7th Pay Commission: Family Pension ವ್ಯಾಪ್ತಿ ವಿಸ್ತರಿಸಿದ ಸರ್ಕಾರ, ಎಷ್ಟು ಪಟ್ಟು ಜಾಸ್ತಿ ಸಿಗಲಿದೆ ಪೆನ್ಶನ್ ಗೊತ್ತಾ

7th Pay Commission: ಸರ್ಕಾರ Family Pension ವ್ಯಾಪ್ತಿಯನ್ನು 2.5 ಪಟ್ಟು ಹೆಚ್ಚಿಸಿದೆ. ಹೌದು, ಸರ್ಕಾರ ಫ್ಯಾಮಿಲಿ ಪೆನ್ಷನ್ ವ್ಯಾಪ್ತಿಯನು 45,000 ರೂಗಳಿಂದ 1.25 ಲಕ್ಷ ರೂ./ತಿಂಗಳಿಗೆ ಹೆಚ್ಚಿಸಿದೆ.

Written by - Nitin Tabib | Last Updated : Sep 27, 2021, 11:54 AM IST
  • ಫ್ಯಾಮಿಲಿ ಪೆನ್ಷನ್ ಲಿಮಿಟ್ ನಲ್ಲಿ ಹೆಚ್ಚಳ ಮಾಡಿದ ಸರ್ಕಾರ
  • 45 ಸಾವಿರ ರೂ.ಗಳ ಜಾಗದಲ್ಲಿ ಇನ್ಮುಂದೆ ಗರಿಷ್ಟ 1.25 ಲಕ್ಷ ರೂ. ಪೆನ್ಷನ್ ಸಿಗಲಿದೆ.
  • ಆದರೆ, ಈ ಪೆನ್ಷನ್ ಪಡೆಯಲು ಕೆಲ ನಿಯಮಗಳನ್ನು ಗೊತ್ತುಪಡಿಸಲಾಗಿದೆ.
7th Pay Commission: Family Pension ವ್ಯಾಪ್ತಿ ವಿಸ್ತರಿಸಿದ ಸರ್ಕಾರ, ಎಷ್ಟು ಪಟ್ಟು ಜಾಸ್ತಿ ಸಿಗಲಿದೆ ಪೆನ್ಶನ್ ಗೊತ್ತಾ title=
7th Pay Commission: Family Pension (File Photo)

ನವದೆಹಲಿ: 7th Pay Commission: ಸರ್ಕಾರಿ ನೌಕರರ (Central Government Employees) ಪಾಲಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಪತಿ ಹಾಗೂ ಪತ್ನಿ ಒಂದು ವೇಳೆ ಇಬ್ಬರು ಕೇಂದ್ರ ಸರ್ಕಾರಿ ನೌಕರಿಯಲ್ಲಿ ಇದ್ದರೆ ಹಾಗೂ ಅವರು Central Civil Services (CCS-Pension), 1972 ನಿಯಮಗಳ ವ್ಯಾಪ್ತಿಗೆ ಒಳಪಡುತ್ತಿದ್ದರೆ, ಅವರ ಸಾವಿನ ಬಳಿಕ ಅವರ ಮಕ್ಕಳಿಗೆ ಎರಡು ಪ್ಯಾಮಿಲಿ ಪೆನ್ಷನ್ ಗಳು ಸಿಗಲಿವೆ. ಈ ಪೆನ್ಷನ್ ನ ಗರಿಷ್ಟ ಮಿತಿ 1.25 ಲಕ್ಷ ರೂ.ಗಳು ಆಗಿರಲಿದೆ. ಆದರೆ ಇದಕ್ಕಾಗಿ ಕೆಲ ನಿಯಮಗಳು (New Pension Rule) ಹಾಗೂ ಷರತ್ತುಗಳಿವೆ. ಹಾಗಾದರೆ ಬನ್ನಿ ನಿಯಮಗಳನ್ನು ತಿಳಿದುಕೊಳ್ಳೋಣ.

ಕೇಂದ್ರ ಸರ್ಕಾರಿ ನೌಕರರ ಪೆನ್ಶನ್ ಕುರಿತು ಹೊಸ ನಿಯಮಾವಳಿ (DA Hike) 
ಕೇಂದ್ರ ಸರ್ಕಾರ ತನ್ನ ನೌಕರರ ಜೊತೆಗೆ ಅವರ ಕುಟುಂಬ ಸದಸ್ಯರಿಗೂ ಕೂಡ ಸಾಮಾಜಿಕ ಭದ್ರತೆಯನ್ನು ಕಲ್ಪಿಸುತ್ತದೆ. Central Civil Services (CCS-Pension), 1972 ನಿಯಮ 54ರ ಸಬ್ ರೂಲ್ 11 ರ ಅಡಿ ಒಂದು ವೇಳೆ ಪತಿ ಹಾಗೂ ಪತ್ನಿ ಇಬ್ಬರೂ ಸರ್ಕಾರಿ ನೌಕರಿಯಲ್ಲಿದ್ದರೆ ಹಾಗೂ ಅವರು ಈ ನಿಯಮದ ಅಡಿ ಬರುತ್ತಿದ್ದರೆ, ಅವರ ಸಾವಿನ ಬಳಿಕ ಅವರ ಮಕ್ಕಳು ತಂದೆ-ತಾಯಿ ಇಬ್ಬರ ಪಾಲಿನ ಪೆನ್ಷನ್ ಪಡೆಯಲು ಅರ್ಹತೆ ಪಡೆಯಲಿದ್ದಾರೆ.

