ಈ ದಿಗ್ಗಜ ಕಂಪನಿಗಳನ್ನು ಟೇಕ್ ಓವರ್ ಮಾಡಲಿದೆ LIC!ಈಗ ಹೆಲ್ತ್ ಇನ್ಶುರೆನ್ಸ್ ನಲ್ಲಿಯೂ ಕಮಾಲ್ ಮಾಡಲು ಹೊರಟಿರುವ ಕಂಪನಿ
ಸಿಗ್ನಾ ಹೆಲ್ತ್ ಇನ್ಶೂರೆನ್ಸ್ ಮತ್ತು ಎಲ್ಐಸಿ ನಡುವೆ ಒಪ್ಪಂದವಾದರೆ ಜೀವ ವಿಮಾ ಕಂಪನಿಯು ಆರೋಗ್ಯ ವಿಮಾ ಕ್ಷೇತ್ರವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.
ದೇಶದ ಅತಿದೊಡ್ಡ ಜೀವ ವಿಮಾ ಕಂಪನಿ LIC ಆರೋಗ್ಯ ವಿಮಾ ಕ್ಷೇತ್ರವನ್ನು ಪ್ರವೇಶಿಸಲು ಯೋಜಿಸುತ್ತಿದೆ. ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರೋಗ್ಯ ವಿಮಾ ಕ್ಷೇತ್ರವನ್ನು ಪ್ರವೇಶಿಸಲು, ಕಂಪನಿಯು ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಶೂರೆನ್ಸ್‌ನ ಅರ್ಧ ಭಾಗ ಖರೀದಿಸಲು ಪ್ರಯತ್ನಿಸುತ್ತಿದೆ. ಈ ಒಪ್ಪಂದದ ಬೆಲೆ 4,000 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಸಿಗ್ನಾ ಹೆಲ್ತ್ ಇನ್ಶೂರೆನ್ಸ್ ಮತ್ತು ಎಲ್ಐಸಿ ನಡುವೆ ಒಪ್ಪಂದವಾದರೆ ಜೀವ ವಿಮಾ ಕಂಪನಿಯು ಆರೋಗ್ಯ ವಿಮಾ ಕ್ಷೇತ್ರವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಮಣಿಪಾಲ್ ಸಿಗ್ನಾ ಮಣಿಪಾಲ್ ಗ್ರೂಪ್ ಮತ್ತು ಸಿಗ್ನಾ ಕಾರ್ಪೊರೇಷನ್ ನಡುವಿನ ಜಂಟಿ ಉದ್ಯಮವಾಗಿದೆ.
ಮಣಿಪಾಲ್ ಎಜುಕೇಶನ್ ಮತ್ತು ಮೆಡಿಕಲ್ ಗ್ರೂಪ್ ಮತ್ತು ಅಮೇರಿಕಾ ಮೂಲದ ಸಿಗ್ನಾ ಕಾರ್ಪೊರೇಷನ್ ಆರೋಗ್ಯ ವಿಮೆ ಮಣಿಪಾಲ್ ಸಿಗ್ನಾದಲ್ಲಿ 37 ಪ್ರತಿಶತ ಪಾಲನ್ನು ಹೊಂದಿವೆ. ಬೆಂಗಳೂರು ಮೂಲದ ಮಣಿಪಾಲ್ ಎಜುಕೇಶನ್ ಗ್ರೂಪ್ ಆರೋಗ್ಯ ವಿಮಾ ಕಂಪನಿಯಲ್ಲಿ 51% ಪಾಲನ್ನು ಹೊಂದಿದ್ದರೆ, ಸಿಗ್ನಾ ಕಾರ್ಪೊರೇಷನ್ ಉಳಿದ 49% ಅನ್ನು ಹೊಂದಿದೆ. ಈ ಒಪ್ಪಂದವು ಅಂತಿಮಗೊಂಡರೆ, ಸರ್ಕಾರಿ ವಿಮಾ ಕಂಪನಿ ಎಲ್ಐಸಿಗೆ ತನ್ನ ಜೀವ ವಿಮಾ ಪೋರ್ಟ್ಫೋಲಿಯೊದಿಂದ ಪ್ರತ್ಯೇಕವಾಗಿ ವ್ಯವಹಾರ ಮಾಡಲು ಅವಕಾಶವನ್ನು ನೀಡುತ್ತದೆ. ದೇಶದ ವಿಮಾ ವಲಯದಲ್ಲಿ ಆರೋಗ್ಯ ವಿಮೆಯು ಶೇಕಡಾ 37 ರಷ್ಟು ಪಾಲನ್ನು ಹೊಂದಿದೆ.
