/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: PM Kisan Samman Nidhi: ನೀವು ಸಹ ಕೃಷಿಕರಾಗಿದ್ದರೆ ಮತ್ತು ಪಿಎಂ ಕಿಸಾನ್ ಯೋಜನೆಯ 8 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಇದೆ. ಈ ತಿಂಗಳ ಅಂತ್ಯದ ವೇಳೆಗೆ ಈ ಕಂತು ರೈತರ ಖಾತೆ ಸೇರಲಿದೆ ಎಂದು ಹೇಳಲಾಗುತ್ತಿದೆ. ಈ ಯೋಜನೆಯಡಿ ಪ್ರತಿ ವರ್ಷ 2000ರೂ.ಗಳ ಮೂರು ಕಂತುಗಳನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ, ಅಂದರೆ ಒಟ್ಟು 6000 ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.

ಪಿಎಂ ಕಿಸಾನ್ ಸಮ್ಮನ್ ನಿಧಿಯ ಕಂತು ಎಲ್ಲಿ ಸಿಲುಕಿದೆ?
ವಾಸ್ತವವಾಗಿ, ಏಪ್ರಿಲ್-ಜುಲೈ ಕಂತುಗಳನ್ನು ರಾಜ್ಯ ಸರ್ಕಾರಗಳು ಇನ್ನೂ ಅನುಮೋದಿಸಿಲ್ಲ. ಈ ಹಿನ್ನಲೆಯಲ್ಲಿ ರೈತರು ಪಿಎಂ ಕಿಸಾನ್ ಯೋಜನೆಯ (PM Kisan Samman Nidhi) 8ನೇ ಕಂತನ್ನು ಪಡೆಯುವುದು ತಡವಾಗಿದೆ. ಈ ಯೋಜನೆಯಲ್ಲಿ ಸರ್ಕಾರವು ವರ್ಷದ ಮೊದಲ ಕಂತನ್ನು ಏಪ್ರಿಲ್ 1 ರಿಂದ ಜುಲೈ 31 ರವರೆಗೆ ನೀಡುತ್ತದೆ, ಎರಡನೇ ಕಂತನ್ನು ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ಮತ್ತು ಮೂರನೇ ಕಂತನ್ನು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ರೈತರ ಖಾತೆಗೆ ವರ್ಗಾಯಿಸುತ್ತದೆ. ಈ ತಿಂಗಳ ಅಂತ್ಯದ ವೇಳೆಗೆ ಈ ಕಂತನ್ನು ರೈತರ ಖಾತೆಗೆ ಸೇರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಆದರೆ ಈ ಯೋಜನೆಯ ಲಾಭ ಪಡೆಯಲು ಯಾವುದೇ ರೀತಿಯ ತಪ್ಪುಗಳಾಗದಂತೆ ನಿಗಾ ವಹಿಸುವುದು ಬಹಳ ಮುಖ್ಯ.

ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ನೀವು ಬಯಸಿದರೆ ಈ ತಪ್ಪುಗಳನ್ನು ಮಾಡಬೇಡಿ:
1. ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುವಾಗ, ನಿಮ್ಮಲ್ಲಿ ಆಧಾರ್ ಸಂಖ್ಯೆ ಇಲ್ಲದಿದ್ದರೆ ಅಥವಾ ನೀವು ಅದನ್ನು ತಪ್ಪಾಗಿ ನಮೂದಿಸಿದರೆ ನಿಮ್ಮ ಖಾತೆಯಲ್ಲಿ ಮೊತ್ತವು ಬರುವುದಿಲ್ಲ.
2. ಈಗ ಹೊಸ ನೋಂದಣಿಗೆ ನೋಂದಾಯಿಸಿಕೊಂಡ ರೈತರು ತಮ್ಮ ಜಮೀನಿನ ಪ್ಲಾಟ್ ಸಂಖ್ಯೆಯನ್ನು ಸಹ ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ. ಅಂದರೆ, ಭೂಮಿ ನಿಮ್ಮ ಹೆಸರಿನಲ್ಲಿ ಇಲ್ಲದಿದ್ದರೆ ನಿಮಗೆ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ, ಹೊಸ ನಿಯಮಗಳು ಯೋಜನೆಗೆ ಸಂಬಂಧಿಸಿದ ಹಳೆಯ ಫಲಾನುಭವಿಗಳ ಮೇಲೆ ಪರಿಣಾಮ ಬೀರುವುದಿಲ್ಲ.
3. ಅವರ ಸರಿಯಾದ ಮತ್ತು ಪ್ರಮಾಣೀಕೃತ ಡೇಟಾವನ್ನು ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಕಳುಹಿಸಿದಾಗ ಮಾತ್ರ ಯೋಜನೆಯ ಮೊತ್ತವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತದೆ

