LPG Cylinder Insurance: ಮೋದಿ ಸರ್ಕಾರವು ದೇಶವಾಸಿಗಳಿಗಾಗಿ ಉಜ್ವಲ ಯೋಜನೆಯನ್ನು ಆರಂಭಿಸಿದ ಬಳಿಕ ದೇಶಾದ್ಯಂತ ಎಲ್‌ಪಿ‌ಜಿ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಮೊದಲೆಲ್ಲಾ, ಕೇವಲ ನಗರಗಳಿಗೆ ಹೆಚ್ಚು ಸೀಮಿತವಾಗಿದ್ದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳು ಪ್ರಸ್ತುತ ಹಳ್ಳಿಗಳಿಗೂ ತಲುಪಿದೆ. ಅಷ್ಟೇ ಅಲ್ಲ, ಸರ್ಕಾರ ನೀಡುವ ಗ್ಯಾಸ್ ಸಿಲಿಂಡರ್‌ಗಳ ಮೇಲೆ ಅಪಘಾತ ವಿಮಾ ಸೌಲಭ್ಯವೂ ಲಭ್ಯವಾಗುತ್ತದೆ. 


COMMERCIAL BREAK
SCROLL TO CONTINUE READING

ಹೌದು, ಸರ್ಕಾರದಿಂದ ನೀಡಲಾಗುವ ಗ್ಯಾಸ್ ಸಿಲಿಂಡರ್‌ಗಳ (Gas Cylinder) ಮೇಲೂ ಅಪಘಾತ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ ಎಂಬ ಬಗ್ಗೆ ನಮ್ಮಲ್ಲಿ ಸಾಕಷ್ಟು ಜನರಿಗೆ ಗೊತ್ತೇ ಇಲ್ಲ. ಹಾಗಂತ ಇದಕ್ಕಾಗಿ ಗ್ರಾಹಕರಿಗೆ ಯಾವುದೇ ಹಣವನ್ನು ತೆಗೆದುಕೊಳ್ಳುವುದಿಲ್ಲ. 50 ಲಕ್ಷ ರೂ.ವರೆಗಿನ ಈ ವಿಮೆಯೂ ಸಂಪೂರ್ಣ ಉಚಿತವಾಗಿರುತ್ತದೆ. ಆದರೆ ಈ ವಿಮಾ ಸೌಲಭ್ಯವನ್ನು ಎಂತಹ ಸಂದರ್ಭದಲ್ಲಿ ಯಾರು ಪಡೆಯಬಹುದು ಎಂಬ ಬಗ್ಗೆ ಅರಿವಿರಬೇಕು. 


ವಾಸ್ತವವಾಗಿ, ಎಲ್‌ಪಿ‌ಜಿ ಸಿಲಿಂಡರ್‌ನಲ್ಲಿ (LPG Cylinder) ತುಂಬಿರುವ ಅನಿಲವು ತುಂಬಾ ದಹನಕಾರಿಯಾಗಿರುತ್ತದೆ. ಎಷ್ಟೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೂ ಸಹ ಹಲವು ಬಾರಿ ಅಪಘಾತ ಪಸಂಭವಿಸಿರುವಂತಹ ಹಲವು ಪ್ರಕರಣಗಳು ಆಗಾಗ್ಗೆ ಮುನ್ನಲೆಗೆ ಬರುತ್ತವೆ. ಅಂತಹ ಸಂದರ್ಭದಲ್ಲಿ ಅಪಘಾತದಿಂದ ಉಂಟಾದ ನಷ್ಟವನ್ನು ಗ್ರಾಹಕರು ವಿಮೆಯ ಮೂಲಕ ಸರಿದೂಗಿಸಬಹುದು. 


ಇದನ್ನೂ ಓದಿ- LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಿಹಿಸುದ್ದಿ: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!


ಲಭ್ಯವಿರುವ ಮಾಹಿತಿಯ ಪ್ರಕಾರ, ಪೆಟ್ರೋಲಿಯಂ ಕಂಪನಿಗಳಿಂದ (ಇಂಡಿಯನ್, ಭಾರತ್, ಎಚ್‌ಪಿ) ಎಲ್‌ಪಿ‌ಜಿ ಸಂಪರ್ಕವನ್ನು ತೆಗೆದುಕೊಳ್ಳುವ ಗ್ರಾಹಕರು ಮತ್ತು ಅವರ ಕುಟುಂಬಕ್ಕೆ ಈ ಅಪಘಾತದ ವಿಮೆ ಸೌಲಭ್ಯ ಲಭ್ಯವಾಗುತ್ತದೆ. ಅನಿಲ ಸೋರಿಕೆ (Gas Leak) ಅಥವಾ ಸ್ಫೋಟದಂತಹ ಅಪಘಾತಗಳ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಕ್ಕೆ ಸಹಾಯಧನವಾಗಿ 50 ಲಕ್ಷ ರೂ.ಗಳವರೆಗೆ ವಿಮೆಯ ಸೌಲಭ್ಯವನ್ನು (Insurance Facility) ನೀಡಲಾಗುತ್ತದೆ. 


