ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದ ದೀಪಾವಳಿ ಗಿಫ್ಟ್
ಕರೋನಾದಿಂದಾಗಿ ಎಲ್ಟಿಸಿಯ ಲಾಭ ಪಡೆಯಲು ಸಾಧ್ಯವಾಗದ ನೌಕರರಿಗೆ ಎಲ್‌ಟಿಸಿ ನಗದು ಚೀಟಿ ಯೋಜನೆಯ ಲಾಭವನ್ನು ನೀಡಲಾಗುವುದು.
ನವದೆಹಲಿ : ಮೋದಿ ಸರ್ಕಾರ (Modi Government) ಕೇಂದ್ರ ಸರ್ಕಾರಿ ನೌಕರರಿಗೆ ದೊಡ್ಡ ಪರಿಹಾರ ತಂದಿದೆ. ಸರ್ಕಾರಿ ನೌಕರರಿಗಾಗಿ ಪ್ರಯಾಣ ಭತ್ಯೆ ರಜಾದಿನದ ಯೋಜನೆಯಲ್ಲಿ ನಗದು ಚೀಟಿ ಯೋಜನೆ (LTC Cash Voucher Scheme) ಯನ್ನು ಸರ್ಕಾರ ಘೋಷಿಸಿದೆ. ಸರ್ಕಾರಿ ನೌಕರರಿಗೆ ಹೆಚ್ಚಿನ ಪರಿಹಾರ ನೀಡಿ ಸರ್ಕಾರ ಈ ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಯಡಿ ನೌಕರರು ಪ್ರಯಾಣ ಭತ್ಯೆಯ ಬದಲಾಗಿ ನಗದನ್ನು ಪಡೆಯಬಹುದು. ಇದು ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಆರ್ಥಿಕತೆಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಘೋಷಿಸಿದರು. ಮೊದಲನೆಯದಾಗಿ ಅವರು ಪ್ರಯಾಣ ಭತ್ಯೆ ರಜಾದಿನದ ಯೋಜನೆಯಲ್ಲಿ ನಗದು ಚೀಟಿ ಯೋಜನೆಯನ್ನು ಘೋಷಿಸಿದರು. ಈ ಯೋಜನೆಯು ಸರ್ಕಾರಿ ನೌಕರರ (Government Employees) ಜೇಬಿನಲ್ಲಿ ಹೆಚ್ಚಿನ ಹಣವನ್ನು ತರುತ್ತದೆ ಎಂದು ಹಣಕಾಸು ಸಚಿವರು ಹೇಳಿದರು. ಹಣ ಇದ್ದಾಗ ಯಾರೇ ಆದರು ಅದನ್ನು ಖರ್ಚು ಮಾಡುತ್ತಾನೆ. ಈ ಖರ್ಚು ಸಮಾಜದ ಇತರ ವರ್ಗಗಳಿಗೆ ಮತ್ತು ಆರ್ಥಿಕತೆಗೆ ಪ್ರಯೋಜನವನ್ನು ನೀಡುತ್ತದೆ ಎಂದವರು ವಿವರಿಸಿದರು.
ಕೇಂದ್ರ ಸರ್ಕಾರಿ ನೌಕರರಿಗೆ 4 ವರ್ಷಗಳ ಅವಧಿಯಲ್ಲಿ ಪ್ರಯಾಣ ಭತ್ಯೆ ಸಿಗುತ್ತದೆ. ಈ ಸಮಯದಲ್ಲಿ ಈ ಭತ್ಯೆಯಲ್ಲಿ ಅವರು ದೇಶದ ಯಾವ ಪ್ರದೇಶಕ್ಕೆ ಬೇಕಾದರೂ ಪ್ರಯಾಣಿಸಬಹುದು. ಈ ಸಮಯದಲ್ಲಿ ಉದ್ಯೋಗಿಗೆ ಎರಡು ಬಾರಿ ಈ ಭತ್ಯೆಯಲ್ಲಿ ತನ್ನ ಊರಿಗೆ ಹೋಗಲು ಅವಕಾಶ ಸಿಗುತ್ತದೆ.
