Big Update: ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!
Pension Update: ಕಾಲಕಾಲಕ್ಕೆ, ಕೇಂದ್ರ ಸರ್ಕಾರವು ನೌಕರರಿಗೆ ಹೆಚ್ಚುವರಿ ಪಿಂಚಣಿ ಪಡೆಯುವ ಆಯ್ಕೆಯನ್ನು ನೀಡುತ್ತದೆ. ಇದೀಗ ನಿಮ್ಮ ಬಳಿಯೂ ಕೂಡ ಮೊದಲಿಗಿಂತ ಹೆಚ್ಚು ಪಿಂಚಣಿ ಪಡೆಯುವ ಅವಕಾಶವಿದೆ. ಇದಕ್ಕಾಗಿ ಅರ್ಜಿ ಸಲ್ಲಿಸಲು ನಿಮ್ಮ ಬಳಿ ಕೇವಲ ಒಂದು ತಿಂಗಳು ಮಾತ್ರ ಉಳಿದಿದೆ.
Pension News: ದೇಶಾದ್ಯಂತ ಇರುವ ನೌಕರ ವರ್ಗದ ಜನರಿಗೆ ಭಾರಿ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ನೀವೂ ಕೂಡ ಈ ಒಂದು ಕೆಲಸ ಮಾಡಿ ಹೆಚ್ಚಿನ ಪಿಂಚಣಿ ಪಡೆಯಬೇಕೆಂದಿದ್ದರೆ, ಈ ಸಂತಸದ ಸುದ್ದಿ ನಿಮಗಾಗಿ. ಕಾಲಕಾಲಕ್ಕೆ, ಕೇಂದ್ರ ಸರ್ಕಾರವು ನೌಕರರಿಗೆ ಹೆಚ್ಚಿನ ಪಿಂಚಣಿ ಪಡೆಯುವ ಆಯ್ಕೆಯನ್ನು ನೀಡುತ್ತದೆ. ಇದೀಗ ನಿಮ್ಮ ಬಳಿಯೂ ಕೂಡ ಮೊದಲಿಗಿಂತ ಹೆಚ್ಚು ಪಿಂಚಣಿ ಪಡೆಯುವ ಅವಕಾಶವಿದೆ. ಇದಕ್ಕಾಗಿ ನಿಮಗೆ ಅರ್ಜಿ ಸಲ್ಲಿಸಲು ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಹೌದು... ಮೇ 3ರವರೆಗೆ ಅರ್ಜಿ ಸಲ್ಲಿಸದಿದ್ದರೆ ನಿಮಗೆ ಹೆಚ್ಚುವರಿ ಪಿಂಚಣಿ ಸಿಗುವುದಿಲ್ಲ.
ಹೆಚ್ಚಿನ ಪಿಂಚಣಿ ಪಡೆಯಲು ನೀವು ಮೇ 3, 2023 ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತಿಳಿಸಿದೆ. ಅರ್ಜಿಯ ದಿನಾಂಕವನ್ನು ಇಪಿಎಫ್‌ಒ ವಿಸ್ತರಿಸಿದೆ. ಈ ಮೊದಲು ಅರ್ಜಿ ಸಲ್ಲಿಸಲು ಮಾರ್ಚ್ 3 ಕೊನೆಯ ದಿನಾಂಕವಾಗಿತ್ತು, ಆದರೆ ಇದೀಗ ಸರ್ಕಾರ ಅದನ್ನು ಎರಡು ತಿಂಗಳು ವಿಸ್ತರಿಸಿದೆ.
ಇಪಿಎಫ್‌ಒನಿಂದ ಪಡೆದ ಮಾಹಿತಿ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸದಸ್ಯರು ಮೇ 3, 2023 ರೊಳಗೆ ತಮ್ಮ ಉದ್ಯೋಗದಾತರೊಂದಿಗೆ ಜಂಟಿಯಾಗಿ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ. ನಿವೃತ್ತಿ ನಿಧಿ ಸಂಸ್ಥೆಯ ಇಂಟಿಗ್ರೇಟೆಡ್ ಮೆಂಬರ್ ಪೋರ್ಟಲ್‌ನಲ್ಲಿ ಅವರು ಇದಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಪಿಂಚಣಿ ಆಯ್ಕೆಗೆ ಮಾರ್ಚ್ 3, 2023 ಕೊನೆಯ ದಿನಾಂಕ ಎಂದು ಮೊದಲು ಹೇಳಲಾಗಿತ್ತು. ಇಪಿಎಫ್‌ಒದ ಏಕೀಕೃತ ಸದಸ್ಯ ಪೋರ್ಟಲ್‌ನಲ್ಲಿ ಇತ್ತೀಚೆಗೆ ಸಕ್ರಿಯಗೊಳಿಸಲಾದ URL, ಹೆಚ್ಚಿನ ಪಿಂಚಣಿ ಆಯ್ಕೆಗೆ ಕೊನೆಯ ದಿನಾಂಕ ಮೇ 3, 2023 ಎಂದು ಪ್ರಕಟಿಸಲಾಗಿದೆ.
