ಒಂಬತ್ತು ಆಸನಗಳ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ ಮಹೀಂದ್ರದ ಹೊಸ ಸ್ಕಾರ್ಪಿಯೊ
ನಾಲ್ಕು ಚಕ್ರಗಳ ವಾಹನಗಳ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಹೀಂದ್ರ ಇದೀಗ ಗ್ರಾಹಕರ ಮನಗೆಲ್ಲಲು ಹೊಸ ರೂಪಾಂತರದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಈ ಹೊಸ ಕಾರಿನಲ್ಲಿ ನೀವು ಕೇವಲ ಏಳಲ್ಲ ಒಂಬತ್ತು ಆಸನಗಳ ಕಾರ್ ಅನ್ನು ಆಯ್ಕೆ ಮಾಡಲು ಅವಕಾಶವಿದೆ.
ಬೆಂಗಳೂರು: ಪ್ರಸ್ತುತ ಭಾರತದಲ್ಲಿ ಜನಪ್ರಿಯ ಕಾರು ತಯಾರಿಕ ಕಂಪನಿಯಾಗಿ ಹೊರಹೊಮ್ಮಿರುವ ಮಹೀಂದ್ರ ಇದೀಗ ಹೊಸ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಹೆಸರಿನ ಕಾರಿನೊಂದಿಗೆ ಮತ್ತೆ ಜನರ ಮನಗೆಲ್ಲಲು ಸಜ್ಜಾಗಿದೆ. ಪ್ರಸ್ತುತ, ಮಹೀಂದ್ರಾ ಎಸ್ಯುವಿ ಕೇವಲ ಎರಡು (S ಮತ್ತು S11) ರೂಪಾಂತರಗಳಲ್ಲಿ ಲಭ್ಯವಿದೆ. ಇದೀಗ ಮಹೀಂದ್ರ ಕಂಪನಿಯು SS ಎಂಬ ಹೊಸ ರೂಪಾಂತರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಇದು ಕೇವಲ 7 ಅಲ್ಲ 9 ಆಸನಗಳ ಆಯ್ಕೆಯೊಂದಿಗೆ ಲಭ್ಯವಾಗಲಿದೆ.
ಹೌದು, ಬಿಡುಗಡೆಗೂ ಮುನ್ನವೇ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಕಾರಿನ ಕೆಲವು ಪ್ರಮುಖ ಮಾಹಿತಿಗಳು ಸೋರಿಕೆ ಆಗಿದ್ದು, ಬೇಸ್-ಸ್ಪೆಕ್ S ರೂಪಾಂತರವು ಕೇವಲ 9-ಸೀಟ್ ಆಯ್ಕೆಯನ್ನು ಪಡೆದರೆ, S5 ಮತ್ತು S11 ರೂಪಾಂತರಗಳು 7-ಆಸನ ಮತ್ತು 9-ಆಸನಗಳ ಆಯ್ಕೆಗಳನ್ನು ಪಡೆಯುತ್ತವೆ ಎಂದು ತಿಳಿದುಬಂದಿದೆ.
ಏಳು ರೂಪಾಂತರಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್:
ಲಭ್ಯವಿರುವ ಮಾಹಿತಿಗಳ ಪ್ರಕಾರ, ಸ್ಕಾರ್ಪಿಯೋ ಕ್ಲಾಸಿಕ್‌ನ ಒಟ್ಟು ಏಳು ರೂಪಾಂತರಗಳು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿವೆ. ಈ ಹಿಂದೆ, 9-ಸೀಟ್ ಆಯ್ಕೆಯು ಬೇಸ್ ಎಸ್ ರೂಪಾಂತರದೊಂದಿಗೆ ಮಾತ್ರ ಲಭ್ಯವಿತ್ತು. 9-ಆಸನಗಳ ರೂಪಾಂತರವು ಎರಡನೇ ಸಾಲಿನಲ್ಲಿ ಬೆಂಚ್ ಸೀಟ್‌ಗಳನ್ನು ಮತ್ತು ಹಿಂಭಾಗದಲ್ಲಿ 2×2 ಸೈಡ್ ಫೇಸಿಂಗ್ ಬೆಂಚ್ ಸೀಟ್‌ಗಳನ್ನು ಪಡೆಯುತ್ತದೆ. ಸ್ಕಾರ್ಪಿಯೊ ಕ್ಲಾಸಿಕ್‌ನ ಟಾಪ್-ಸ್ಪೆಕ್ S11 ರೂಪಾಂತರವು ಎರಡನೇ ಸಾಲಿನ ಕ್ಯಾಪ್ಟನ್ ಸೀಟ್‌ನ ಆಯ್ಕೆಯನ್ನು ಪಡೆಯುತ್ತದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಶಾಕ್: ಗ್ಯಾಸ್ ಸಿಲಿಂಡರ್ ಮತ್ತೆ ದುಬಾರಿ
ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ವೈಶಿಷ್ಟ್ಯಗಳು:
>> ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಹಲವು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.
