ಗ್ರಾಹಕರ ಗಮನಕ್ಕೆ: ಹೊಸ ವರ್ಷದಿಂದ ದುಬಾರಿಯಾಗಲಿವೆ ಮಾರುತಿ ಸುಜುಕಿ ಕಾರುಗಳು

Maruti Suzuki: ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ, ಮಾರುತಿ ಸುಜುಕಿ ಜನವರಿ 2022 ರಲ್ಲಿ ಬೆಲೆ ಏರಿಕೆಯನ್ನು ಮಾಡುವುದಾಗಿ ತಿಳಿಸಿದ್ದಾರೆ. ಹೆಚ್ಚಿದ ಇನ್‌ಪುಟ್ ವೆಚ್ಚಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

Edited by - Zee Kannada News Desk | Last Updated : Dec 2, 2021, 04:47 PM IST
  • ಹೊಸ ವರ್ಷದಿಂದ ದುಬಾರಿಯಾಗಲಿವೆ ಮಾರುತಿ ಸುಜುಕಿ ಕಾರುಗಳು
  • ಹೆಚ್ಚಿದ ಇನ್‌ಪುಟ್ ವೆಚ್ಚಗಳ ಹಿನ್ನೆಲೆ ಈ ನಿರ್ಧಾರವನ್ನು ತೆಗೆದುಕೊಂಡ ಕಂಪನಿ
ಗ್ರಾಹಕರ ಗಮನಕ್ಕೆ: ಹೊಸ ವರ್ಷದಿಂದ ದುಬಾರಿಯಾಗಲಿವೆ ಮಾರುತಿ ಸುಜುಕಿ ಕಾರುಗಳು  title=

ನವದೆಹಲಿ: ಭಾರತದಲ್ಲಿ ಜನವರಿ 2022 ರಿಂದ ಮಾರುತಿ ಸುಜುಕಿ ಕಾರುಗಳು (Maruti Suzuki)ದುಬಾರಿಯಾಗಲಿವೆ. ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ಮಾರುತಿ ಸುಜುಕಿ ಈ ಬಗ್ಗೆ ತಿಳಿಸಿದ್ದಾರೆ.

2021ರಲ್ಲಿ ವಾಹನ ಮಾರಾಟ ಮತ್ತು ಉತ್ಪಾದನೆಯ ಮೇಲೆ COVID-19 ಎರಡನೇ ತರಂಗದ ಪ್ರಭಾವದಿಂದಾಗಿ ಅದನ್ನು ಸರಿದೂಗಿಸಲು ತಮ್ಮ ವಾಹನಗಳನ್ನು ದುಬಾರಿಯಾಗಿಸಲು (Car rate hike) ವಾಹನ ತಯಾರಕರನ್ನು ಒತ್ತಾಯಿಸಿತು. ತದನಂತರ ಜಾಗತಿಕ ಚಿಪ್ ಕೊರತೆಯು ಸೆಮಿಕಂಡಕ್ಟರ್‌ಗಳ ಬೆಲೆಯಲ್ಲಿ ಏರಿಕೆಗೆ ಕಾರಣವಾಯಿತು. 

ಇದನ್ನೂ ಓದಿ: 7th Pay Commission: ತುಟ್ಟಿ ಭತ್ಯೆ ಲೆಕ್ಕಾಚಾರದಲ್ಲಿ ಮಹತ್ವದ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ

ಇದರಿಂದಾಗಿ ವಾಹನಗಳು ದುಬಾರಿಯಾದವು.  ಆದರೆ ಅಷ್ಟೆ ಅಲ್ಲ, ಉಕ್ಕು, ಅಲ್ಯೂಮಿನಿಯಂ ಮುಂತಾದ ವಸ್ತುಗಳ ಬೆಲೆ ಏರಿಕೆಯಿಂದಾಗಿ ವಾಹನ ಉತ್ಪಾದನೆ ಮತ್ತಷ್ಟು ದುಬಾರಿಯಾಗಿದೆ. ಈ ಎಲ್ಲಾ ಏರಿಕೆಗಳನ್ನು ಬೆಲೆ ಏರಿಕೆಯ ರೂಪದಲ್ಲಿ ಜನರಿಗೆ ವರ್ಗಾಯಿಸಲಾಗಿದೆ. 

2021 ರಲ್ಲಿ ದೇಶದಲ್ಲಿ ವಾಹನ ತಯಾರಕರು ಹಲವಾರು ಬಾರಿ ಬೆಲೆ ಏರಿಕೆಗಳನ್ನು ಘೋಷಿಸಿರುವುದನ್ನು ನಾವು ನೋಡಿದ್ದೇವೆ ಮತ್ತು ಈ ಪ್ರವೃತ್ತಿಯು 2022 ರ ಮೊದಲಾರ್ಧದವರೆಗೂ ಮುಂದುವರಿಯುವ ಸಾಧ್ಯತೆಯಿದೆ. ಭಾರತದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ (Maruti cars) ಜನವರಿ 2022 ರಿಂದ ವಾಹನಗಳನ್ನು ದುಬಾರಿ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. 

ಇದನ್ನೂ ಓದಿ: 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತಾ? ಗುಲಾಂ ನಬಿ ಆಜಾದ್ ಹೇಳಿದ್ದೇನು?

ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ, ಮಾರುತಿ ಸುಜುಕಿ (Maruti Suzuki)ಜನವರಿ 2022 ರಲ್ಲಿ ಬೆಲೆ ಏರಿಕೆಯನ್ನು ಘೋಷಿಸುವುದಾಗಿ ತಿಳಿಸಿದ್ದಾರೆ. ಹೆಚ್ಚಿದ ಇನ್‌ಪುಟ್ ವೆಚ್ಚಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕಂಪನಿಯು ಬೆಲೆ ಏರಿಕೆಯ ಪ್ರಮಾಣವನ್ನು ಉಲ್ಲೇಖಿಸಿಲ್ಲ. ಆದರೆ ಇದು ವಿಭಿನ್ನ ಮಾದರಿಗಳಿಗೆ ಬದಲಾಗುತ್ತದೆ ಎಂದು ತಿಳಿಸಿದೆ. 

ಕಳೆದ ಕೆಲವು ವರ್ಷಗಳಿಂದ ಹೆಚ್ಚಿನ ಕಾರು ತಯಾರಕರು ವರ್ಷದ ಆರಂಭದಲ್ಲಿ ವಾಹನಗಳ ಬೆಲೆಯನ್ನು ಹೆಚ್ಚಿಸುವ ರೂಢಿಯನ್ನು ಅನುಸರಿಸುತ್ತಿದ್ದಾರೆ ಎಂಬುದು ಗಮನಾರ್ಹವಾಗಿದೆ. 

Trending News