Maruti Brezza Down Payment And EMI: ಹೊಸ ಕಾರು ಖರೀದಿಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ, ಲಕ್ಷಾಂತರ ರೂಪಾಯಿ ಬೆಲೆಬಾಳುವ ಈ ವಾಹನವನ್ನು ಖರೀದಿಸುವುದು ಸುಲಭದ ಮಾತಲ್ಲ. ಅದಕ್ಕಾಗಿಯೇ ಅನೇಕ ಜನರು ಕಾರು ಖರೀದಿಸಲು EMI ಅನ್ನು ಆಯ್ಕೆ ಮಾಡುತ್ತಾರೆ. ಇದರ ಪ್ರಯೋಜನವೆಂದರೆ ನೀವು ಏಕಕಾಲಕ್ಕೆ ಎಲ್ಲಾ ಮೊತ್ತವನ್ನು ಪಾವತಿಸಬೇಕಾಗಿಲ್ಲ ಮತ್ತು ಸುಲಭವಾದ ಕಂತುಗಳಲ್ಲಿ ಹಣವನ್ನು ಪಾವತಿಸಬಹುದು. ಮಾರುತಿ ಬ್ರೆಝಾ 10 ಲಕ್ಷಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಸಿಗುವ ಒಂದು ಜನಪ್ರಿಯ ಕಾರಾಗಿದೆ. ನೀವೂ ಕೂಡ EMI ನಲ್ಲಿ ಬ್ರೆಝಾ ಕಾರನ್ನು ಖರೀದಿಸಲು ಬಯಸುತ್ತಿದ್ದರೆ, ನಾವು ನಿಮಗಾಗಿ ಬ್ರೆಝಾ ಕಾರಿನ EMI ಕ್ಯಾಲ್ಕುಲೇಟರ್ ಅನ್ನು ತಂದಿದ್ದೇವೆ. ತಿಂಗಳಿಗೆ ಕೇವಲ 10 ಸಾವಿರ ರೂಪಾಯಿ ಪಾವತಿಸುವ ಮೂಲಕ ನೀವು ಈ ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಆನ್ ರೋಡ್ ಬೆಲೆ ಏನು?
ಮಾರುತಿ ಬ್ರೆಝಾ ಮೂಲ ಮಾದರಿಯ ಬೆಲೆ ರೂ 7.99 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ಅದರ ಉನ್ನತ ಮಾದರಿನ ಬೆಲೆ ರೂ 13.96 ಲಕ್ಷದವರೆಗೆ (ಎಕ್ಸ್ ಶೋ ರೂಂ) ವರೆಗೆ ಇರಲಿದೆ. ಇದು ಒಟ್ಟು ನಾಲ್ಕು ಟ್ರಿಮ್‌ ಗಳಾಗಿರುವ LXi, VXi, ZXi ಮತ್ತು ZXi+ ನಲ್ಲಿ ಲಭ್ಯವಿದೆ. ಇಲ್ಲಿ ನಾವು ಉದಾಹರಣೆಗೆ ಮಾರುತಿ ಸುಜುಕಿ ಬ್ರೆಝಾದ ಮೂಲ ರೂಪಾಂತರಿಯಾಗಿರುವ LXI ಅನ್ನು ತೆಗೆದುಕೊಳ್ಳುತ್ತಿದ್ದೇವೆ. ನೀವು ಇದಕ್ಕಿಂತ ಸೋಧಾರಿಸಿದ ರೂಪಾಂತರವನ್ನು ಆರಿಸಿದರೆ, ನಂತರ EMI ಮೊತ್ತವು ಹೆಚ್ಚಾಗುತ್ತದೆ. ಬ್ರೆಝಾ LXI ದೆಹಲಿಯಲ್ಲಿ ನಿಮಗೆ 8,97,090 ರೂ.ಗಳಿಗೆ ಸಿಗುತ್ತದೆ. ಇದರಲ್ಲಿ ಆರ್‌ಟಿಒ 55,930 ಮತ್ತು ವಿಮೆ 42,160 ರೂ.ಶುಲ್ಕಗಳು ಶಾಮೀಲಾಗಿವೆ.