>> ಈ ಕಾರ್ ಉಕ್ಕಿನ ಚಕ್ರಗಳು, ಸೆಂಟ್ರಲ್ ಲಾಕಿಂಗ್, ಆಡಿಯೊ ಸಿಸ್ಟಮ್ ಮತ್ತು ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ORVM ಗಳಂತಹ ವೈಶಿಷ್ಟ್ಯಗಳನ್ನು ಪಡೆಯುವ ನಿರೀಕ್ಷೆಯಿದೆ.
>> ಮಹೀಂದ್ರಾ ಸ್ಕಾರ್ಪಿಯೋ LED DRL ಗಳೊಂದಿಗೆ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಫಾಲೋ-ಮಿ-ಹೋಮ್ ಹೆಡ್‌ಲ್ಯಾಂಪ್‌ಗಳು, ಹಿಂಭಾಗದ ವಾಷರ್ ಮತ್ತು ವೈಪರ್ ಮತ್ತು ಮುಂಭಾಗದ ಆರ್ಮ್ ರೆಸ್ಟ್‌ಗಳಂತಹ ವೈಶಿಷ್ಟ್ಯಗಳನ್ನು ಕೂಡ ಪಡೆಯಬಹುದು ಎಂದು ಹೇಳಲಾಗುತ್ತಿದೆ.
>> ಇದು ಡ್ಯುಯಲ್ ಏರ್‌ಬ್ಯಾಗ್‌ಗಳು, ಬಾಗಿಕೊಳ್ಳಬಹುದಾದ ಸ್ಟೀರಿಂಗ್, ಎಂಜಿನ್ ಇಮೊಬಿಲೈಜರ್, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಸುರಕ್ಷತೆಗಾಗಿ ವೇಗ ಎಚ್ಚರಿಕೆಯಂತಹ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ಕೇವಲ 7 ದಿನಗಳಲ್ಲಿ DL ಪಡೆಯಲು ಇಲ್ಲಿದೆ ಸುಲಭ ಆನ್‌ಲೈನ್ ಪ್ರಕ್ರಿಯೆ
ಶಕ್ತಿಯುತ, ದಕ್ಷ ಎಂಜಿನ್‌ನೊಂದಿಗೆ ಲಭ್ಯವಾಗಲಿದೆ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್:
ಕಾರಿನ ಎಂಜಿನ್ ಕಾರ್ಯಕ್ಷಮತೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸ್ಕಾರ್ಪಿಯೊ ಕ್ಲಾಸಿಕ್ 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ, ಇದು ಗರಿಷ್ಠ 130 ಎಚ್‌ಪಿ ಶಕ್ತಿಯನ್ನು ಮತ್ತು 300 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಶಕ್ತಿಯುತ, ದಕ್ಷ ಎಂಜಿನ್‌ನೊಂದಿಗೆ ಲಭ್ಯವಾಗಲಿರುವ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ಕ್‌ನ ಹೊಸ S5 ರೂಪಾಂತರವು ಮಹೀಂದ್ರಾದ S ಮತ್ತು S11 ರೂಪಾಂತರಗಳ ನಡುವಿನ ಬೆಲೆ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.