ನವದೆಹಲಿ: ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೆ, ನೀವು ಅದನ್ನು ತಕ್ಷಣ ಲಾಕ್ ಮಾಡುವುದು ಉತ್ತಮ, ಏಕೆಂದರೆ ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ಬೇರೆ ಯಾವುದೇ ವ್ಯಕ್ತಿ ದುರುಪಯೋಗಪಡಿಸಿಕೊಳ್ಳಬಹುದು. ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಕಳೆದುಕೊಂಡರೆ, ನೀವು ಅದನ್ನು ಹೇಗೆ ಲಾಕ್ ಮಾಡಬಹುದು ಮತ್ತು ನಂತರ ಅದನ್ನು ಅನ್ಲಾಕ್ ಮಾಡಬಹುದು, ಸಂಪೂರ್ಣ ಪ್ರಕ್ರಿಯೆಯು ಯುಐಡಿಎಐ ವೆಬ್‌ಸೈಟ್‌ನಲ್ಲಿ ನೋಡಬಹುದು. ಮನೆಯಿಂದಲೇ ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಲು ಮತ್ತು ಅನ್ಲಾಕ್ ಮಾಡಲು ಯುಐಡಿಎಐ ನಿಮಗೆ ಮಾಹಿತಿ ನೀಡಿದೆ. ಆದ್ದರಿಂದ ನೀವು ಇದನ್ನು ಹೇಗೆ ಮಾಡಬಹುದು ಎಂಬುದನ್ನು ಈ ಕೆಳೆಗೆ ನೋಡಿ.


COMMERCIAL BREAK
SCROLL TO CONTINUE READING

ಆಧಾರ್ ಅನ್ನು ಹೇಗೆ ಲಾಕ್ ಮಾಡುವುದು? ಆಧಾರ್ ಸಂಖ್ಯೆಯನ್ನು ಲಾಕ್ ಮಾಡಲು, ನೀವು ಯುಐಡಿಎಐ‌ನ(UIDAI) ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. ನಂತರ ಕೆಳಗೆ ನೀಡಿದ ವಿಧಾನಗಳನ್ನು ಅನುಸರಿ.


ಇದನ್ನೂ ಓದಿ : Sukanya Samriddhi: ನಿಮ್ಮ ಮಗಳ ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆಯಲ್ಲಿ ದಿನಕ್ಕೆ 131 ರೂ. ಹೂಡಿಕೆ ಮಾಡಿ 20 ಲಕ್ಷ ರೂ. ಪಡೆಯಿರಿ!


1. UIDAI ನ ಅಧಿಕೃತ ವೆಬ್‌ಸೈಟ್ https://resident.uidai.gov.in/ ‌ಗೆ ಭೇಟಿ ನೀಡಿ
2. 'ನನ್ನ ಆಧಾರ್' ನಲ್ಲಿ ನೀವು 'Aadhaar Services' ಆಯ್ಕೆಯನ್ನು ಮಾಡಿ
3. Lock/Unlock Biometrics ಆಧಾರ್ ಸರ್ವೀಸಸ್ ಆಯ್ಕೆಯನ್ನು ಸ್ವಲ್ಪ ಕೆಳಗೆ ನೋಡಬಹುದು.
4. ಪೆಟ್ಟಿಗೆಯನ್ನು ಟಿಕ್ ಮಾಡಿ ಮತ್ತು ಕೆಳಗಿನ Lock/Unlock Biometrics ಟ್ಯಾಬ್ ಕ್ಲಿಕ್ ಮಾಡಿ.
5. ಇದರ ನಂತರ log in ಆಯ್ಕೆ ಕಾಣಿಸುತ್ತದೆ, ಇಲ್ಲಿ 12 ಅಂಕಿಯ ಆಧಾರ್ ಸಂಖ್ಯೆ ಅಥವಾ 15 ಅಂಕಿಯ ವರ್ಚುವಲ್ ಐಡಿ (ವಿಐಡಿ) ಅನ್ನು ನಮೂದಿಸಿ.
6. ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು'Send OTP' ಕ್ಲಿಕ್ ಮಾಡಿ
7. ಒಟಿಪಿಯನ್ನು ಎಂಟರ್ ಮಾಡಿದ ನಂತರ, ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡುವ ಆಯ್ಕೆ ಇರುತ್ತದೆ
8. ಲಾಕ್ ಕ್ಲಿಕ್ ಮಾಡಿ, ಹಾಗೆ ಮಾಡುವುದರ ಮೂಲಕ ನಿಮ್ಮ ಆಧಾರ್ ಕಾರ್ಡ್ ಲಾಕ್ ಆಗುತ್ತದೆ.