ಕುಟುಂಬದ ಪ್ರತಿ ಸದಸ್ಯರಿಗೂ ಸಿಗುತ್ತೆ 50 ಲಕ್ಷ ರೂ.ವರೆಗಿನ ವಿಮೆ: 
ಅನಿಲ ಸೋರಿಕೆ ಅಥವಾ ಸ್ಫೋಟದಂತಹ ಅಪಘಾತಗಳ ಸಂದರ್ಭದಲ್ಲಿ ಇಡೀ ಕುಟುಂಬವು ಪ್ರತಿ ಸದಸ್ಯರಿಗೆ 10 ಲಕ್ಷ ರೂ. ವಿಮೆ ಸೌಲಭ್ಯ ಲಭ್ಯವಾಗುತ್ತದೆ. ಈ ಪೈಕಿ ಆಸ್ತಿ ಹಾನಿಗೆ, ಚಿಕಿತ್ಸೆಗೆ ಮತ್ತು ಸಾವಿನ ಸಂದರ್ಭದಲ್ಲಿ ವಿವಿಧ ಮೊತ್ತವನ್ನು ನಿಗದಿಪಡಿಸಲಾಗಿರುತ್ತದೆ. ಸಿಲಿಂಡರ್ ಸ್ಫೋಟದಿಂದ ಮೃತಪಟ್ಟರೆ ಗರಿಷ್ಠ 50 ಲಕ್ಷ ರೂ.ವರೆಗೆ ಕ್ಲೈಮ್ ಮಾಡಬಹುದಾಗಿದೆ. ಒಟ್ಟಾರೆಯಾಗಿ ಇಡೀ ಕುಟುಂಬಕ್ಕೆ ಗರಿಷ್ಠ 50 ಲಕ್ಷ ರೂ.ವರೆಗೆ ವಿಮಾ ರಕ್ಷಣೆ ನೀಡಲಾಗುತ್ತದೆ. ಆದಾಗ್ಯೂ, ಈ ವಿಮಾ ಸೌಲಭ್ಯಗಳನ್ನು ಪಡೆಯಲು ಕೆಲವು ಷರತ್ತುಗಳನ್ನು ಪೂರೈಸುವುದು ಅವಶ್ಯಕವಾಗಿದೆ. 


ಪ್ರಮುಖ ಷರತ್ತುಗಳು: 
ಸಿಲಿಂಡರ್ ಪೈಪ್, ಸ್ಟವ್ ಮತ್ತು ರೆಗ್ಯುಲೇಟರ್ ಐಎಸ್‌ಐ ಮಾರ್ಕ್ ಹೊಂದಿರುವ ಜನರಿಗೆ ಮಾತ್ರ ಅನಿಲ ಸೋರಿಕೆ ಅಥವಾ ಸ್ಫೋಟದಂತಹ ಅಪಘಾತಗಳ ಸಂದರ್ಭದಲ್ಲಿ ಕ್ಲೈಮ್‌ನ ಪ್ರಯೋಜನ ಲಭ್ಯವಿರುತ್ತದೆ. ಕ್ಲೈಮ್‌ಗಾಗಿ, ನೀವು ಸಿಲಿಂಡರ್ ಮತ್ತು ಸ್ಟವ್ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಬೇಕು.


ಈ ವಿಮೆ ಕ್ಲೈಮ್‌ಗಾಗಿ ಗ್ರಾಹಕರು ಅಪಘಾತ ಸಂಭವಿಸಿದ ತಿಂಗಳೊಳಗೆ ಎಂದರೆ 30 ದಿನಗಳಲ್ಲಿ ತಮ್ಮ ವಿತರಕರಿಗೆ ಮತ್ತು ಪೊಲೀಸ್ ಠಾಣೆಗೆ ಅಪಘಾತದ ಬಗ್ಗೆ ತಿಳಿಸಬೇಕು.


ಇದನ್ನೂ ಓದಿ- PPFನಿಂದ NPSವರೆಗೆ ನೌಕರರಿಗಾಗಿ ಇಲ್ಲಿದೆ ಟಾಪ್ 5 ಉತ್ತಮ ಹೂಡಿಕೆ ಆಯ್ಕೆಗಳು


ವಿಮೆಯನ್ನು ಕ್ಲೈಮ್ ಮಾಡುವ ಸಂದರ್ಭದಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾದ  ಎಫ್ಐಆರ್ ನಕಲು, ವೈದ್ಯಕೀಯ ರಸೀದಿ, ಆಸ್ಪತ್ರೆ ಬಿಲ್, ಮರಣೋತ್ತರ ಪರೀಕ್ಷೆಯ ವರದಿ ಮತ್ತು ಮರಣ ಪ್ರಮಾಣಪತ್ರದಂತಹ ದಾಖಲೆಗಳು ಅಗತ್ಯವಿದೆ.


ಗಮನಾರ್ಹ ವಿಷಯವೆಂದರೆ, ಈ ವಿಮಾ ಪಾಲಿಸಿಯಲ್ಲಿ ಗ್ರಾಹಕರು ಯಾರನ್ನೂ ಸಹ ನಾಮಿನಿ ಮಾಡಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ, ನೋಂದಾಯಿತ ನಿವಾಸದಲ್ಲಿ ಅಪಘಾತ ಸಂಭವಿಸಿದರೆ ಮಾತ್ರ ಗ್ರಾಹಕರು ವಿಮೆಯನ್ನು ಕ್ಲೈಮ್ ಮಾಡಲು ಅರ್ಹರಾಗಿರುತ್ತಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.