ನವದೆಹಲಿ : ಕಾರು ಬಾಡಿಗೆ ಮತ್ತು ಚಂದಾದಾರಿಕೆ ಕಾರ್ಯಗಳಿಗಾಗಿ ಮಹೀಂದ್ರಾ ಫೈನಾನ್ಸ್‌ನ ಕ್ವಿಕ್‌ಲಿಡ್ಜ್‌ನೊಂದಿಗೆ (mahindra finance quiklyz) ಪಾಲುದಾರಿಕೆ ಹೊಂದಿರುವುದಾಗಿ ಮಾರುತಿ ಸುಜುಕಿ (Maruti Suzuki) ಘೋಷಿಸಿದೆ. ಮಾರುತಿ ಸುಜುಕಿಯು ಜುಲೈ 2020 ರಲ್ಲಿ ಮೊದಲ ಬಾರಿಗೆ ಚಂದಾದಾರಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಇದರಲ್ಲಿ ಗ್ರಾಹಕರಿಗೆ ಕಾರುಗಳನ್ನು ಬಾಡಿಗೆಗೆ ನೀಡುವುದನ್ನು ಆರಂಭಿಸಲಾಯಿತು.
ಪ್ರಸ್ತುತ, ಕಂಪನಿಯು ದೆಹಲಿ-ಎನ್‌ಸಿಆರ್, ಬೆಂಗಳೂರು (Bengaluru), ಹೈದರಾಬಾದ್, ಪುಣೆ, ಮುಂಬೈ, ಚೆನ್ನೈ, ಅಹಮದಾಬಾದ್, ಜೈಪುರ, ಇಂದೋರ್, ಮಂಗಳೂರು, ಮೈಸೂರು ಮತ್ತು ಕೋಲ್ಕತ್ತಾ ಸೇರಿದಂತೆ ದೇಶದ 20 ನಗರಗಳಲ್ಲಿ ಕಾರನ್ನು ಗ್ರಾಹಕರಿಗೆ ಬಾಡಿಗೆ (Car on rent) ನೀಡುವ ಸೌಲಭ್ಯವನ್ನು ಒದಗಿಸುತ್ತಿದೆ.
ಇದನ್ನೂ ಓದಿ: Pension Scheme : ಅಂಗಡಿಕಾರರಿಗೆ ಸಿಗಲಿದೆ ₹3000 ಪಿಂಚಣಿ : ಇಂದೇ ಈ ಸರ್ಕಾರಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಿ!
ಮಾಸಿಕ ಬಾಡಿಗೆಯಲ್ಲಿ ಎಲ್ಲಾ ಸೇವೆಗಳೂ ಲಭ್ಯ :
ಈ ಚಂದಾದಾರಿಕೆ ಕಾರ್ಯಕ್ರಮದ ಅಡಿಯಲ್ಲಿ, ಗ್ರಾಹಕರಿಗೆ ವಿವಿಧ ಅವಧಿಯ ಯೋಜನೆಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಎಲ್ಲಾ ಮೊತ್ತಗಳನ್ನು ಸೇರಿಸಿ ಮಾಸಿಕ ಬಾಡಿಗೆಯನ್ನು ನಿಗದಿಪಡಿಸಲಾಗುತ್ತದೆ. ಮಾಸಿಕ ಬಾಡಿಗೆಯು ವಾಹನದ ಬಳಕೆಯ ಶುಲ್ಕಗಳು, ನೋಂದಣಿ ಶುಲ್ಕಗಳು, ನಿರ್ವಹಣೆ, ವಿಮೆ (Insurance) ಮತ್ತು ರೋಡ್ ಸೈಡ್ ಅಸಿಸ್ಟೆನ್ಸ್ ಜೊತೆಗೆ ವಾಹನದ ಬಳಕೆಗೆ ಸಂಬಂಧಿಸಿದ ಇತರ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ. ಇದಲ್ಲದೆ, ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಿಳಿ ಮತ್ತು ಕಪ್ಪು ನಂಬರ್ ಪ್ಲೇಟ್‌ಗಳನ್ನು ಆಯ್ಕೆ ಮಾಡಬಹುದು. ದೆಹಲಿಯಲ್ಲಿ ಈ ಚಂದಾದಾರಿಕೆ ಯೋಜನೆಯ ಆರಂಭಿಕ ಮಾಸಿಕ ದರವು 12,199 ರೂಪಾಯಿ ಆಗಿದೆ. ಇನ್ನು ಇದಕ್ಕಾಗಿ ಗ್ರಾಹಕರು ಯಾವುದೇ ಪ್ರತ್ಯೇಕ ಡೌನ್‌ಪೇಮೆಂಟ್ (Down paymnet) ಮಾಡಬೇಕಾಗಿಲ್ಲ.
ಅಸ್ತಿತ್ವದಲ್ಲಿರುವ ಕಾರನ್ನು ಖರೀದಿಸುವ ಆಯ್ಕೆ :
ಗ್ರಾಹಕರು ಆಯ್ಕೆ ಮಾಡಿದ ಕಾರಿನ ಚಂದಾದಾರಿಕೆ ಅವಧಿಯು ಕೊನೆಗೊಳ್ಳುತ್ತಿರುವಾಗ, ಗ್ರಾಹಕರು ಹೊಸ ಕಾರನ್ನು ಆಯ್ಕೆ ಮಾಡುವ ಅಥವಾ ಅಸ್ತಿತ್ವದಲ್ಲಿರುವ ಬಳಸಿದ ಕಾರನ್ನು ಖರೀದಿಸುವ ಆಯ್ಕೆಯನ್ನು ಕೂಡಾ ಹೊಂದಿರುತ್ತಾರೆ. ಈ ಸೇವೆಯೊಳಗೆ, ಚಂದಾದಾರರು ಯಾವಾಗ ಬೇಕಾದರೂ ಈ ಚಂದಾದಾರಿಕೆ ಸೌಲಭ್ಯವನ್ನು ಕೊನೆಗೊಳಿಸಬಹುದು. ಕ್ವಿಕ್‌ಲಿಡ್ಜ್‌ನ ಹೊರತಾಗಿ, ಗ್ರಾಹಕರು ಮಾರುತಿ ಸುಜುಕಿ ಕಾರುಗಳನ್ನು (Maruti Suzuki car) ಇತರ ಮೂರು ಆಯ್ಕೆಗಳ ಮೂಲಕ ಆಯ್ಕೆ ಮಾಡಬಹುದು. ಕಂಪನಿ Oryx, Miles ಮತ್ತು ALD ಜೊತೆಗೆ ಕೂಡಾ ಪಾಲುದಾರಿಕೆಯನ್ನು ಹೊಂದಿದೆ.
ಇದನ್ನೂ ಓದಿ: Invest Karnataka: ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್ ಕಂಪನಿಗಳಿಗೆ ನಿರಾಣಿ ಆಹ್ವಾನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.