕರೋನಾದ ನಂತರ ಸೈಬರ್ ವಂಚನೆ ಘಟನೆಗಳಲ್ಲಿ ವ್ಯಾಪಕ ಹೆಚ್ಚಳ ಕಂಡುಬಂದಿದೆ. ವಾಸ್ತವದಲ್ಲಿ ಹೆಚ್ಚಿದ ಡಿಜಿಟಲ್ ವಹಿವಾಟಿನ ಕಾರಣ ಸೈಬರ್ ಅಪಾಯ ಹೆಚ್ಚಾಗಿದೆ.
ಸೈಬರ್ ಹಾನಿಯನ್ನು ಒಟ್ಟು 4 ವಿಭಾಗಗಳಲ್ಲಿ ವಿಂಗಡಣೆ
ಫಸ್ಟ್ ಪಾರ್ಟಿ ಹಾನಿ
ಹಣಕಾಸಿನ ನಷ್ಟ, ವ್ಯವಹಾರದಲ್ಲಿ ಅಡಚಣೆಯಿಂದ ನಷ್ಟ
ರೆಗ್ಯೂಲೆಟರಿ ಆಕ್ಷನ್
ನಿಯಂತ್ರಕ ತನಿಖೆ ಮತ್ತು ಕ್ರಿಯೆಯ ವೆಚ್ಚಗಳು, ದಂಡಗಳು ಮತ್ತು ಇತರ ಕಾನೂನು ವೆಚ್ಚಗಳು
ಕ್ರೈಸಿಸ್ ಮ್ಯಾನೇಜ್ಮೆಂಟ್ ವೆಚ್ಚ
ವಿಧಿವಿಜ್ಞಾನ ತಜ್ಞರ ರಕ್ಷಣೆ, ಖ್ಯಾತಿಯ ವೆಚ್ಚಗಳ ನಷ್ಟ, ಮಾಹಿತಿ ತೆಗೆಯುವಿಕೆ, ಸಮಾಲೋಚನೆ ವೆಚ್ಚಗಳು
ಲಯಾಬಲಿಟಿ ಕ್ಲೇಮ್
ಗೌಪ್ಯತೆಯ ನಷ್ಟ ಅಥವಾ ಡೇಟಾ ಉಲ್ಲಂಘನೆ, ಮಾನನಷ್ಟ, ಐಪಿಆರ್ ಉಲ್ಲಂಘನೆ
ಸೈಬರ್ ಇನ್ಸುರೆನ್ಸ್ ನಲ್ಲಿ ಯಾವ ಯಾವ ರಕ್ಷಣೆ ಸಿಗಲಿದೆ?
>> ಹಣ ಕಳ್ಳತನ ಮತ್ತು ಗುರುತಿನ ಕಳ್ಳತನದಿಂದ ನಷ್ಟ
>> ಅನಧಿಕೃತ ಆನ್‌ಲೈನ್ ವಹಿವಾಟು
>> ಇಮೇಲ್ ವಂಚನೆ
>> ಸಾಮಾಜಿಕ ಮಾಧ್ಯಮದ ಮೂಲಕ ಮೂರನೇ ವ್ಯಕ್ತಿಯ ಹಾನಿ ಮಾಡಲಾಗಿದೆ
>> ಕದ್ದ ದತ್ತಾಂಶ ಮರುಪಡೆಯುವಿಕೆ
>> ಫಿಶಿಂಗ್ ದಾಳಿಯಿಂದ ಉಂಟಾಗುವ ಹಾನಿಗೆ ಪರಿಹಾರ
>> ಸೈಬರ್ ಸುಲಿಗೆಯಿಂದ ರಕ್ಷಣೆ
>> ಡೇಟಾ ಉಲ್ಲಂಘನೆ ಮತ್ತು ಗೌಪ್ಯತೆ ಉಲ್ಲಂಘನೆಯಿಂದ ರಕ್ಷಣೆ
ಇದನ್ನೂ ಓದಿ-Facebook Smart ಕನ್ನಡಕ ಬಿಡುಗಡೆ, ಯಾವುದೇ ಅಡೆತಡೆ ಇಲ್ಲದೆ ಈ ರೀತಿ ವಿಡಿಯೋ ರೆಕಾರ್ಡಿಂಗ್ ಮಾಡಿ
ನಿಮ್ಮ ಹಕ್ಕು ಮಂಡನೆ ಯಾವಾಗ ತಿರಸ್ಕೃತಗೊಳ್ಳಲಿದೆ?
ಸೈಬರ್ ವಿಮಾ ಕ್ಲೈಮ್ ತಿರಸ್ಕರಿಸುವ ಬಗ್ಗೆಯೂ ಕೂಡ ಐಆರ್ಡಿಎಯಿಂದ ಸ್ಪಷ್ಟ ಸೂಚನೆಗಳಿವೆ. ಇದರ ಪ್ರಕಾರ, ಸೈಬರ್ ವಂಚನೆಯ 24 ಗಂಟೆಗಳ ಒಳಗೆ ಕಾರ್ಡ್ ಅನ್ನು ನಿರ್ಬಂಧಿಸದಿದ್ದರೆ ಕ್ಲೈಮ್ ಅನ್ನು ತಿರಸ್ಕರಿಸಲಾಗುತ್ತದೆ. ಇದಲ್ಲದೇ, ನೀವು ಬ್ಯಾಂಕಿನಿಂದ ಎಸ್‌ಎಂಎಸ್ ಮತ್ತು ಒಟಿಪಿಗೆ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ನೀಡದಿದ್ದರೆ ನಿಮ್ಮ ಸೈಬರ್ ವಿಮಾ ಕ್ಲೈಮ್ ತಿರಸ್ಕೃತಗೊಳ್ಳಲಿದೆ.
ಇದನ್ನೂ ಓದಿ-OnePlus smartphones: ಭಾರತದಲ್ಲಿ ಶೀಘ್ರವೇ 20 ಸಾವಿರ ರೂ.ಗಿಂತ ಕಡಿಮೆ ಬೆಲೆಯ ಒನ್‌ಪ್ಲಸ್ ಸ್ಮಾರ್ಟ್‌ಫೋನ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.