ನವದೆಹಲಿ : ಇತ್ತೀಚಿನ ದಿನಗಳಲ್ಲಿ ದಿನೇ ದಿನೇ ಆಧಾರ್ ಕಾರ್ಡ್ ಪ್ರಾಮುಖ್ಯತೆ ಹೆಚ್ಚುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಆಧಾರ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನವೀಕರಿಸಲು ಯುಐಡಿಎಐ (UIDAI) ಎಂಆಧಾರ್ (mAadhaar) ಅಪ್ಲಿಕೇಶನ್ ಅನ್ನು ರಚಿಸಿದೆ. ಇದರಿಂದ ನೀವು ಒಂದೇ ಒಂದು ಕ್ಲಿಕ್‌ನಲ್ಲಿ 35 ಸೇವೆಯನ್ನು ಪಡೆಯುತ್ತೀರಿ. ಈ ಅಪ್ಲಿಕೇಶನ್ ಬಳಸುವುದರಿಂದ ನಿಮಗೆ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಅಷ್ಟು ಮಾತ್ರವಲ್ಲ ನಿಮ್ಮ ಓಡಾಟದ ಖರ್ಚು ಸಹ ಉಳಿಯುತ್ತದೆ.


COMMERCIAL BREAK
SCROLL TO CONTINUE READING

mAadhaar ಅಪ್ಲಿಕೇಶನ್‌ನಲ್ಲಿ ಏನಿದೆ:
ಆಧಾರ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ನೀವು ಇನ್ನು ಮುಂದೆ ಪ್ರತಿ ಕೆಲಸಕ್ಕೂ  ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಅಗತ್ಯವಿಲ್ಲ. ಆಧಾರ್ ಕಾರ್ಡ್ (Aadhaar Card) ಮರು ಮುದ್ರಣ, ವಿಳಾಸ ನವೀಕರಣ, ಆಫ್‌ಲೈನ್ ಇ-ಕೆವೈಸಿ, ಕ್ಯೂಆರ್ ಕೋಡ್‌ಶೋ ಅಥವಾ ಸ್ಕ್ಯಾನ್, ಆಧಾರ್ ಪರಿಶೀಲನೆ, ಮೇಲ್ / ಇಮೇಲ್ ವೆರಿಫಿಕೇಶನ್ ಸೇರಿದಂತೆ ಮುಂತಾದ 35 ಸೇವೆಗಳನ್ನು ಎಂಎಧಾರ್  (mAadhaar) ಆ್ಯಪ್ ಮೂಲಕ ಪಡೆಯಬಹುದು. ಇದಕ್ಕಾಗಿ, ನೀವು ಕೇವಲ ಆಧಾರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ನಿಮ್ಮ ಅನೇಕ ಸಮಸ್ಯೆಗಳನ್ನು ಮನೆಯಿಂದಲೇ ಪರಿಹರಿಸಲು ಸಾಧ್ಯವಾಗುತ್ತದೆ.


ಇದನ್ನೂ ಓದಿ - UIDAI New Development: mAadhaarನಲ್ಲಿ ಈಗ ಸಾಧ್ಯವಾಗುತ್ತೆ ಈ ಕೆಲಸ


mAadhaar ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ ?
Google ನ ಪ್ಲೇ ಸ್ಟೋರ್‌ನಿಂದ mAadhaar ಅಪ್ಲಿಕೇಶನ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಇದರ ನಂತರ, ಈ ಆ್ಯಪ್ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಪಡೆಯಬಹುದು. ಈ ಅಪ್ಲಿಕೇಶನ್‌ನ ಉದ್ದೇಶ ಜನರು ತಮ್ಮ ಆಧಾರ್ ಸಂಬಂಧಿತ ಸಮಸ್ಯೆಯನ್ನು  ಪರಿಹರಿಸಿಕೊಳ್ಳಲು ಪ್ರತಿ ಕೆಲಸಕ್ಕೂ  ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವುದನ್ನು ತಪ್ಪಿಸುವುದು. 


ಡಿಜಿಟಲ್ ಇಂಡಿಯಾದ ಈ ಯುಗದಲ್ಲಿ, ಹೆಚ್ಚಿನ ಕೆಲಸಗಳನ್ನು ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ. ಈ ಅನುಕ್ರಮದಲ್ಲಿ, ಈ mAadhaar ಅಪ್ಲಿಕೇಶನ್ ಅನ್ನು ಸಹ ಸಿದ್ದಪಡಿಸಲಾಗಿದೆ. ಸಾವಿರಾರು ಜನರು mAadhaar ಅಪ್ಲಿಕೇಶನ್ ಅನ್ನು ಬಳಸುತ್ತಾರೆ ಮತ್ತು UIDAI ನಲ್ಲಿ ತಮ್ಮ ಮಾಹಿತಿಯನ್ನು ಮನೆಯಿಂದಲೇ ನವೀಕರಿಸುತ್ತಾರೆ.


ಇದನ್ನೂ ಓದಿ - mAadhaar Appನಲ್ಲಿ ಹೆಚ್ಚಿನ ಸೇವೆ ಪಡೆಯುವುದು ಹೇಗೆ ಎಂದು ತಿಳಿಯಿರಿ


ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಕೊನೆಯ ದಿನಾಂಕ:
31 ಮಾರ್ಚ್ 2021 ರೊಳಗೆ ನಿಮ್ಮ ಆಧಾರ್ ಕಾರ್ಡ್‌ಗೆ ನೀವು ಪ್ಯಾನ್ ಅನ್ನು ಲಿಂಕ್ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಹೆಚ್ಚಿನ ತೊಂದರೆ ಎದುರಿಸಬೇಕಾಗಬಹುದು. ನಿಗದಿತ ದಿನಾಂಕದೊಳಗೆ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ನಿಮ್ಮ ಆಧಾರ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಬಹುದು. ಇದು ಮಾತ್ರವಲ್ಲ, ನೀವು ನಿಷ್ಕ್ರಿಯಗೊಳಿಸುವ ಕಾರ್ಡ್ ಅನ್ನು ಸಕ್ರಿಯಗೊಳಿಸಲು ಹೋದಾಗ ನಂತರ 10 ಸಾವಿರ ರೂಪಾಯಿಗಳವರೆಗೆ ದಂಡವನ್ನು ವಿಧಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.