ಇದೇ ನೋಡಿ ಹೀರೋ ಸ್ಪ್ಲೆಂಡರ್ ನಂತರ ಅತಿ ಹೆಚ್ಚು ಮಾರಾಟವಾಗುತ್ತಿರುವ ದ್ವಿಚಕ್ರ ವಾಹನ

Two Wheeler Sales: ಪ್ರಸ್ತುತ ಅತ್ಯುತ್ತಮ ಬೈಕ್‌ಗಳನ್ನು ಕೂಡ ಹಿಂದಿಕ್ಕುವ ಹಲವು ಸ್ಕೂಟರ್‌ಗಳು ದೇಶದಲ್ಲಿವೆ.

Two Wheeler Sales: ಭಾರತದಲ್ಲಿ ಅತ್ಯುತ್ತಮ ದ್ವಿಚಕ್ರ ವಾಹನಗಳು ಎಂದರೆ ಮೊದಲು ಬರುವ ಹೆಸರು ಹೀರೋ ಸ್ಪ್ಲೆಂಡರ್ ಬೈಕ್. ಆದರೆ, ಪ್ರಸ್ತುತ ಅತ್ಯುತ್ತಮ ಬೈಕ್‌ಗಳನ್ನು ಕೂಡ ಹಿಂದಿಕ್ಕುವ ಹಲವು ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅದರಲ್ಲಿ ಒಂದು ಸ್ಕೂಟರ್ ಹೀರೋ ಸ್ಪ್ಲೆಂಡರ್ ಅನ್ನು ಕೂಡ ಹಿಂದಿಕ್ಕಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /3

ಭಾರತದಲ್ಲಿ ದೀರ್ಘ ಸಮಯದಿಂದಲೂ ಹೀರೋ ಸ್ಪ್ಲೆಂಡರ್ ಬೈಕ್‌ಗೆ ಸರಿ ಸಾಟಿಯಾದ ದ್ವಿಚಕ್ರ ವಾಹನವೇ ಇಲ್ಲ ಎಂಬ ಮಾತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಮಾತು ಹುಸಿಯಾಗಿದೆ. ಅತ್ಯುತ್ತಮ ಬೈಕ್‌ಗಳನ್ನು ಸಹ ಹಿಂದಿಕ್ಕುವ ಸ್ಕೂಟರ್ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದು ಬಜಾಜ್ ಪಲ್ಸರ್, ಹೋಂಡಾ ಶೈನ್ ಹೀರೋ ಮತ್ತು HF ಡಿಲಕ್ಸ್‌ನಂತಹ ಜನಪ್ರಿಯ ಮಾದರಿಗಳಿಗಿಂತ ಹೆಚ್ಚು ಮಾರಾಟವಾಗಿದೆ.  ವಿಶೇಷವೆಂದರೆ ಹೀರೋ ಸ್ಪ್ಲೆಂಡರ್ ನಂತರ ಅತಿ ಹೆಚ್ಚು ಮಾರಾಟವಾಗುತ್ತಿರುವ ದ್ವಿಚಕ್ರ ವಾಹನ ಇದಾಗಿದೆ. 

2 /3

ಹೋಂಡಾ ಆಕ್ಟಿವಾ ಪ್ರಸ್ತುತ ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ದ್ವಿಚಕ್ರ ವಾಹನವಾಗಿದೆ. 2023ರ ಜನವರಿಯಲ್ಲಿ ಹೋಂಡಾ ಆಕ್ಟಿವಾದ 1,30,001 ಯೂನಿಟ್ ಮಾರಾಟವಾಗಿದೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

3 /3

ಕಂಪನಿಯು ಇತ್ತೀಚೆಗೆ ಹೊಸ ಅವತಾರದಲ್ಲಿ ಹೋಂಡಾ ಆಕ್ಟಿವಾವನ್ನು ಬಿಡುಗಡೆ ಮಾಡಿದೆ. ಇದು  125cc ಮತ್ತು 110cc ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರ ಬೆಲೆ 74 ಸಾವಿರ ರೂಪಾಯಿಗಳಿಂದ ಆರಂಭವಾಗುತ್ತದೆ ಮತ್ತು ಟಾಪ್ ಮಾಡೆಲ್ ಬೆಲೆ 80 ಸಾವಿರ ರೂಪಾಯಿಗಳಿಂದ ಲಭ್ಯವಾಗಲಿದೆ.