ನವದೆಹಲಿ : ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರು ಮಾರುತಿ ಸುಜುಕಿ (Maruti Suzuki), ಗ್ರಾಹಕರ ಬಜೆಟ್‌ನಲ್ಲಿ ಎರಡು ಹೊಸ ಸಣ್ಣ ಗಾತ್ರದ ಕಾರುಗಳನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ತರಲಿದೆ (Maruti nes cars).  2022 ರಲ್ಲಿ, ಕಂಪನಿಯು ಅನೇಕ ಹೊಸ ವಾಹನಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಕಂಪನಿಯು ಪ್ರತಿ ಮೂರು ತಿಂಗಳಿಗೊಮ್ಮೆ 6 ಕಾರುಗಳನ್ನು ಬಿಡುಗಡೆ ಮಾಡುತ್ತದೆ. ಇವುಗಳಲ್ಲಿ, ಎರಡು ಸಣ್ಣ ಗಾತ್ರದ ಮಾರುತಿ ಸುಜುಕಿ ಇಗ್ನಿಸ್ ( Suzuki Ignis) ಮತ್ತು ಮಾರುತಿ ಸುಜುಕಿ ಎಸ್-ಪ್ರೆಸ್ಸೊ (S- Presso) ಕೂಡ ಸೇರಿವೆ. ಸ್ಪರ್ಧೆ ಮತ್ತು ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಸಾಕಷ್ಟು ವೈಶಿಷ್ಟ್ಯಗಳೊಂದಿಗೆ ಕಡಿಮೆ ಬೆಲೆಯಲ್ಲಿ ಕಂಪನಿಯು ಕಾರನ್ನು ಬಿಡುಗಡೆ ಮಾಡಲಿದೆ. 


COMMERCIAL BREAK
SCROLL TO CONTINUE READING

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಡ್ಯುಯಲ್ಜೆಟ್
ಮಾರುತಿ ಸುಜುಕಿ (Maruti Suzuki) ಶೀಘ್ರದಲ್ಲೇ S-Presso ಅನ್ನು ಹೊಸ ಡ್ಯುಯಲ್‌ಜೆಟ್ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಬಹುದು.  ಇದನ್ನು ಇತ್ತೀಚೆಗೆ ಸೆಲೆರಿಯೊದೊಂದಿಗೆ ನೀಡಲಾಗಿತ್ತು. ಪ್ರಸ್ತುತ, 1.0-ಲೀಟರ್ K10B ಪೆಟ್ರೋಲ್ ಎಂಜಿನ್ ಅನ್ನು ಈ ಮೈಕ್ರೋ SUV ಯೊಂದಿಗೆ ನೀಡಲಾಗುತ್ತಿದೆ. ಇದು 68 HP ಪವರ್ ನೀಡುತ್ತದೆ. ಕಂಪನಿಯು ಈ ಎಂಜಿನ್ ಬದಲಿಗೆ ಹೊಸ ಮಾದರಿಯಲ್ಲಿ 1.0-ಲೀಟರ್ K10C DualJet ಎಂಜಿನ್ ಅನ್ನು ನೀಡಲಿದೆ. ಇದರರ್ಥ ಹೊಸ ಎಸ್-ಪ್ರೆಸ್ಸೊ ಇಂಧನದ ವಿಷಯದಲ್ಲಿ ಅತ್ಯುತ್ತಮ ಕಾರಾಗಿರಲಿದೆ. ಇದಲ್ಲದೆ, ಕಾರಿಗೆ ಹೊಸ ಲುಕ್ ನೀಡುವ ಸಲುವಾಗಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು  ಮಾಡಬಹುದು (Maruti news car). 


ಇದನ್ನೂ ಓದಿ: Arecanut Price: ರಾಜ್ಯದ ಮಾರ್ಕೆಟ್ ನಲ್ಲಿ ಸ್ಥಿರತೆ ಕಾಯ್ದುಕೊಂಡ ರಾಶಿ ಅಡಿಕೆ ದರ


ಮಾರುತಿ ಸುಜುಕಿ ಇಗ್ನಿಸ್ ಡ್ಯುಯಲ್ಜೆಟ್
ಕಂಪನಿಯ ಈ ಸಣ್ಣ ಗಾತ್ರದ ಕಾರು ಗ್ರಾಹಕರಿಗೆ ಹೆಚ್ಚು ಇಷ್ಟವಾಗುತ್ತಿದ್ದು, ಕಂಪನಿಯು ಹೊಸ ಎಂಜಿನ್ ಹೊಂದಿರುವ ಹೊಸ ಮಾದರಿಯ ಕಾರನ್ನು ತರಲು ಹೊರಟಿದೆ. ಪ್ರಸ್ತುತ ಇಗ್ನಿಸ್‌ನಲ್ಲಿ 1.2-ಲೀಟರ್ K12M ಎಂಜಿನ್ ನೀಡಲಾಗುತ್ತಿದ್ದು, ಇದು 83 HP ಪವರ್ ನೀಡುತ್ತದೆ. ಈಗ ಈ ಎಂಜಿನ್‌ಗೆ 1.2-ಲೀಟರ್ K12N ಎಂಜಿನ್ ನೀಡಬಹುದು.  ಈ ಎಂಜಿನ್ DualJet ತಂತ್ರಜ್ಞಾನದೊಂದಿಗೆ ಬರುತ್ತದೆ. ಹೊಸ ಇಗ್ನಿಸ್ (ignis) ಪ್ರಸ್ತುತ ಮಾದರಿಗಿಂತ ಹೆಚ್ಚು ಪೆಟ್ರೋಲ್ ಅನ್ನು ಉಳಿಸುತ್ತದೆ ಎನ್ನಲಾಗಿದೆ. ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಸಹ ಇದರಲ್ಲಿ ಕಾಣಬಹುದಾಗಿದೆ. 


ಇದನ್ನೂ ಓದಿ: LPG Price: ಅಗ್ಗವಾಯ್ತು LPG Cylinder! ಹಣದುಬ್ಬರದ ನಡುವೆಯ ಈ ಸಿಲಿಂಡರ್ ಬೆಲೆಯಲ್ಲಿ ಇಳಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.