PMAY Scheme: ಮನೆ ಇಲ್ಲದವರಿಗೆ ಉಚಿತ ಮನೆ! ಈ ಯೋಜನೆಯಡಿ ಅರ್ಜಿ ಸಲ್ಲಿಸಿರಿ

Pradhan Mantri Awas Yojana: ಎಲ್ಲಾ ಬಡವರಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ʼಪ್ರಧಾನ ಮಂತ್ರಿ ಆವಾಸ್ ಯೋಜನೆʼ ಆರಂಭಿಸಿದೆ. ಈ ಯೋಜನೆಯನ್ನು 2015ರ ಜೂನ್‌ 1ರಂದು ಮೊದಲ ಬಾರಿಗೆ ಪರಿಚಯಿಸಲಾಯಿತು.

Written by - Puttaraj K Alur | Last Updated : Jul 7, 2024, 08:51 AM IST
  • ಮನೆ ಇಲ್ಲದವರಿಗೆ ಉಚಿತ ಮನೆ ನೀಡುವ ಕೇಂದ್ರ ಸರ್ಕಾರದ ಯೋಜನೆ
  • ʼಪ್ರಧಾನ ಮಂತ್ರಿ ಆವಾಸ್ ಯೋಜನೆʼಯಡಿ ನೀವೂ ಸಹ ಅರ್ಜಿ ಸಲ್ಲಿಸಿ
  • PMAY ಯೋಜನೆಡಿ ನೀವು ಉಚಿತ ಮನೆ ಹೇಗೆ ಪಡೆಯಬಹುದು ಗೊತ್ತಾ?
PMAY Scheme: ಮನೆ ಇಲ್ಲದವರಿಗೆ ಉಚಿತ ಮನೆ! ಈ ಯೋಜನೆಯಡಿ ಅರ್ಜಿ ಸಲ್ಲಿಸಿರಿ title=
ಬಡವರಿಗೆ ಉಚಿತ ಮನೆ

Pradhan Mantri Awas Yojana: ನೀವು ಮನೆ ಖರೀದಿಸಲು ಬಯಸಿದರೆ ಮತ್ತು ʼಪ್ರಧಾನ ಮಂತ್ರಿ ಆವಾಸ್ ಯೋಜನೆʼಯ ಲಾಭವನ್ನು ಪಡೆಯಲು ಬಯಸಿದರೆ ಇದು ತುಂಬಾ ಸುಲಭ. ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಸರ್ಕಾರಿ ಯೋಜನೆಯಿಂದ ನೀವು ಅನೇಕ ಪ್ರಯೋಜನ ಪಡೆಯುತ್ತೀರಿ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನಿಮಗೆ ಆಧಾರ್ ಸಂಖ್ಯೆ ಅಗತ್ಯವಿದೆ. ಅರ್ಜಿದಾರನು ತಮ್ಮ ಸಂಪೂರ್ಣ ಮಾಹಿತಿಯನ್ನು ನಿಖರವಾಗಿ ನೀಡಬೇಕಾಗುತ್ತದೆ.

ಎಲ್ಲಾ ಬಡವರಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ʼಪ್ರಧಾನ ಮಂತ್ರಿ ಆವಾಸ್ ಯೋಜನೆʼ ಆರಂಭಿಸಿದೆ. ಈ ಯೋಜನೆಯನ್ನು 2015ರ ಜೂನ್‌ 1ರಂದು ಮೊದಲ ಬಾರಿಗೆ ಪರಿಚಯಿಸಲಾಯಿತು. ಈ ಯೋಜನೆಯಡಿ ವಾರ್ಷಿಕ ಶೇ.6.50ರ ಬಡ್ಡಿದರದಲ್ಲಿ ಸಾಲ ಲಭ್ಯವಾಗುತ್ತದೆ.

PMAY ಯೋಜನೆಯಡಿ ಪ್ರಯೋಜನಗಳು

  • PMAY ಯೋಜನೆಯಡಿ ಎಲ್ಲಾ ಫಲಾನುಭವಿಗಳಿಗೆ ಕೇವಲ ವಾರ್ಷಿಕ ಶೇ.6.50 ಬಡ್ಡಿದರದಲ್ಲಿ 20 ವರ್ಷಗಳವರೆಗೆ ವಸತಿ ಸಾಲ ನೀಡಲಾಗುತ್ತದೆ
  • ನೆಲ ಮಹಡಿಯಲ್ಲಿರುವ ಮನೆಗಳು ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಮಾತ್ರ ಮೀಸಲಾಗಿದೆ
  • ಗೃಹ ನಿರ್ಮಾಣದಲ್ಲಿ ಸುಸ್ಥಿರ & ಪರಿಸರ ಸ್ನೇಹಿ ತಂತ್ರಜ್ಞಾನ ಬಳಸಲಾಗುತ್ತದೆ
  • ಈ ಯೋಜನೆಯು ದೇಶದ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಅನ್ವಯಿಸುತ್ತದೆ. ೩ ಹಂತಗಳಲ್ಲಿ ನಗರ ಪ್ರದೇಶಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ

ಇದನ್ನೂ ಓದಿ: Good News: ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ!