ಇದನ್ನೂ ಓದಿ - PM Kisan Samman Nidhi : ಈ ತಪ್ಪುಗಳಾಗಿದ್ದರೆ ಪಿಎಂ ಕಿಸಾನ್ ಸೌಲಭ್ಯದಿಂದ ನೀವೂ ವಂಚಿತರಾಗಬಹುದು

ಪಟ್ಟಿಯಲ್ಲಿ ಈ ರೀತಿಯ ನಿಮ್ಮ ಹೆಸರನ್ನು ಪರಿಶೀಲಿಸಿ:
ನೀವು ಸಹ ಕೃಷಿಕರಾಗಿದ್ದರೆ ಮತ್ತು ಈ ಪಿಎಂ ಕಿಸಾನ್ (PM Kisan) ಯೋಜನೆಗೆ ನೋಂದಾಯಿಸಿಕೊಂಡಿದ್ದರೆ ನಿಮಗೆ ಮೊದಲ ಕಂತು 2000 ರೂಪಾಯಿಗಳೂ ಸಿಗುತ್ತವೆ. ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡುತ್ತದೆ. ಈ ಪಟ್ಟಿಯಲ್ಲಿರುವ ರೈತರಿಗೆ ಶೀಘ್ರದಲ್ಲೇ ಹಣ ಅವರ ಖಾತೆ ಸೇರುತ್ತದೆ. ಆದ್ದರಿಂದ, ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಮೊದಲು ಪರಿಶೀಲಿಸಬೇಕು. ಇದರ ವಿಧಾನ ತುಂಬಾ ಸುಲಭ.

ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು ಇದು ಸುಲಭ ಮಾರ್ಗ:
1. ಮೊದಲನೆಯದಾಗಿ, ನೀವು ಪಿಎಂ ಕಿಸಾನ್ ಯೋಜನೆ https://pmkisan.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
2. ಇಲ್ಲಿ ನೀವು ಫಾರ್ಮರ್ಸ್ ಕಾರ್ನರ್ ಆಯ್ಕೆಯನ್ನು ನೋಡುತ್ತೀರಿ.
3. ಫಾರ್ಮರ್ಸ್ ಕಾರ್ನರ್ ವಿಭಾಗದೊಳಗೆ, ಫಲಾನುಭವಿಗಳ ಪಟ್ಟಿಯ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ನಂತರ ನೀವು ಪಟ್ಟಿಯಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಮಾಹಿತಿಯನ್ನು ಆರಿಸಬೇಕಾಗುತ್ತದೆ.
5. ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ. ಇದರ ನಂತರ, ಫಲಾನುಭವಿಗಳ ಸಂಪೂರ್ಣ ಪಟ್ಟಿಯನ್ನು ಬಹಿರಂಗಪಡಿಸಲಾಗುತ್ತದೆ.

ನಿಮ್ಮ ಕಂತಿನ ಸ್ಥಿತಿಯನ್ನು ಹುಡುಕಿ:
> ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ, ನೀವು ಕಂತಿನ ಸ್ಥಿತಿಯನ್ನು ಸಹ ತಿಳಿಯಬಹುದು.
> ವೆಬ್‌ಸೈಟ್‌ನಲ್ಲಿ ಫಾರ್ಮರ್ಸ್ ಕಾರ್ನರ್ ಕ್ಲಿಕ್ ಮಾಡಿ.
> ಫಲಾನುಭವಿ ಸ್ಥಿತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
> ಹೊಸ ಪುಟ ಇಲ್ಲಿ ತೆರೆಯುತ್ತದೆ, ಆಧಾರ್, ಮೊಬೈಲ್ ಸಂಖ್ಯೆಯನ್ನು ಸೇರಿಸಿ
> ಈ ರೀತಿಯಾಗಿ ನಿಮ್ಮ ಕಂತಿನ ಸ್ಥಿತಿಯ ಬಗ್ಗೆ ನೀವು ಮಾಹಿತಿಯನ್ನು ಪಡೆಯುತ್ತೀರಿ.