ಇದನ್ನೂ ಓದಿ : Gold-Silver Rate : ಚಿನ್ನ ಖರೀದಿಸಬೇಕಾ? ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ!


ಆಧಾರ್ ಕಾರ್ಡ್ ಅನ್ನು ಲಾಕ್ ಮಾಡುವ ಮೊದಲು, ನೀವು ವರ್ಚುವಲ್ ಐಡಿ (VID) ಅನ್ನು ಕ್ರಿಯೇಟ್ ಮಾಡಬೇಕು ಎಂಬುದು ನೆನಪಿನಲ್ಲಿರಲಿ, ಏಕೆಂದರೆ ಆಧಾರ್ ಸಂಖ್ಯೆಯನ್ನು ಲಾಕ್ ಮಾಡಿದ ನಂತರ, KYCಗೆ ಸಂಬಂಧಿಸಿದಂತೆ ಇದು ಅಗತ್ಯವಾಗಿಬೇಕಾಗುತ್ತದೆ. ನೀವು ಲಾಕ್ ಮಾಡಿ ಹಾಗೆ  ಅದೇ ಪ್ರಕ್ರಿಯೆಯಲ್ಲಿ  ಅದನ್ನ ಅನ್ಲಾಕ್ ಮಾಡಬಹುದು. OTP ನಮೂದಿಸುವ ಮೂಲಕ, ಬಯೋಮೆಟ್ರಿಕ್ ಡೇಟಾವನ್ನು 'ಅನ್ಲಾಕ್' ಮಾಡುವ ಆಯ್ಕೆಯನ್ನು ನೀವು ಪ್ರಾಂಭಿಸಬೇಕಾಗುತ್ತದೆ.


ಇದನ್ನೂ ಓದಿ : EPFO ಖಾತೆದಾರರು UAN ನಂಬರ್ ಇಲ್ಲದೆಯೇ ನಿಮ್ಮ PF/EPF ಬ್ಯಾಲೆನ್ಸ್ ತಿಳಿಯಬಹುದು


ಆಧಾರ್ ಲಾಕ್ ಮಾಡುವುದರ ಪ್ರಯೋಜನಗಳೇನು? ಒಮ್ಮೆ ಲಾಕ್ ಮಾಡಿದ ನಂತರ, ಜನಸಂಖ್ಯಾ, ಬಯೋಮೆಟ್ರಿಕ್(Biometric) ಅಥವಾ ಒಟಿಪಿ ಮೂಲಕ ಆಧಾರ್ ಸಂಖ್ಯೆಯ ಮೂಲಕ ದೃಡೀಕರಿಸಲು ಬರುವುದಿಲ್ಲ. ಇದು ಆಧಾರ್ ಸಂಖ್ಯೆಯನ್ನು ದುರುಪಯೋಗಪಡಿಸಿಕೊಳ್ಳಲು ಬರುವುದಿಲ್ಲ. ಯಾವುದೇ ರೀತಿಯ ಕೆವೈಸಿಗಾಗಿ ನಿಮಗೆ 16-ಅಂಕಿಯ ವರ್ಚುವಲ್ ಐಡಿ ಅಗತ್ಯವಾಗಿ ನಿಮಗೆ ಬೇಕಾಗುತ್ತದೆ. ಆಧಾರ್ ಕಾರ್ಡ್ ಅನ್ನು ಅನ್ಲಾಕ್ ಮಾಡಿದ ನಂತರ, ನೀವು ಅದನ್ನು ಮತ್ತೆ ಎಲ್ಲಾ ಸೇವೆಗಳಿಗೆ ಬಳಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.