ಇದನ್ನೂ ಓದಿ-CNG-PNG ಬೆಲೆ ಕುರಿತು ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!
ನ್ಯಾಯಾಲಯವೂ ಆದೇಶ ಹೊರಡಿಸಿದೆ
ಈ ಹಿಂದೆ ಸುಪ್ರೀಂ ಕೋರ್ಟ್ ನವೆಂಬರ್ 4, 2022 ರಂದು ಹೊರಡಿಸಿದ ತನ್ನ ಆದೇಶದಲ್ಲಿ ಇಪಿಎಫ್‌ಒ ಎಲ್ಲಾ ಅರ್ಹ ಸದಸ್ಯರಿಗೆ ಹೆಚ್ಚಿನ ಪಿಂಚಣಿ ಆಯ್ಕೆ ಮಾಡಲು ನಾಲ್ಕು ತಿಂಗಳ ಕಾಲಾವಕಾಶವನ್ನು ನೀಡಬೇಕು ಎಂದು ಹೇಳಿತ್ತು. ಈ ನಾಲ್ಕು ತಿಂಗಳ ಅವಧಿಯು ಮಾರ್ಚ್ 3 ರಂದು ಕೊನೆಗೊಳ್ಳುತ್ತದೆ. ಆದರೆ ಇದೀಗ ಆ ಅವಧಿಯನ್ನು ಮತ್ತೆ ಸರ್ಕಾರ ವಿಸ್ತರಿಸಿದೆ.
ಇದನ್ನೂ ಓದಿ-New Toll Rules:ವಾಹನ ಸವಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ!
2014ರಲ್ಲಿ ಕೊನೆಯ ಬಾರಿಗೆ ಪಿಂಚಣಿ ಹೆಚ್ಚಿಸಲಾಗಿತ್ತು
ಕಳೆದ ವಾರ EPFO ತನ್ನ ಪ್ರಕ್ರಿಯೆಯ ವಿವರಗಳನ್ನು ಬಿಡುಗಡೆ ಮಾಡಿತ್ತು. ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಷೇರುದಾರರು ಮತ್ತು ಅವರ ಉದ್ಯೋಗದಾತರು ಜಂಟಿಯಾಗಿ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ನವೆಂಬರ್ 2022 ರಲ್ಲಿ, ಸುಪ್ರೀಂ ಕೋರ್ಟ್ ನೌಕರರ ಪಿಂಚಣಿ ಯೋಜನೆ, 2014 ಅನ್ನು ಎತ್ತಿಹಿಡಿದಿದೆ. ಇದಕ್ಕೂ ಮೊದಲು, 2014ರ ಆಗಸ್ಟ್ 22ರ ಇಪಿಎಸ್ ಪರಿಷ್ಕರಣೆಯು ಪಿಂಚಣಿ ವೇತನದ ಮಿತಿಯನ್ನು ತಿಂಗಳಿಗೆ 6,500 ರೂ.ಗಳಿಂದ ತಿಂಗಳಿಗೆ 15,000 ರೂ.ಗಳಿಗೆ ಹೆಚ್ಚಿಸಿದೆ. ಅಲ್ಲದೆ, ಸದಸ್ಯರು ಮತ್ತು ಅವರ ಉದ್ಯೋಗದಾತರು ತಮ್ಮ ನಿಜವಾದ ಸಂಬಳದ ಶೇಕಡಾ 8.33 ರಷ್ಟನ್ನು ಇಪಿಎಸ್‌ಗೆ ಕೊಡುಗೆ ನೀಡಲು ಅನುಮತಿಸಲಾಗಿದೆ. ಇಪಿಎಫ್‌ಒ ತನ್ನ ಕ್ಷೇತ್ರ ಕಚೇರಿಗಳಿಗೆ ಈ ಸಂಬಂಧ ಸುತ್ತೋಲೆ ಹೊರಡಿಸಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.