Milk Price in India : ದೇಶಾದ್ಯಂತ ವೇಗವಾಗಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ, ಸಾಮಾನ್ಯ ಜನರು ತತ್ತರಿಸಿದ್ದಾರೆ. ಈ ನಡುವೆ ರಾಜ್ಯದಲ್ಲಿ ಹಾಲಿನ ದರವೂ ಮೂರು ರೂಪಾಯಿಯಷ್ಟು ಏರಿಕೆ ಕಂಡಿದೆ. ಆದರೆ ಇದೀಗ ಹಾಲಿನ ದರದಲ್ಲಿಯೂ ಇಳಿಕೆ ಕಾಣುವ ಲಕ್ಷಣಗಳು ಕಾಣುತ್ತಿವೆ. ಮುಂಗಾರು ನಂತರ ಹಾಲಿನ ದರದಲ್ಲಿ ಇಳಿಕೆಯಾಗಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. 


COMMERCIAL BREAK
SCROLL TO CONTINUE READING

ಒಂದು ವರ್ಷದಲ್ಲಿ ಹಾಲಿನ ದರದಲ್ಲಿ ಶೇಕಡಾ 10 ರಷ್ಟು ಹೆಚ್ಚಳ : 
ಕಳೆದ ಒಂದು ವರ್ಷದಲ್ಲಿ ದೇಶಾದ್ಯಂತ ಹಾಲಿನ ದರದಲ್ಲಿ ಗಣನೀಯ ಏರಿಕೆಯಾಗಿದೆ. ನಂದಿನಿ, ಅಮುಲ್‌ನಿಂದ ಹಿಡಿದು ಮದರ್ ಡೈರಿಯವರೆಗೆ ಎಲ್ಲಾ ಕಂಪನಿಗಳು ಬೆಲೆಯನ್ನು ಹೆಚ್ಚಿಸಿವೆ. ಭಾರತದಲ್ಲಿ ಕಳೆದ 3 ವರ್ಷಗಳಲ್ಲಿ ಹಾಲಿನ ದರ ಶೇ.22ರಷ್ಟು ಏರಿಕೆ ಕಂಡಿದೆ. ಕಳೆದ ಒಂದು ವರ್ಷದಲ್ಲಿ ಶೇ.10ರಷ್ಟು ಏರಿಕೆಯಾಗಿದೆ. 


ಇದನ್ನೂ ಓದಿ Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭಾರೀ ಕುಸಿತ!


ಹಸಿರು ಮೇವು ಅಗ್ಗವಾಗುತ್ತಿದೆ : 
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರಶೋತ್ತಮ್ ರೂಪಾಲಾ ಪ್ರಕಾರ, ಈ ಸಮಯದಲ್ಲಿ ಹಸಿರು ಮೇವಿನ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಹೀಗಾಗಿ ಮುಂಗಾರು ನಂತರ, ಹಾಲಿನ ಬೆಲೆ ಕೂಡಾ ಇಳಿಯುವ ನಿರೀಕ್ಷೆಯಿದೆ.


ಹವಾಮಾನದ ಪರಿಣಾಮ :
ಮಾಧ್ಯಮಗಳ ವರದಿಗಳ ಪ್ರಕಾರ, ಹವಾಮಾನ ವೈಪರೀತ್ಯದಿಂದಾಗಿ ಬೆಳೆಗಳು ನಷ್ಟವನ್ನು ಅನುಭವಿಸಿದೆ. ಈ ಸಮಯದಲ್ಲಿ ಚಿಂತಿಸಿ ಫಲವಿಲ್ಲ. ಪ್ರಸ್ತುತ, ಹಾಲು ಉತ್ಪಾದಕತೆಯನ್ನು ಸುಧಾರಿಸಲು ಸರ್ಕಾರವು ಕ್ಲಿಮತೆ ರೆಲಿಜಿಯೆಂಟ್ ಬ್ರೀಡ್ ಮೇಲೆ ಕೆಲಸ ಮಾಡುತ್ತಿದೆ. 


ಇದನ್ನೂ ಓದಿ : ಎಸ್‌ಬಿಐನ ಈ ಸ್ಕೀಂನಲ್ಲಿ ಸಿಗುತ್ತಿದೆ ಹೆಚ್ಚು ಬಡ್ಡಿ, ಠೇವಣಿಗೂ ಮೊದಲು ಈ ಅಂಶಗಳ ಬಗ್ಗೆ ತಿಳಿದಿರಿ


ಬೆಲೆಗಳನ್ನು ಹೇಗೆ ನಿರ್ಧರಿಸಲಾಗುತ್ತದೆ? :
ಹಾಲಿನ ದರ ಕುರಿತು ಹೇಳಿಕೆ ನೀಡಿದ ಪಶುಪಾಲನಾ ಮತ್ತು ಹೈನುಗಾರಿಕೆ ಇಲಾಖೆ ಈ ಬೆಲೆಗಳನ್ನು ಸಹಕಾರಿ ಮತ್ತು ಖಾಸಗಿ ಡೈರಿಗಳು ನಿಗದಿಪಡಿಸುತ್ತವೆ ಎಂದು ಹೇಳಿದೆ.  ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಶಕ್ತಿಗಳ ಆಧಾರದ ಮೇಲೆ ಮಾತ್ರ ಬೆಲೆಗಳನ್ನು ನಿಗದಿಪಡಿಸಲಾಗಿದೆ. 


ಬೆಲೆಗಳು ಕಡಿಮೆಯಾಗಬಹುದೇ? :
ಮೇವಿನ ಸಗಟು ಬೆಲೆ ಸೂಚ್ಯಂಕವೂ ಕುಸಿಯುತ್ತಿದೆ. ಮಳೆಗಾಲದ ನಂತರ, ಚಳಿಗಾಲ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಲೆಗಳು ಕುಸಿಯುವ ನಿರೀಕ್ಷೆಯಿದೆ. ಮುಂಗಾರು ಹಂಗಾಮಿನ ನಂತರ ಹಾಲಿನ ದರದಲ್ಲಿ ಸ್ಥಿರತೆ ಮೂಡುವ ಭರವಸೆ  ಇದೆ ಕೇಂದ್ರ ಹೇಳಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.