LPG Gas Cylinder Price Today: ತಿಂಗಳ ಮೊದಲ ದಿನವೇ ಅಂದರೆ ಜೂನ್ 1 ರಂದು ಎಲ್‌ ಪಿ ಜಿ ಸಿಲಿಂಡರ್ ಬೆಲೆಯಲ್ಲಿ ದೊಡ್ಡ ಇಳಿಕೆ ಕಂಡುಬರುತ್ತಿದೆ. ತೈಲ ಕಂಪನಿಗಳು ಜೂನ್ 1 ರಂದು ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರಿಲೀಫ್ ನೀಡಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL ಮುಗಿಯುತ್ತಿದ್ದಂತೆ ಆಸ್ಪತ್ರೆ ಸೇರಿದ ಎಂ ಎಸ್ ಧೋನಿ! ಏನಾಯ್ತು ಗೊತ್ತಾ?


ಸರ್ಕಾರಿ ತೈಲ ಕಂಪನಿಗಳು (ಒಎಂಸಿ) ಬಿಡುಗಡೆ ಮಾಡಿದ ಬೆಲೆಯ ಪ್ರಕಾರ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 83 ರೂ.ನಷ್ಟು ಇಳಿಕೆಯಾಗಿದೆ. 19 ಕೆಜಿ ವಾಣಿಜ್ಯ ಎಲ್‌ ಪಿ ಜಿ ಗ್ಯಾಸ್ ಸಿಲಿಂಡರ್‌ ಗೆ ಈಗ 1773 ರೂ. ಆಗಿದೆ ಈ ಮೊದಲು ಸಿಲಿಂಡರ್ ರೂ.1856.50 ಇತ್ತು. ಆದರೆ, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಮೊದಲಿನ ದರದಲ್ಲೇ ದೊರೆಯಲಿದೆ.


ವಿಮಾನ ಪ್ರಯಾಣದ ಮೇಲೆ ಬೀರಬಹುದು ಪರಿಣಾಮ:


ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಪರಿಹಾರ ನೀಡುವುದಲ್ಲದೆ, ಜೆಟ್ ಇಂಧನ (ವಾಯು ಇಂಧನ) ಬೆಲೆಯನ್ನು ತೈಲ ಕಂಪನಿಗಳು ಕಡಿತಗೊಳಿಸಿವೆ. ಬೆಲೆಯಲ್ಲಿ ಸುಮಾರು ರೂ.6,600 ಇಳಿಕೆಯಾಗಿದೆ. ಇದು ಮುಂದಿನ ದಿನಗಳಲ್ಲಿ ವಿಮಾನ ಪ್ರಯಾಣದ ಮೇಲೆ ಪರಿಣಾಮ ಬೀರಬಹುದು. ಜೂನ್ 1 ರಿಂದ ಹೊಸ ದರಗಳನ್ನು ಜಾರಿಗೆ ತರಲಾಗಿದೆ. ತೈಲ ಕಂಪನಿಗಳು ದೇಶೀಯ ಎಲ್‌ ಪಿ ಜಿ ಸಿಲಿಂಡರ್‌ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.


ವಾಣಿಜ್ಯ ಅನಿಲ ಸಿಲಿಂಡರ್‌ ಗಳ ಹೊಸ ದರಗಳು:


ದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್ 1856.50 ರೂ.ನಿಂದ 1773 ರೂ.ಗೆ ಇಳಿದಿದೆ. ಕೋಲ್ಕತ್ತಾದಲ್ಲಿ ಹಿಂದಿನ 1960.50 ರೂ.ಗೆ ಹೋಲಿಸಿದರೆ ಈಗ 1875.50 ರೂ. ಇದೆ. ಅದೇ ರೀತಿ ಈ ಹಿಂದೆ ಮುಂಬೈನಲ್ಲಿ 1808.50 ರೂ.ಗೆ ಲಭ್ಯವಿದ್ದು, ಈಗ 1725 ರೂ.ಗೆ ಲಭ್ಯವಾಗಲಿದೆ. ಚೆನ್ನೈನಲ್ಲಿ 2021.50 ರೂ.ನಿಂದ 1937 ರೂ.ಗೆ ಇಳಿದಿದೆ.


ಇದನ್ನೂ ಓದಿ: ಈತನೂ RCB ಪ್ಲೇಯರ್.. ಆದ್ರೆ ವಿರಾಟ್’ಗೆ ದೊಡ್ಡ ಶತ್ರು! WTC ಫೈನಲ್’ನಲ್ಲಿ ಈತನಿಂದಲೇ ಟೀಂ ಇಂಡಿಯಾಗೆ ಸಂಕಷ್ಟ!


ಎ ಟಿ ಎಫ್ ಬೆಲೆಯಲ್ಲಿ ಭಾರೀ ಕಡಿತ:


ಎಲ್‌ ಪಿ ಜಿಯ ಹೊರತಾಗಿ, ತೈಲ ಕಂಪನಿಗಳು ಎ ಟಿ ಎಫ್ ಬೆಲೆಯನ್ನು ತೀವ್ರವಾಗಿ ಕಡಿತಗೊಳಿಸಿವೆ. ಒಂದು ಕಿಲೋ ಲೀಟರ್ ಬೆಲೆ 6600 ರೂ.ಗೆ ಇಳಿದಿದೆ. ದೆಹಲಿಯಲ್ಲಿ ಎಟಿಎಫ್ ಬೆಲೆ ಹಿಂದಿನ ರೂ 95935.34 ರಿಂದ ರೂ 89,303.09 ಕ್ಕೆ ಇಳಿದಿದೆ. ಈ ಹಿಂದೆ ಮುಂಬೈನಲ್ಲಿ ಪ್ರತಿ ಕಿಲೋಲೀಟರ್‌ ಗೆ ರೂ.89348.60 ಬೆಲೆ ಇತ್ತು, ಇದು ಈಗ ಪ್ರತಿ ಕಿಲೋಲೀಟರ್‌ಗೆ ರೂ.83,413.96 ದರದಲ್ಲಿ ಲಭ್ಯವಿರುತ್ತದೆ. ದರ ಇಳಿಕೆಯಾಗಿದ್ದು, ಕೋಲ್ಕತ್ತಾದಲ್ಲಿ ಪ್ರತಿ ಕಿಲೋ ಲೀಟರ್‌ಗೆ 95,963.95 ಮತ್ತು ಚೆನ್ನೈನಲ್ಲಿ 93,041.33 ರೂ. ಇದೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