ಯಾರು ಫಲಾನುಭವಿಗಳು?

ʼಪ್ರಧಾನ ಮಂತ್ರಿ ಆವಾಸ್ ಯೋಜನೆʼಯ ಫಲಾನುಭವಿಗಳನ್ನು ವಾರ್ಷಿಕ ಆದಾಯದ ಆದಾರದಲ್ಲಿ ಈ ರೀತಿ ವರ್ಗೀಕರಿಸಬಹುದು

  • ಮಧ್ಯಮ ಆದಾಯ ಗುಂಪು 1 (MIG1): 6 ಲಕ್ಷದಿಂದ 12 ಲಕ್ಷ ರೂ.
  • ಮಧ್ಯಮ ಆದಾಯ ಗುಂಪು 2 (MIG2): 12 ಲಕ್ಷದಿಂದ 18 ಲಕ್ಷ ರೂ.
  • ಕಡಿಮೆ ಆದಾಯದ ಗುಂಪು (LIG) : 3 ಲಕ್ಷದಿಂದ 6 ಲಕ್ಷ ರೂ.
  • ಆರ್ಥಿಕವಾಗಿ ಹಿಂದುಳಿದ ವರ್ಗ (EWS): 3 ಲಕ್ಷ ರೂ.ವರೆಗೆ

ಈ ʼಪ್ರಧಾನ ಮಂತ್ರಿ ಆವಾಸ್ ಯೋಜನೆʼಯನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಾಗಿ ವಿಂಗಡಿಸಲಾಗಿದೆ.

  • ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ
  • ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ

ಫಲಾನುಭವಿಗಳ ಅರ್ಹತೆ ಏನು?

  • ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಲವು ಅರ್ಹತೆಗಳನ್ನು ಹೊಂದಿರಬೇಕು
  • ಒಂದು ಅಥವಾ ಎರಡು ಕೊಠಡಿಗಳು, ಕಚ್ಚಾ ಗೋಡೆಗಳು, ಕಚ್ಚಾ ಛಾವಣಿಯಿರುವ ಕುಟುಂಬಗಳು ಅರ್ಜಿ ಸಲ್ಲಿಸಬಹುದು
  • 25 ವರ್ಷ ಮೇಲ್ಪಟ್ಟ ಕುಟುಂಬದ ಅನಕ್ಷರಸ್ಥರು ಅರ್ಜಿ ಸಲ್ಲಿಸಬಹುದು
  • 16 ಮತ್ತು 59 ವರ್ಷ ವಯಸ್ಸಿನ ವಯಸ್ಕ ಪುರುಷ ಸದಸ್ಯರಿಲ್ಲದ ಕುಟುಂಬ
  • 16 ರಿಂದ 59 ವರ್ಷ ವಯಸ್ಸಿನ ವಯಸ್ಕ ಸದಸ್ಯರಿಲ್ಲದ ಕುಟುಂಬ
  • ಯಾವುದೇ ಸಾಮರ್ಥ್ಯವಿರುವ ಸದಸ್ಯರಿಲ್ಲದ ಕುಟುಂಬಗಳು ಮತ್ತು ಅಂಗವಿಕಲ ಸದಸ್ಯರನ್ನು ಹೊಂದಿರುವವರು
  • ಭೂರಹಿತ ಕುಟುಂಬಗಳು ಸಾಂದರ್ಭಿಕ ಕೆಲಸದ ಮೂಲಕ ಆದಾಯ ಗಳಿಸುತ್ತವೆ
  • ಪರಿಶಿಷ್ಟ ಜಾತಿ, ಪಂಗಡ, ಇತರೆ & ಅಲ್ಪಸಂಖ್ಯಾತರು

