ನವದೆಹಲಿ: Post Office Savings Account: ನೀವು ಪೋಸ್ಟ್ ಆಫೀಸ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ ನಿಮಗಾಗಿ ಒಂದು ಸುದ್ದಿ ಇದೆ. ಈಗ ನೀವು ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಮೊದಲಿಗಿಂತ ಹೆಚ್ಚು ಮಿನಿಮಂ ಬ್ಯಾಲೆನ್ಸ್ ಇಡುವುದು ಅತ್ಯಗತ್ಯವಾಗಿದೆ. ಇಂಡಿಯಾ ಪೋಸ್ಟ್ ಆಫೀಸ್ ಸೇವಿಂಗ್ಸ್ ಬ್ಯಾಂಕ್ (POSB)ನ  ಉಳಿತಾಯ ಖಾತೆಗೆ ಕನಿಷ್ಠ ಬಾಕಿ ಮಿತಿಯನ್ನು ಹೆಚ್ಚಿಸಿದೆ. ಅಂಚೆ ಕಚೇರಿಯ ಈ ಹೊಸ ನಿಯಮವು ಡಿಸೆಂಬರ್ 12 ರಿಂದ ಅನ್ವಯವಾಗಲಿದೆ. ಇಂಡಿಯಾ ಪೋಸ್ಟ್ ಪ್ರಕಾರ ಪೋಸ್ಟ್ ಆಫೀಸ್ ಉಳಿತಾಯ ಖಾತೆದಾರರು ಉಳಿತಾಯ ಖಾತೆಯಲ್ಲಿ ಈಗ ಕನಿಷ್ಠ 500 ರೂಪಾಯಿಗಳನ್ನು ಕಾಯ್ದುಕೊಳ್ಳಬೇಕಾಗುತ್ತದೆ.


COMMERCIAL BREAK
SCROLL TO CONTINUE READING

Post Office) ಮಾಹಿತಿಯನ್ನು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಅವಶ್ಯಕ. ನಿರ್ವಹಣೆ ಶುಲ್ಕವನ್ನು ತಪ್ಪಿಸಲು 11.12.2020 ರೊಳಗೆ ನಿಮ್ಮ ಅಂಚೆ ಕಚೇರಿಯ ಉಳಿತಾಯ ಖಾತೆಗಳಲ್ಲಿ ಕನಿಷ್ಠ 500 ರೂ.ಗಳನ್ನು ಜಮಾ ಮಾಡಿ ಎಂದು ಈ ಪೋಸ್ಟ್‌ನಲ್ಲಿ ಬರೆಯಲಾಗಿದೆ.


India Post) ಅಧಿಕೃತ ವೆಬ್‌ಸೈಟ್‌ನ ಪ್ರಕಾರ ಹಣಕಾಸಿನ ವರ್ಷದ ಕೊನೆಯಲ್ಲಿ ಕನಿಷ್ಠ 500 ರೂ.ಗಳನ್ನು ಉಳಿತಾಯ ಖಾತೆಯಲ್ಲಿ ಇಡದಿದ್ದರೆ, 100 ರೂ.ಗಳನ್ನು ಖಾತೆ ನಿರ್ವಹಣಾ ಶುಲ್ಕವಾಗಿ ಕಡಿತಗೊಳಿಸಲಾಗುತ್ತದೆ ಮತ್ತು ಖಾತೆಯು ಶೂನ್ಯ ಬ್ಯಾಲೆನ್ಸ್ ಆಗಿದ್ದರೆ, ಖಾತೆ ಸ್ವಯಂಚಾಲಿತವಾಗಿ ಬಂದ್ ಆಗಲಿದೆ ಎಂದು ಹೇಳಲಾಗಿದೆ.


Post Office: ಯಾವ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹಣ ಡಬಲ್ ಆಗುತ್ತೆ ಗೊತ್ತಾ!


ಯಾರು ಖಾತೆಯನ್ನು ತೆರೆಯಬಹುದು? (Who can open Post Office Savings account)
ಪೋಸ್ಟ್ ಆಫೀಸ್ ಉಳಿತಾಯ ಖಾತೆಯನ್ನು (Post office Savings Account) ಒಬ್ಬ ವಯಸ್ಕನ ಪರವಾಗಿ ಅಥವಾ ಜಂಟಿಯಾಗಿ ಇಬ್ಬರು ವಯಸ್ಕರು ಅಥವಾ ಅಪ್ರಾಪ್ತ ವಯಸ್ಕರ ಪರವಾಗಿ ಪೋಷಕರು/ ರಕ್ಷಕರು ಖಾತೆ ತೆರೆಯಬಹುದು. 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕರು ಕೂಡ ಖಾತೆಯನ್ನು ತೆರೆಯಬಹುದು. ಒಬ್ಬ ವ್ಯಕ್ತಿ ಕೇವಲ ಒಂದು ಪೋಸ್ಟ್ ಆಫೀಸ್ ಉಳಿತಾಯ ಖಾತೆಯನ್ನು ತೆರೆಯಬಹುದಾಗಿದೆ. ಅಲ್ಲದೆ ಚಿಕ್ಕವರ ಹೆಸರಿನಲ್ಲಿ ಕೂಡ ಕೇವಲ ಒಂದು ಖಾತೆಯನ್ನು ಮಾತ್ರ ತೆರೆಯಬಹುದು. ಪೋಸ್ಟ್ ಆಫೀಸ್ ಉಳಿತಾಯ ಖಾತೆ ತೆರೆಯುವ ಸಮಯದಲ್ಲಿ ನಾಮಿನಿ ಅಗತ್ಯವಿದೆ.


ನಿಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವ Post Officeನ 4 ಪ್ರಮುಖ ಉಳಿತಾಯ ಯೋಜನೆಗಳಿವು


ಪೋಸ್ಟ್ ಆಫೀಸ್ ಉಳಿತಾಯ ಖಾತೆಯ ಮೇಲಿನ ಬಡ್ಡಿ: (Interest on post office savings account)
ಪ್ರಸ್ತುತ ಒಬ್ಬ ವ್ಯಕ್ತಿ ಅಥವಾ ಜಂಟಿ ಖಾತೆಗೆ ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ ನೀಡಲಾಗುವ ಬಡ್ಡಿದರ 4 ಪ್ರತಿಶತ. ಕನಿಷ್ಠ ಬಾಕಿ ಮೊತ್ತವನ್ನು ಆಧರಿಸಿ ತಿಂಗಳ 10 ರಿಂದ ತಿಂಗಳ ಅಂತ್ಯದವರೆಗೆ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ. ಪೋಸ್ಟ್ ಆಫೀಸ್ ವೆಬ್‌ಸೈಟ್ ಪ್ರಕಾರ ತಿಂಗಳ ಬಾಕಿ 10ನೇ ತಾರೀಕಿನಂದು ಮತ್ತು ತಿಂಗಳ ಕೊನೆಯ ದಿನದ ನಡುವೆ 500 ರೂ.ಗಿಂತ ಕಡಿಮೆಯಿದ್ದರೆ ಆ ತಿಂಗಳಲ್ಲಿ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ.