LPG Price Rise: LPG ಬೆಲೆಯಲ್ಲಿ ಶೇ.60ರಷ್ಟು ಏರಿಕೆ! ಗ್ರಾಹಕರಿಗೆ ಬಿಗ್ ಶಾಕ್ ನೀಡಲಿದೆಯೇ ONGC?
LPG Price Rise - ಕೇಂದ್ರ ಸರ್ಕಾರ ಅಕ್ಟೋಬರ್ 1 ರಿಂದ ಅಡುಗೆ ಅನಿಲದ ದರ ಪರಿಷ್ಕರಣೆ ಮಾಡಲಿದೆ. ವಿಶೇಷ ಎಂದರೆ, ಈ ಬಾರಿ LPG ಬೆಲೆಯಲ್ಲಿ ಶೇ.60 ರಷ್ಟು ಏರಿಕೆಯಾಗುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.
ನವದೆಹಲಿ: LPG Price Rise - ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೈಸರ್ಗಿಕ ಅನಿಲ ಬೆಲೆ ಏರಿಕೆಯ ಪ್ರವೃತ್ತಿ ಮುಂದುವರೆದಿದೆ. ದೇಶೀಯ ಗಣಿಗಾರಿಕೆ ಕ್ಷೇತ್ರಗಳಿಂದ ಉತ್ಪತ್ತಿಯಾಗುವ ಅನಿಲದ ಮೇಲೆ ಇದರ ಪರಿಣಾಮವು ಶೀಘ್ರದಲ್ಲೇ ಕಂಡುಬರಲಿದೆ. ದೇಶೀಯ ಅನಿಲದ ಹೊಸ ಬೆಲೆಗಳನ್ನು ಅಕ್ಟೋಬರ್ 1 ರಂದು ಸರ್ಕಾರ ಬಿಡುಗಡೆ ಮಾಡಲಿದೆ. ವಿಶೇಷವೆಂದರೆ ಈ ಬಾರಿ ಎಲ್‌ಪಿಜಿಯ (LPG Cylinder) ಬೆಲೆ ಶೇಕಡಾ 60 ರಷ್ಟು ಹೆಚ್ಚಾಗುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.
ಇದನ್ನೂ ಓದಿ-CBSE ವಿದ್ಯಾರ್ಥಿಗಳಿಗೊಂದು ನೆಮ್ಮದಿಯ ಸುದ್ದಿ, DADS Portal ಬಿಡುಗಡೆಗೊಳಿಸಿದ CBSE
LPG ಬೆಲೆ ಹೆಚ್ಚಾಗುವ ಸಾಧ್ಯತೆ
ಭಾರತದ ತೈಲ ಅನಿಲ ಗಣಿಗಾರಿಕೆ ಕ್ಷೇತ್ರದಲ್ಲಿ ಅತಿದೊಡ್ಡ ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಯಾಗಿರುವ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (Oil And Natural Gas Corporation) ಈ ಬಾರಿ ನೈಸರ್ಗಿಕ ಅನಿಲ ಬೆಲೆಯಲ್ಲಿ ಶೇ .60 ರಷ್ಟು ಹೆಚ್ಚಿಸುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲ (LPG Connection) ಬೆಲೆಗಳ ಹೆಚ್ಚಳದಿಂದಾಗಿ, ತೈಲ ಕಂಪನಿಗಳ ಆದಾಯದ ಮೇಲೂ ಇದರ ಪರಿಣಾಮ ಗೋಚರಿಸುತ್ತದೆ. ಎಲ್‌ಪಿಜಿ ಅನಿಲದ ಮೇಲಿನ ಸಬ್ಸಿಡಿಯನ್ನು ಕೂಡ ಸರ್ಕಾರ ಕೆಲ ದಿನಗಳ ಹಿಂದೆ ಸ್ಥಗಿತಗೊಳಿಸಿದೆ. ಹೀಗಾಗಿ ಇದೀಗ LPG ಮೇಲೆ ಸರ್ಕಾರ ನೀಡುತ್ತಿದ್ದ ಸಬ್ಸಿಡಿಯ ಭಾರ ಕೂಡ ತೈಲೋತ್ಮನ್ನ ಕಂಪನಿಗಳ ಮೇಲೆಯೇ ಬೀಳುತ್ತಿದೆ.
ಇದನ್ನೂ ಓದಿ-Fact Check: ಜುಲೈ ತಿಂಗಳಿನಿಂದ DA-DR ಸಿಗಲಿದೆ! ಸರ್ಕಾರಿ ನೌಕರರು ಓದಲೇ ಬೇಕಾದ ಸುದ್ದಿ ಇದು
ಸಬ್ಸಿಡಿ ಸ್ಥಗಿತಗೊಂಡ ಕಾರಣ ONGCಗೆ ಲಾಭ
ಕಂಪನಿಯ ವಾರ್ಷಿಯ ಆರ್ಥಿಕ ಪರಿಣಾಮಗಳ ಕುರಿತು ಹೇಳಿಕೆ ನೀಡಿರುವ ONGC ಕಂಪನಿಯ CMD ಸುಭಾಶ್ ಕುಮಾರ್, ಜನವರಿ-ಮಾರ್ಚ್ 2021 ರಲ್ಲಿ, ತೈಲ ಕಂಪನಿ ಕಚ್ಚಾ ತೈಲವನ್ನು 58.05 ಡಾಲರ್ ಪ್ರತಿ ಬ್ಯಾರೆಲ್ ದರದಲ್ಲಿ ಮಾರಾಟ ಮಾಡಿದೆ ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಗ್ರಾಹಕರಿಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ರದ್ದುಗೊಳಿಸಿದ ನಂತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದರೂ ಕಂಪನಿಯು 6,734 ಕೋಟಿ ರೂ. ಗಳಿಕೆ ಮಾಡಿದೆ. ಇದಲ್ಲದೆ ಕಂಪನಿಯು ಈ ವರ್ಷ 29,500 ಕೋಟಿ ರೂ.ಗಳಲ್ಲಿ ಹೂಡಿಕೆ ಮಾಡಲಿದೆ ಎಂದು ಸುಭಾಷ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ-'ಮೋದಿ ಜಾಗದಲ್ಲಿ ಬೇರೆ ಯಾರಿದ್ದರೂ ಕೂಡ ಭಾರತದ ಜೊತೆಗೆ ಸಂಬಂಧ ಸರಿಯಾಗಿರುತ್ತಿತ್ತು'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.