LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಿಹಿಸುದ್ದಿ: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!

LPG-Aadhar linking: LPG ಸಿಲಿಂಡರ್‌ಗಳಿಗೆ e-KYC ದೃಢೀಕರಣ ಪ್ರಕ್ರಿಯೆ ಅನುಸರಿಸಲು ಯಾವುದೇ ಗಡುವು ಇಲ್ಲವೆಂದು ಕೇಂದ್ರ ಪೆಟ್ರೋಲಿಯಂ & ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ. ಕೇರಳ ವಿಧಾನಸಭಾ ವಿಪಕ್ಷ ನಾಯಕ ವಿ.ಡಿ.ಸತೀಶನ್ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಈ ಬಗ್ಗೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. 

Written by - Puttaraj K Alur | Last Updated : Jul 9, 2024, 07:41 PM IST
  • LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ
  • LPG ಸಿಲಿಂಡರ್‌ಗಳಿಗೆ e-KYC ದೃಢೀಕರಣಕ್ಕೆ ಯಾವುದೇ ಗಡುವು ಇಲ್ಲ
  • ಜನರ ʼQʼ ಕಂಡು ಮಹತ್ವದ ಘೋಷಣೆ ಮಾಡಿದ ಕೇಂದ್ರ ಸರ್ಕಾರ
LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಿಹಿಸುದ್ದಿ: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ! title=
ಕೇಂದ್ರದಿಂದ ಮಹತ್ವದ ಘೋಷಣೆ!

LPG-Aadhar linking: LPG ಸಿಲಿಂಡರ್‌ಗಳಿಗೆ e-KYC ದೃಢೀಕರಣ ಮಾಡಲು ಜನರು ಗ್ಯಾಸ್ ಏಜೆನ್ಸಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಗ್ಯಾಸ್‌ ಸಬ್ಸಿಡಿಗೆ ಈ ಪ್ರಕ್ರಿಯೆ ಕಡ್ಡಾಯವೆಂಬ ವಂದತಿ ಹಿನ್ನೆಲೆ ಸಾವಿರಾರು ಜನರು e-KYC ಮಾಡಿಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರವು ಮಹತ್ವದ ಘೋಷಣೆ ಮಾಡಿದೆ. 

LPG ಸಿಲಿಂಡರ್‌ಗಳಿಗೆ e-KYC ದೃಢೀಕರಣ ಪ್ರಕ್ರಿಯೆ ಅನುಸರಿಸಲು ಯಾವುದೇ ಗಡುವು ಇಲ್ಲವೆಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ. ಕೇರಳ ವಿಧಾನಸಭಾ ವಿಪಕ್ಷ ನಾಯಕ ವಿ.ಡಿ ಸತೀಶನ್ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಈ ಬಗ್ಗೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. 

ಇದನ್ನೂ ಓದಿ: ಮಾಲೀಕರ ಮಾಹಿತಿಗಾಗಿ ಆರ್‌ಟಿಓ ಅಧಿಕಾರಿಗಳಿಗೆ ಪತ್ರ

ಈ ಬಗ್ಗೆ ಟ್ವೀಟ್‌ ಮಾಡಿರುವ ಹರ್ದೀಪ್‌ ಸಿಂಗ್‌ ಪುರಿ, ʼವಾಣಿಜ್ಯ ಸಿಲಿಂಡರ್‌ಗಳನ್ನು ಕೆಲವು ಗ್ಯಾಸ್ ವಿತರಕರಿಂದ ಹೆಚ್ಚಾಗಿ ಬುಕ್ ಮಾಡಲಾಗುತ್ತಿರುವ ನಕಲಿ ಗ್ರಾಹಕರನ್ನು ತೆಗೆದುಹಾಕಲು ಆಯಿಲ್ ಮಾರ್ಕೆಟಿಂಗ್ ಕಂಪನಿಗಳು LPG ಗ್ರಾಹಕರಿಗೆ eKYC ಆಧಾರ್ ದೃಢೀಕರಣವನ್ನು ಕೈಗೊಳ್ಳುತ್ತಿವೆ. ಈ ಪ್ರಕ್ರಿಯೆಯು 8 ತಿಂಗಳಿಗೂ ಹೆಚ್ಚು ಕಾಲ ಜಾರಿಯಲ್ಲಿದೆʼ ಎಂದು ಹೇಳಿದ್ದಾರೆ. 

ʼಈ ಪ್ರಕ್ರಿಯೆಯಲ್ಲಿ LPG ಸಿಲಿಂಡರ್‌ಗಳನ್ನು ಗ್ರಾಹಕರಿಗೆ ತಲುಪಿಸುವಾಗ LPG ವಿತರಣಾ ಸಿಬ್ಬಂದಿ ರುಜುವಾತುಗಳನ್ನು ಪರಿಶೀಲಿಸುತ್ತಾರೆ. ವಿತರಣಾ ಸಿಬ್ಬಂದಿ ತಮ್ಮ ಮೊಬೈಲ್ ಫೋನ್ ಬಳಸಿ ಗ್ರಾಹಕರ ಆಧಾರ್ ರುಜುವಾತುಗಳನ್ನು ಅಪ್ಲಿಕೇಶನ್ ಮೂಲಕ ತೆಗೆದುಕೊಳ್ಳುತ್ತಾರೆ. ಗ್ರಾಹಕರು OTPಯನ್ನು ಸ್ವೀಕರಿಸುತ್ತಾರೆ, ಇದನ್ನು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಳಸಲಾಗುತ್ತದೆ. ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ವಿತರಕರ ಶೋರೂಮ್ ಅನ್ನು ಸಹ ಸಂಪರ್ಕಿಸಬಹುದು. ಪರ್ಯಾಯವಾಗಿ ಗ್ರಾಹಕರು OMC ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬಹುದು ಮತ್ತು e-KYCಯನ್ನು ತಾವಾಗಿಯೇ ಪೂರ್ಣಗೊಳಿಸಬಹುದುʼ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ

ತೈಲ ಮಾರುಕಟ್ಟೆ ಕಂಪನಿಗಳು ಅಥವಾ ಕೇಂದ್ರ ಸರ್ಕಾರದಿಂದ ಈ ಚಟುವಟಿಕೆಗೆ ಯಾವುದೇ ಗಡುವು ಇಲ್ಲ. LPG ವಿತರಕರ ಶೋರೂಮ್‌ಗಳಲ್ಲಿ ಗ್ರಾಹಕರ "ಮಸ್ಟರಿಂಗ್" ಇಲ್ಲವೆಂದು OMCಗಳು ಸ್ಪಷ್ಟಪಡಿಸಿವೆ. ಇದಲ್ಲದೆ ಗ್ರಾಹಕರಿಗೆ ಭರವಸೆ ನೀಡಲು ಮತ್ತು ನಿಜವಾದ ಗ್ರಾಹಕರಿಗೆ ಯಾವುದೇ ತೊಂದರೆ ಅಥವಾ ಅನಾನುಕೂಲತೆ ಉಂಟಾಗದಂತೆ ಖಚಿತಪಡಿಸಿಕೊಳ್ಳಲು ತೈಲ ಕಂಪನಿಗಳು ಈ ವಿಷಯದಲ್ಲಿ ಒತ್ತಡ ಹೇರಲು ಸ್ಪಷ್ಟೀಕರಣವನ್ನು ನೀಡುತ್ತಿವೆʼ ಎಂದು ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News