LIC ಹೊರ ತಂದಿದೆ ನೂತನ ಪಾಲಿಸಿ Dhan Rekha! ಪಾಲಿಸಿದಾರರಿಗೆ ಸಿಗಲಿದೆ ಅದ್ಬುತ ಪ್ರಯೋಜನ

ಈ ಪಾಲಿಸಿಯ ವಿಶೇಷತೆಯೆಂದರೆ, ಅದರ ಮುಕ್ತಾಯದ ನಂತರ, ಈಗಾಗಲೇ ಪಡೆದಿರುವ ಮೊತ್ತವನ್ನು ಕಡಿತಗೊಳಿಸದೆಯೇ ಸಂಪೂರ್ಣ ವಿಮಾ ಮೊತ್ತವನ್ನು ಪಾಲಿಸಿದಾರರಿಗೆ ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ಕನಿಷ್ಠ 2 ಲಕ್ಷ ರೂಪಾಯಿ ವಿಮಾ ಮೊತ್ತವನ್ನು ಹೂಡಿಕೆ ಮಾಡಬಹುದು.

Written by - Ranjitha R K | Last Updated : Dec 14, 2021, 12:29 PM IST
  • LIC ದೇಶದ ವಿಮಾ ಕಂಪನಿಗಳಲ್ಲಿ ಒಂದಾಗಿದೆ.
  • ಎಲ್ಐಸಿಯಲ್ಲಿ ಹೂಡಿಕೆ ಮಾಡುವುದು ತುಂಬಾ ಸುರಕ್ಷಿತ
  • ಹೊಸ ಯೋಜನೆಯನ್ನು 3 ಟರ್ಮ್ ನಲ್ಲಿ ಪ್ರಾರಂಭಿಸಲಾಗಿದೆ
LIC ಹೊರ ತಂದಿದೆ ನೂತನ ಪಾಲಿಸಿ  Dhan Rekha! ಪಾಲಿಸಿದಾರರಿಗೆ ಸಿಗಲಿದೆ ಅದ್ಬುತ ಪ್ರಯೋಜನ  title=
ಎಲ್ಐಸಿಯಲ್ಲಿ ಹೂಡಿಕೆ ಮಾಡುವುದು ತುಂಬಾ ಸುರಕ್ಷಿತ (file photo)

ನವದೆಹಲಿ : LIC Dhan Rekha Policy : ಭಾರತೀಯ ಜೀವ ವಿಮಾ ನಿಗಮ ಅಂದರೆ LIC ಗ್ರಾಹಕರಿಗೆ ಕಾಲಕಾಲಕ್ಕೆ ಉತ್ತಮ ಯೋಜನೆಗಳನ್ನು ನೀಡುತ್ತಿದೆ. LIC ದೇಶದ ವಿಮಾ ಕಂಪನಿಗಳಲ್ಲಿ ಒಂದಾಗಿದೆ. ಇದರಲ್ಲಿ ಯಾವುದೇ ಅಪಾಯವಿಲ್ಲದೆ ಹೂಡಿಕೆ (Investment) ಮಾಡಬಹುದು. ಇಲ್ಲಿ ಮಾಡಿದ ಹೂಡಿಕೆ ಸುರಕ್ಷಿತವಾಗಿರುತ್ತದೆ. ಈ ಕಂಪನಿಯು ಸರ್ಕಾರದಿಂದ ನಡೆಸಲ್ಪಡುತ್ತದೆ. ಈಗ ಎಲ್‌ಐಸಿ ಒಂದು ಅದ್ಭುತವಾದ ಯೋಜನೆಯನ್ನು ಪರಿಚಯಿಸಿದೆ. 

ಎಲ್ಐಸಿ ಧನ್ ರೇಖಾ ಪಾಲಿಸಿ : 
ಈ ವಿಮಾ ಪಾಲಿಸಿಯ ಹೆಸರು 'ಧನ್ ರೇಖಾ' (LIC Dhan Rekha Policy) . ಇದರಲ್ಲಿ, ಪಾಲಿಸಿಯು ಚಾಲನೆಯಲ್ಲಿರುವ ಸ್ಥಿತಿಯಲ್ಲಿದ್ದರೆ, ವಿಮಾ ಮೊತ್ತದ ಒಂದು ನಿಶ್ಚಿತ ಭಾಗವನ್ನು ನಿಯಮಿತ ಮಧ್ಯಂತರಗಳಲ್ಲಿ ಸರ್ವೈವಲ್ ಬೆನಿಫಿಟ್ (Survival benefit) ಎಂದು ನೀಡಲಾಗುತ್ತದೆ. ಈ ಯೋಜನೆಯು  ಅದ್ಬುತ ಪ್ರಯೋಜನಗಳನ್ನು ನೀಡಲಿದೆ. 