ಇದನ್ನೂ ಓದಿ - PM Kisan: ರೈತರ ಖಾತೆಗೆ 8ನೇ ಕಂತು, ನಿಮ್ಮ ಖಾತೆಗೆ ಹಣ ಬಂದಿದೆಯೇ ಈ ರೀತಿ ಪರಿಶೀಲಿಸಿ

ಪಿಎಂ ಕಿಸಾನ್‌ಗೆ ನೋಂದಾಯಿಸುವುದು ಹೇಗೆ?
ಈ ಯೋಜನೆಗೆ ನೀವು ಇನ್ನೂ ನೋಂದಾಯಿಸದಿದ್ದರೆ, ಅದನ್ನು ತಕ್ಷಣವೇ ಮಾಡಿ. ಏಕೆಂದರೆ ನೋಂದಣಿ ಇಲ್ಲದೆ ನಿಮಗೆ 6000 ರೂಪಾಯಿಗಳ ಸಹಾಯ ಮೊತ್ತ ಸಿಗುವುದಿಲ್ಲ. ನೋಂದಣಿ ಪ್ರಕ್ರಿಯೆಯು ತುಂಬಾ ಸುಲಭ. ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಗಾಗಿ, ನೀವು ಎಲ್ಲಿಗೂ ಅಲೆಯುವ ಅವಶ್ಯಕತೆ ಇಲ್ಲ. ನೀವು ಕುಳಿತಲ್ಲಿಯೇ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ, ನಿಮ್ಮ ಜಮೀನಿನ ಖತೌನಿ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ನೀವು ಹೊಂದಿರಬೇಕು. ಇದಕ್ಕಾಗಿ ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.

ಈ ರೀತಿ ನೀವು ನೋಂದಾಯಿಸಿಕೊಳ್ಳಬಹುದು: 
1. ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಭೇಟಿ ನೀಡಿ
2. ಈಗ ಫಾರ್ಮರ್ಸ್ ಕಾರ್ನರ್ ಗೆ ಹೋಗಿ.
3. ಇಲ್ಲಿ ನೀವು 'ಹೊಸ ರೈತ ನೋಂದಣಿ' ಕ್ಲಿಕ್ ಮಾಡಿ
4. ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.
5. ಕ್ಯಾಪ್ಚಾ ಕೋಡ್ ನಮೂದಿಸುವ ಮೂಲಕ ರಾಜ್ಯವನ್ನು ಆಯ್ಕೆ ಮಾಡಬೇಕಾಗುತ್ತದೆ ಮತ್ತು ನಂತರ ಪ್ರಕ್ರಿಯೆಯು ಮುಂದುವರಿಯಬೇಕಾಗುತ್ತದೆ.
6. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಬೇಕು.
7. ಅಲ್ಲದೆ, ಬ್ಯಾಂಕ್ ಖಾತೆಯ ವಿವರಗಳು ಮತ್ತು ಜಮೀನಿಗೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.
8. ಇದರ ನಂತರ, ನೀವು ಅರ್ಜಿಯನ್ನು ಸಲ್ಲಿಸಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
When you will get 2000 rupees in PM Kisan account! Know where your money is stuck
News Source: 
Home Title: 

PM Kisan- ಯಾವಾಗ ಖಾತೆ ಸೇರಲಿದೆ 2000 ರೂ., ನಿಮ್ಮ ಹಣ ಎಲ್ಲಿ ಸಿಲುಕಿಕೊಂಡಿದೆ ಎಂದು ತಿಳಿಯಿರಿ

PM Kisan- ಯಾವಾಗ ಖಾತೆ ಸೇರಲಿದೆ 2000 ರೂ., ನಿಮ್ಮ ಹಣ ಎಲ್ಲಿ ಸಿಲುಕಿಕೊಂಡಿದೆ ಎಂದು ತಿಳಿಯಿರಿ
Caption: 
PM Kisan Samman Nidhi Yojana 8th installment
Yes
Is Blog?: 
No
Tags: 
Facebook Instant Article: 
Yes
Highlights: 

ಈ ಯೋಜನೆಯಡಿ ಪ್ರತಿ ವರ್ಷ 2000ರೂ.ಗಳ ಮೂರು ಕಂತುಗಳನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ

ಅಂದರೆ ಒಟ್ಟು 6000 ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ

ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ, ನೀವು ಕಂತಿನ ಸ್ಥಿತಿಯನ್ನು ತಿಳಿಯುವುದು ಹೇಗೆಂದು ತಿಳಿಯಿರಿ

Mobile Title: 
PM Kisan- ಯಾವಾಗ ಖಾತೆ ಸೇರಲಿದೆ 2000 ರೂ., ನಿಮ್ಮ ಹಣ ಎಲ್ಲಿ ಸಿಲುಕಿಕೊಂಡಿದೆ ಎಂದು ತಿಳಿಯಿರಿ
Yashaswini V
Publish Later: 
No
Publish At: 
Tuesday, April 20, 2021 - 12:12
Created By: 
Yashaswini V
Updated By: 
Yashaswini V
Published By: 
Yashaswini V
Request Count: 
3
Is Breaking News: 
No