ಈ ಅರ್ಹತೆಗಳನ್ನೂ ಹೊಂದಿರಬೇಕು

  • ಅರ್ಜಿದಾರರು ಭಾರತದ ನಿವಾಸಿಯಾಗಿರಬೇಕು
  • ಅರ್ಜಿದಾರರು ಶಾಶ್ವತ ಮನೆ ಹೊಂದಿರಬಾರದು
  • ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು
  • ಅರ್ಜಿದಾರರ ವಾರ್ಷಿಕ ಆದಾಯ 3 ಲಕ್ಷದಿಂದ 6 ಲಕ್ಷ ರೂ. ನಡುವೆ ಇರಬೇಕು
  • ಅರ್ಜಿದಾರರ ಹೆಸರು ಪಡಿತರ ಚೀಟಿ ಅಥವಾ ಪಿಬಿಎಲ್ ಪಟ್ಟಿಯಲ್ಲಿರಬೇಕು
  • ಅರ್ಜಿದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಇಟ್ಟುಕೊಳ್ಳುವುದು ಕಡ್ಡಾಯ. ಅಲ್ಲದೆ ಯಾವುದೇ ರೀತಿಯ ಗುರುತಿನ ಚೀಟಿಯನ್ನು ಹೊಂದಿರಬೇಕು
  • ʼಪ್ರಧಾನ ಮಂತ್ರಿ ಆವಾಸ್ ಯೋಜನೆʼಯ ಅಗತ್ಯ ದಾಖಲೆಗಳು
  • ನೀವು ʼಪ್ರಧಾನ ಮಂತ್ರಿ ಆವಾಸ್ ಯೋಜನೆʼಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ ಈ ದಾಖಲೆಗಳನ್ನು ಹೊಂದಿರಬೇಕು
  • ಆಧಾರ್ ಕಾರ್ಡ್ ಅಥವಾ ಆಧಾರ್ ಸಂಖ್ಯೆ
  • ನಿಮ್ಮ ಫೋಟೋ
  • ಫಲಾನುಭವಿಯ ಜಾಬ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಸಂಖ್ಯೆ
  • ಬ್ಯಾಂಕ್ ಪಾಸ್‌ಬುಕ್
  • ಸ್ವಚ್ಛ ಭಾರತ್ ಮಿಷನ್ (SBM) ನೋಂದಣಿ ಸಂಖ್ಯೆ
  • ಮೊಬೈಲ್ ನಂಬರ್

PMAYಗೆ ಅರ್ಜಿ ಸಲ್ಲಿಸುವುದು ಹೇಗೆ?

ಇದನ್ನೂ ಓದಿ: ಕಳೆದುಹೋದ ನಿಮ್ಮ ಫೋನ್‌ನಲ್ಲಿರುವ.. GPay-Phonepay UPI ಐಡಿ ನಿಷ್ಕ್ರಿಯಗೊಳಿಸುವುದು ಹೇಗೆ..? 

ವಸತಿ ನಗರಾಭಿವೃದ್ಧಿ ಸಚಿವಾಲಯವು ಈ ಯೋಜನೆಯಡಿ ಮನೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಎರಡೂ ಪುಟಗಳಲ್ಲಿ ನಿಮ್ಮ ವಿವರಗಳನ್ನು ನಮೂದಿಸಬೇಕಾಗುತ್ತದೆ.

  • ಪುಟ 1: ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಆಧಾರ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ ಮುಂದಿನ ಪುಟಕ್ಕೆ ಹೋಗಬೇಕು
  • ಪುಟ 2: ಅರ್ಜಿದಾರರು ವೈಯಕ್ತಿಕ ವಿವರಗಳನ್ನು ನಮೂದಿಸಬೇಕು. ಯಾವ ರಾಜ್ಯಕ್ಕೆ ಸೇರಿದವರು ಎಂಬುದನ್ನು ನಮೂದಿಸಬೇಕು. ಕುಟುಂಬದ ಮುಖ್ಯಸ್ಥ, ಅವರ ಪ್ರಸ್ತುತ ವಸತಿ ವಿಳಾಸ ಮತ್ತು ಇತರ ಪ್ರಮುಖ ವಿವರಗಳನ್ನು ಒದಗಿಸಬೇಕು
  • ಇದಕ್ಕಾಗಿ ಮೊದಲು ʼಪ್ರಧಾನ ಮಂತ್ರಿ ಆವಾಸ್ ಯೋಜನೆʼಯ ಅಧಿಕೃತ ವೆಬ್‌ಸೈಟ್ pmaymis.gov.in ಗೆ ಹೋಗಿ
  • ಸಿಟಿಜನ್ ಅಸೆಸ್‌ಮೆಂಟ್ ಡ್ರಾಪ್‌ಡೌನ್ ಅಡಿ ಬೆನಿಫಿಟ್ ಅಂಡರ್ 3 ಕಾಂಪೊನೆಂಟ್‌ಗಳ ಅಡಿಯಲ್ಲಿ ಕ್ಲಿಕ್ ಮಾಡಬೇಕು
  • ಆಧಾರ್ ಸಂಖ್ಯೆಯನ್ನು ಕ್ಲಿಕ್ ಮಾಡಿ ಮತ್ತು Submit ಮಾಡಬೇಕು
  • ಸಂಖ್ಯೆ ಸರಿಯಾಗಿದ್ದರೆ ಅದು ಇನ್ನೊಂದು ಪುಟಕ್ಕೆ ಹೋಗುತ್ತದೆ. ಅಲ್ಲಿ ನಿಮ್ಮ ವಿವರಗಳನ್ನು ನಮೂದಿಸಬೇಕು.
  • ನಿಮ್ಮ ವಿವರಗಳನ್ನು ತಪ್ಪಾಗಿ ನಮೂದಿಸಿದ್ದರೆ, ನಿಮ್ಮ ಆಧಾರ್ ಸಂಖ್ಯೆ ಮತ್ತು ಅಪ್ಲಿಕೇಶನ್ ಸಂಖ್ಯೆಯ ಸಹಾಯದಿಂದ ತಿದ್ದುಪಡಿ ಮಾಡಲು ಸಾಧ್ಯವಿರುತ್ತದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News