ಈ ನಂಬರ್ ಕಳೆದುಹೋದರೆ ನಿಂತು ಹೋಗುತ್ತದೆ ಪಿಂಚಣಿ..! ಮತ್ತೆ ಪಡೆಯಲು ಅನುಸರಿಸಿ ಈ ಸರಳ ಉಪಾಯ
ಯಾವುದೇ ಕಂಪನಿಯಿಂದ ನಿವೃತ್ತರಾಗುವ ವ್ಯಕ್ತಿಗೆ, ಪಿಪಿಒ ಸಂಖ್ಯೆಯನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ ನೀಡುತ್ತದೆ. ಇದು ಇಲ್ಲದೆ ಪಿಂಚಣಿ ಪಡೆಯಲು ಸಾಧ್ಯವಾಗುವುದಿಲ್ಲ.
ನವದೆಹಲಿ : ಉದ್ಯೋಗಿ ಪಿಂಚಣಿ ಯೋಜನೆಯಡಿ, ಪಿಂಚಣಿದಾರರಿಗೆ ಪೆನ್ಶನ್ ಪೇಮೆಂಟ್ ಆರ್ಡರ್ (PPO) ಎಂಬ ವಿಶಿಷ್ಟ ಸಂಖ್ಯೆಯನ್ನು ನೀಡಲಾಗುತ್ತದೆ. ಇದರ ಆಧಾರದ ಮೇಲೆ, ಪಿಂಚಣಿದಾರರು ನಿವೃತ್ತಿಯ ನಂತರ ಪಿಂಚಣಿ ಪಡೆಯುತ್ತಾರೆ. ಈ ಸಂಖ್ಯೆಯನ್ನು ಕಳೆದುಕೊಂಡರೆ, ಪಿಂಚಣಿ ನಿತು ಹೋಗುತ್ತದೆ. ಹೀಗಿರುವಾಗ ಇಪಿಎಫ್‌ಒ ಹೇಳಿದ ನಿಯಮಗಳನ್ನು ಅನುಸರಿಸುವ ಮೂಲಕ ಯಾವುದೇ ಸಮಸ್ಯೆಗಳಿಲ್ಲದೆ, ಆ ನಂಬರ್ ಅನ್ನು ಮತ್ತೆ ಪಡೆಯಬಹುದು.
PPO ಸಂಖ್ಯೆ ಬಹಳ ಮುಖ್ಯ :
ಯಾವುದೇ ಕಂಪನಿಯಿಂದ ನಿವೃತ್ತರಾಗುವ ವ್ಯಕ್ತಿಗೆ, ಪಿಪಿಒ ಸಂಖ್ಯೆಯನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನೀಡುತ್ತದೆ. ಇದು ಇಲ್ಲದೆ ಪಿಂಚಣಿ ಪಡೆಯಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಅದನ್ನು ಹೊಂದುವುದು ಬಹಳ ಮುಖ್ಯ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)ಯಿಂದ ನೀಡಲಾದ PPO ಸಂಖ್ಯೆಯಿಂದ ವೇತನದ ಸ್ಟೇಟಸ್ ಪರಿಶೀಲಿಸುವ ಸೌಲಭ್ಯ ಕೂಡಾ ಸಿಗುತ್ತದೆ. ಹಾಗಾದರೆ ಅದನ್ನು ಮರಳಿ ಪಡೆಯುವ ಪ್ರಕ್ರಿಯೆಯನ್ನು ತಿಳಿಯೋಣ.
ಇದನ್ನೂ ಓದಿ : LIC ಹೊರ ತಂದಿದೆ ನೂತನ ಪಾಲಿಸಿ Dhan Rekha! ಪಾಲಿಸಿದಾರರಿಗೆ ಸಿಗಲಿದೆ ಅದ್ಬುತ ಪ್ರಯೋಜನ
PPO ಸಂಖ್ಯೆಗೆ ಅರ್ಜಿ ಸಲ್ಲಿಸುವುದು ಹೇಗೆ?
1. ಕಳೆದುಹೋದ PPO ಸಂಖ್ಯೆಯನ್ನು ಹಿಂಪಡೆಯಲು, ಮೊದಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್ https://www.epfindia.gov.in/site_en/index.php ಗೆ ಹೋಗಿ .
2. ಈಗ 'ಆನ್‌ಲೈನ್ಸರ್ವಿಸೆಸ್ ' ವಿಭಾಗದಲ್ಲಿ ‘Pensioners Portal’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
3. ಈಗ ನಿಮ್ಮ ಮುಂದೆ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನೀವು 'Know Your PPO No' ಅನ್ನು ಕ್ಲಿಕ್ ಮಾಡಿ.
4. ಇಲ್ಲಿ ನೀವು ಪ್ರತಿ ತಿಂಗಳು ನಿಮ್ಮ ಪಿಂಚಣಿ ಬರುವ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಬೇಕು. ಪಿಎಫ್ ಸಂಖ್ಯೆಯನ್ನು ನಮೂದಿಸುವ ಮೂಲಕವೂ ಸರ್ಚ್ ಮಾಡಬಹುದು.
5. ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ಅದನ್ನು ಸಬ್ಮಿಟ್ ಮಾಡಿ.
6. ಇದಾದ ನಂತರ ಸ್ಕ್ರೀನ್ ಮೇಲೆ PPO ಸಂಖ್ಯೆಯನ್ನು ಕಾಣಬಹುದು.
ಇಲ್ಲಿ PPO ಸಂಖ್ಯೆಯೂ ಕಡ್ಡಾಯ :
ಈ ವಿಶೇಷ 12-ಅಂಕಿಯ ಸಂಖ್ಯೆಯ ಮೂಲಕ, ಕೇಂದ್ರ ಪಿಂಚಣಿ ಲೆಕ್ಕಪತ್ರ ಕಚೇರಿಯನ್ನು ಸಂಪರ್ಕಿಸಲಾಗುತ್ತದೆ. ಪಿಂಚಣಿದಾರರ ಪಾಸ್‌ಬುಕ್‌ನಲ್ಲಿ ಈ ಪಿಪಿಒ ಸಂಖ್ಯೆಯನ್ನು ನಮೂದಿಸುವ ಮೂಲಕ, ಖಾತೆಯನ್ನು ಒಂದು ಬ್ಯಾಂಕ್‌ನಿಂದ ಇನ್ನೊಂದು ಶಾಖೆಗೆ ವರ್ಗಾಯಿಸುವುದು ಸುಲಭವಾಗುತ್ತದೆ. ಇದಲ್ಲದೇ, ಯಾವುದೇ ರೀತಿಯ ಪಿಂಚಣಿ ಸಂಬಂಧಿತ ಕೆಲಸ ಅಥವಾ ದೂರುಗಳಿಗೆ ಇಪಿಎಫ್‌ಒದಲ್ಲಿ ಪಿಪಿಒ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿರುತ್ತದೆ. ಇದಲ್ಲದೆ, ಪಿಂಚಣಿ ಸ್ಟೇಟಸ್ (Pension status) ನೋಡಲು ಈ ಸಂಖ್ಯೆಯನ್ನು ಬರೆಯುವುದು ಬಹಳ ಮುಖ್ಯವಾಗಿರುತ್ತದೆ.
ಇದನ್ನೂ ಓದಿ : Aadhaar Card:ನಿಮ್ಮ ಪ್ರಾದೇಶಿಕ ಭಾಷೆಯಲ್ಲಿ ಆಧಾರ್ ಕಾರ್ಡ್ ಮಾಡಿಸಿ, ಅನೇಕ ಪ್ರಯೋಜನ ಪಡೆಯಿರಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.