ಡೌನ್ ಪೇಮೆಂಟ್ ಮತ್ತು EMI ಯ ಲೆಕ್ಕಾಚಾರ ಹೇಗಿರಲಿದೆ
ಸರಳ ಲೆಕ್ಕಾಚಾರದಲ್ಲಿ ಹೇಳುವುದಾದರೆ, ನೀವು ಹೆಚ್ಚು ಡೌನ್ ಪೇಮೆಂಟ್ ಅನ್ನು ಪಾವತಿಸಿದರೆ, ನೀವು ಕಡಿಮೆ EMI ಅನ್ನು ಪಾವತಿಸಬೇಕಾಗುತ್ತದೆ, ಆದರೆ ಕಡಿಮೆ ಡೌನ್ ಪಾವತಿ ನಿಮ್ಮ ಕಂತಿನ ಹೊರೆಯನ್ನು ಹೆಚ್ಚಿಸುತದೆ. EMI ಕ್ಯಾಲ್ಕುಲೇಟರ್‌ನಲ್ಲಿ, ನಾವು ಡೌನ್ ಪೇಮೆಂಟ್ ಅನ್ನು ರೂ 3.99 ಲಕ್ಷ, ಬ್ಯಾಂಕ್ ಬಡ್ಡಿ ದರವನ್ನು ಶೇ.9ರಷ್ಟು  ಮತ್ತು 5 ವರ್ಷಗಳ EMI ಅವಧಿಯನ್ನು ಪರಿಗಣಿಸುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನೀವು ಪ್ರತಿ ತಿಂಗಳಿಗೆ ಕೇವಲ 10,340 ರೂ.ಗಳ ಕಂತು ಪಾವತಿಸಬೇಕು.


ಇದನ್ನೂ ಓದಿ-8 ಲಕ್ಷಕ್ಕಿಂತ ಕಡಿಮೆ ಬೆಲೆಯ Mahindra Bolero.. ಕೇವಲ 25 ಸಾವಿರಕ್ಕೆ ಮನೆಗೆ ತನ್ನಿ


ನೀವು ಇದಕ್ಕಿಂತ ಕಡಿಮೆ ಡೌನ್ ಪೇಮೆಂಟ್ ಪಾವತಿಸಲು ಬಯಸುತ್ತಿದ್ದರೆ, ಅದು ಕೂಡ ಸಾಧ್ಯ, ಇದಕ್ಕಾಗಿ, ನೀವು 3.25 ಲಕ್ಷ ರೂ.ಗಳ ಡೌನ್ ಪೇಮೆಂಟ್, ಶೇ.9 ರಷ್ಟು ಬ್ಯಾಂಕ್ ಬಡ್ಡಿ ಮತ್ತು 6 ವರ್ಷಗಳವರೆಗೆ EMI ಅನ್ನು ಪಾವತಿಸಬೇಕು. ಇದರಿಂದ ನಿಮ್ಮ EMI ರೂ 10,312 ಆಗುತ್ತದೆ.


ಇದನ್ನೂ ಓದಿ-ಅಟಲ್ ಪಿಂಚಣಿ ಯೋಜನೆಯ ನಿಯಮಗಳಲ್ಲಿ ಬದಲಾವಣೆ, ತೆರಿಗೆದಾರರಿಗೆ ಬಹು ದೊಡ್ಡ ಶಾಕ್ .!

(ಸೂಚನೆ: ಇಲ್ಲಿ ನೀಡಲಾಗಿರುವ ಕಂತಿನ ಹಣ ಆನ್ಲೈನ್ ಇಎಂಐ ಕ್ಯಾಲ್ಕ್ಯೂಲೆಟರ್ ಅನ್ನು ಆಧರಿಸಿದೆ. ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಬ್ಯಾಂಕ್ ಹಾಗೂ ಕಂಪನಿಯನ್ನು ಸಂಪರ್ಕಿಸಬೇಕು)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.