ಇದನ್ನೂ ಓದಿ : ಚಿನ್ನದ ದರ ಇಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ !ದೊಡ್ಡ ಮಟ್ಟದಲ್ಲಿ ಕುಸಿಯುವುದು ಬಂಗಾರದ ಬೆಲೆ
ಈ ಉದ್ಯಮದಲ್ಲಿ 50% ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು LIC ಮಾತುಕತೆಗಳನ್ನು ಮುಂದಕ್ಕೆ ತೆಗೆದುಕೊಳ್ಳುತ್ತಿದೆ. ಆರಂಭಿಕ ಮಾತುಕತೆಗಳ ಪ್ರಕಾರ, ಮಣಿಪಾಲ್ ಗ್ರೂಪ್ ಮತ್ತು ಸಿಗ್ನಾ ಕಾರ್ಪೊರೇಶನ್ ವಿಮಾ ಕಂಪನಿಯಲ್ಲಿನ ತಮ್ಮ ಪಾಲನ್ನು ಪ್ರಮಾಣಾನುಗುಣವಾಗಿ ಕಡಿಮೆ ಮಾಡುತ್ತದೆ. ಈ ಒಪ್ಪಂದದಿಂದ ಆರೋಗ್ಯ ವಿಮಾ ಕಂಪನಿಯು ಸುಮಾರು 4,000 ಕೋಟಿ ರೂ.ಗಳನ್ನು ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.
ಆದರೆ ಈ ಬಗ್ಗೆ ಮಣಿಪಾಲ ಸಿಗ್ನಾ ಮತ್ತು ಎಲ್‌ಐಸಿ ವಕ್ತಾರರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇತ್ತೀಚೆಗೆ ನವೆಂಬರ್ 8 ರಂದು ಎಲ್ಐಸಿ ಎಂಡಿ ಮತ್ತು ಸಿಇಒ ಸಿದ್ಧಾರ್ಥ ಮೊಹಾಂತಿ ಅವರು ಎಲ್ಐಸಿ ಆರೋಗ್ಯ ವಿಮಾ ಮಾರುಕಟ್ಟೆಯನ್ನು ಪ್ರವೇಶಿಸಲು ಯೋಜಿಸುತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕಾಗಿ ಸಿದ್ಧತೆ ನಡೆಸುತ್ತಿರುವುದಾಗಿಯೂ ಹೇಳಿದ್ದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಷೇರು ಬೆಲೆಯ ಆಧಾರದದಲ್ಲಿ ನೋಡುವುದಾದರೆ ಮಣಿಪಾಲ್ ಸಿಗ್ನಾ ಕಳೆದ ಹಣಕಾಸು ವರ್ಷದಲ್ಲಿ1,691 ಕೋಟಿ ಜಿಡಬ್ಲ್ಯೂಪಿ ದಾಖಲಿಸಿದೆ. ಇದರ ಪ್ರಕಾರ, ಕಂಪನಿಯ ಮೌಲ್ಯಮಾಪನವು ಸುಮಾರು 3,500-4,000 ಕೋಟಿ ರೂ. LIC ಕಂಪನಿಯಲ್ಲಿ 50% ಪಾಲನ್ನು ಪಡೆಯಲು ನಿರ್ಧರಿಸಿದರೆ, ಈ ಮೌಲ್ಯಮಾಪನದಲ್ಲಿ ಸುಮಾರು 1,750-2,000 ಕೋಟಿ ರೂ.ಪಾವತಿಸಬೇಕಾಗಿ ಬರಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