ಇದನ್ನೂ ಓದಿ :  Crorepati:ದಿನಕ್ಕೆ ಕೇವಲ 20 ರೂ. ಹೂಡಿಕೆ ಮಾಡಿ... ಕೋಟ್ಯಾಧಿಪತಿಗಳಾಗಿ.!

ಅರ್ಹತೆ ಏನು?
ಈ ಪಾಲಿಸಿಯ (LIC Policy) ವಿಶೇಷತೆಯೆಂದರೆ, ಅದರ ಮುಕ್ತಾಯದ ನಂತರ, ಈಗಾಗಲೇ ಪಡೆದಿರುವ ಮೊತ್ತವನ್ನು ಕಡಿತಗೊಳಿಸದೆಯೇ ಸಂಪೂರ್ಣ ವಿಮಾ ಮೊತ್ತವನ್ನು ಪಾಲಿಸಿದಾರರಿಗೆ ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ಕನಿಷ್ಠ 2 ಲಕ್ಷ ರೂಪಾಯಿ ವಿಮಾ ಮೊತ್ತವನ್ನು ಹೂಡಿಕೆ ಮಾಡಬಹುದು. ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ. ಅದರಲ್ಲಿ ಹೂಡಿಕೆಗೆ ನೀಡಿರುವ ಷರತ್ತುಗಳ ಪ್ರಕಾರ 90 ದಿನಗಳಿಂದ ಎಂಟು ವರ್ಷದವರೆಗೆ ಮಗುವಿನ ಹೆಸರಿನಲ್ಲಿ ತೆಗೆದುಕೊಳ್ಳಬಹುದು. ಅದೇ ರೀತಿ, ಗರಿಷ್ಠ ವಯಸ್ಸಿನ ಮಿತಿಯೂ ಸಹ 35 ವರ್ಷದಿಂದ 55 ವರ್ಷಗಲಾಗಿರುತ್ತವೆ. 

ಯೋಜನೆ 3 ಅವಧಿಯಲ್ಲಿ ಪ್ರಾರಂಭ :
1.ಕಂಪನಿಯು ಈ ನೀತಿಯನ್ನು 3 ವಿಭಿನ್ನ ಟರ್ಮ್ (term) ಅನ್ನು ಪರಿಚಯಿಸಿದೆ.
 2.20 ವರ್ಷಗಳು, 30 ವರ್ಷಗಳು ಮತ್ತು 40 ವರ್ಷ ಹೀಗೆ ಮೂರು ಟರ್ಮ್ ನೀಡಲಾಗಿದೆ. 
3. ಅದರಲ್ಲಿ ಯಾವುದೇ ಒಂದು ಟರ್ಮ್ ಅನ್ನು  ಆಯ್ಕೆ ಮಾಡಬಹುದು.
4.ಅವಧಿಗೆ ಅನುಗುಣವಾಗಿ ಪ್ರೀಮಿಯಂ ಮೊತ್ತವನ್ನು (Premium amount) ಪಾವತಿಸಬೇಕಾಗುತ್ತದೆ.
5. 20 ವರ್ಷಗಳ ಅವಧಿಯನ್ನು ಆರಿಸಿಕೊಂಡರೆ, 10 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ.
6. 30 ವರ್ಷಗಳ ಅವಧಿಯನ್ನು ಆರಿಸಿದರೆ, 15 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ.
7. 40 ವರ್ಷಗಳ ಅವಧಿಯನ್ನು ಆರಿಸಿದರೆ, 20 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ.
8.ಇದಲ್ಲದೆ, ಒಂದೇ ಪ್ರೀಮಿಯಂ ಅನ್ನು ಸಹ ಪಾವತಿಸಬಹುದು.

ಇದನ್ನೂ ಓದಿ : Senior Citizens: 60 ವರ್ಷಕ್ಕಿಂತ ಮೇಲ್ಪಟ್ಟ ತೆರಿಗೆ ಪಾವತಿದಾರರಿಗೊಂದು ಮಹತ್ವದ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News