ನಿಯಮಗಳ ಪ್ರಕಾರ ಸೇವೆಯ ವೇಳೆ ಅಥವಾ ನಿವೃತ್ತಿಯ ಬಳಿಕ ಯಾವುದೇ ಓರ್ವ ಪೋಷಕನ ಮೃತ್ಯು ಸಂಭವಿಸಿದ ಸಂದರ್ಭದಲ್ಲಿ ಪೆನ್ಷನ್ ಜೀವಿತ ಪೋಷಕ ಅಂದರೆ ಪತಿ ಅಥವಾ ಪತ್ನಿಗೆ ಸಿಗಲಿದೆ. ಇಬ್ಬರ ಮರಣದ ಬಳಿಕ ಮಾತ್ರವೇ ಆ ಪೆನ್ಷನ್ ಮಕ್ಕಳಿಗೆ ಸಿಗಲಿದೆ.

ಇದನ್ನೂ ಓದಿ-National Digital Health Mission: ಈಗ ಪ್ರತಿಯೊಬ್ಬರಿಗೂ ಸಿಗಲಿದೆ ಒಂದು ಅನನ್ಯ ಆರೋಗ್ಯ ID

ಈ ಮೊದಲು ಪೆನ್ಷನ್ ಮೇಲೆ ಈ ನಿಯಮ ಅನ್ವಯಿಸುತ್ತಿತ್ತು
ಈ ಮೊದಲು ಇಬ್ಬರು ಪೋಷಕರ ಮೃತ್ಯು ಸಂಭವಿಸಿದ ಸಂದರ್ಭದಲ್ಲಿ ರೂಲ್ 54ರ ಸಬ್ ರೂಲ್ 3 ರ ಪ್ರಕಾರ ಮಗು ಅಥವಾ ಮಕ್ಕಳಿಗೆ ಸಿಗುವ ಪೆನ್ಷನ್ ಗರಿಷ್ಠ ಮಿತಿ ರೂ.45,000ಗಳಾಗಿತ್ತು. ರೂಲ್ 54ರ ಸಬ್ ರೂಲ್ 2 ರ ಪ್ರಕಾರ ಇಬ್ಬರ ಪೆನ್ಷನ್ ಪ್ರತ್ಯೇಕ ಪ್ರತಿ ತಿಂಗಳು 27000 ಅನ್ವಯಿಸುತ್ತಿತ್ತು. 5000 ಹಾಗೂ 27000 ರೂ. ಪೆನ್ಷನ್ ಮಿತಿ ಆರನೇ ವೇತನ ಆಯೋಗದ ಪ್ರಕಾರ CCS ನಿಯಮ 54 (11)ರ ಅಡಿ ಗರಿಷ್ಟ 90,000 ಪ್ರತಿ ತಿಂಗಳ ಶೇ. 50 ಮತ್ತು ಶೇ.30 ದರದಲ್ಲಿ ಇರುತ್ತಿತ್ತು.

ಇದನ್ನೂ ಓದಿ-Gold Hallmarking Big Update: ಹಬ್ಬಗಳು ಆರಂಭವಾಗುವುದಕ್ಕು ಮುನ್ನ ಗೋಲ್ಡ್ ಹಾಲಮಾರ್ಕಿಂಗ್ ಕುರಿತು ಬಿಗ್ ಅಪ್ಡೇಟ್ ಪ್ರಕಟ

ಏಳನೇ ವೇತನ ಆಯೋಗದ ಶಿಫಾರಸ್ಸಿನ ಬಳಿಕ ಸರ್ಕಾರ ನೌಕರಿಯಲ್ಲಿ ಪೇಮೆಂಟ್ ಅನ್ನು ಮರುಪರಿಶೀಲಿಸಿ 2.5 ಲಕ್ಷ ಪ್ರತಿ ತಿಂಗಳು ನಿರ್ಧರಿಸಿದೆ. ಇದಾದ ಬಳಿಕ ಮಕ್ಕಳಿಗೆ ಸಿಗುವ ಪೆನ್ಷನ್ ಅನ್ನು ಕೂಡ ರಿವೈಸ್ ಮಾಡಲಾಗಿದೆ. Department of Pension & Pensioners Welfare (DoPPW) ಅಧಿಸೂಚನೆಯ ಪ್ರಕಾರ ಇಬ್ಬರ ಪೆನ್ಷನ್ ಮಿತಿಗಳಲ್ಲಿ ಬದಲಾವಣೆ ಮಾಡಿ ಈ ಪೆನ್ಷನ್ ಅನ್ನು ಗರಿಷ್ಟ 1.25 ಲಕ್ಷ ರೂ. ಹಾಗೂ 75 ಸಾವಿರ ರೂ.ಗಳಿಗೆ ಗೊತ್ತುಪಡಿಸಲಾಗಿದೆ.

ಇದನ್ನೂ ಓದಿ-ಫ್ಲಿಪ್‌ಕಾರ್ಟ್‌ Big Billion Days ಜೊತೆಗೆ Amazon ಪೈಪೋಟಿ : ಸೆಲ್ ದಿನಾಂಕ ಬದಲಾವಣೆ, ಮತ್ತಷ್ಟು ಡಿಸ್ಕೌಂಟ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News