ಪ್ರಾಪರ್ಟಿ ಕಾರ್ಡ್ ವಿತರಣೆಗೆ ಚಾಲನೆ
ಈ ಪ್ರಯಾಣ ಭತ್ಯೆಯಲ್ಲಿ ನೌಕರನು ವಿಮಾನ ಪ್ರಯಾಣ ಮತ್ತು ರೈಲು ಪ್ರಯಾಣದ ವೆಚ್ಚವನ್ನು ಪಡೆಯುತ್ತಾನೆ. ಇದರೊಂದಿಗೆ ನೌಕರರಿಗೆ 10 ದಿನಗಳ ರಜಾ ಎನ್‌ಕ್ಯಾಶ್‌ಮೆಂಟ್ ಸಹ ನೀಡಲಾಗುತ್ತದೆ.
ಕರೋನಾದಿಂದಾಗಿ ಈ ಎಲ್‌ಟಿಸಿ (LTC) ಯ ಲಾಭ ಪಡೆಯಲು ಸಾಧ್ಯವಾಗದ ನೌಕರರಿಗೆ ಪ್ರಯಾಣ ಭತ್ಯೆ ರಜಾದಿನದ ಯೋಜನೆಯಲ್ಲಿ ನಗದು ಚೀಟಿ ಯೋಜನೆಯ ಲಾಭವನ್ನು ನೀಡಲಾಗುವುದು.
ಯೋಜನೆಯ ಲಾಭವನ್ನು ಹೇಗೆ ಪಡೆಯುವುದು?
- ಎಲ್‌ಟಿಸಿಗೆ ಬದಲಾಗಿ ನೌಕರರಿಗೆ ನಗದು ಪಾವತಿ ನೀಡಲಾಗುತ್ತಿದೆ.
- ನೌಕರರ ಅರ್ಹತೆಗೆ ಅನುಗುಣವಾಗಿ ಪ್ರಯಾಣ ಶುಲ್ಕವನ್ನು ಪಾವತಿಸಲಾಗುತ್ತದೆ.
- ಶುಲ್ಕ ಪಾವತಿ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.
- ಈ ಯೋಜನೆಯನ್ನು ಪಡೆಯುವ ನೌಕರರು ಮೂರು ಪಟ್ಟು ಶುಲ್ಕವನ್ನು ಖರ್ಚು ಮಾಡಬೇಕಾಗುತ್ತದೆ.
- ರಜೆ ಎನ್‌ಕ್ಯಾಶ್‌ಮೆಂಟ್‌ಗೆ ಪಾವತಿಗೆ ಸಮನಾಗಿ ಖರ್ಚು ಮಾಡಬೇಕಾಗುತ್ತದೆ.
- 31 ಮಾರ್ಚ್ 2021ರ ಮೊದಲು ಖರ್ಚು ಮಾಡಬೇಕಾಗುತ್ತದೆ.
- ನೌಕರರು ನಿರ್ದಿಷ್ಟ ವಸ್ತುವಿಗೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ.
- 12% ಅಥವಾ ಅದಕ್ಕಿಂತ ಹೆಚ್ಚಿನ ಜಿಎಸ್‌ಟಿ ವಿಧಿಸುವ ಸೇವಾ ವಸ್ತುವಿನ ಮೇಲೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ.
- ಜಿಎಸ್‌ಟಿ (GST) ನೋಂದಾಯಿತ ಮಾರಾಟಗಾರ ಅಥವಾ ವ್ಯಾಪಾರಿಗಳಿಂದ ಮಾತ್ರ ಸೇವೆಗಳು ಅಥವಾ ಸರಕುಗಳನ್ನು ಖರೀದಿಸಬೇಕಾಗುತ್ತದೆ.
- ಸೇವೆಗಳು ಅಥವಾ ಸರಕುಗಳ ಪಾವತಿಯನ್ನು ಸಹ ಡಿಜಿಟಲ್ ರೀತಿಯಲ್ಲಿ ಮಾಡಬೇಕಾಗುತ್ತದೆ.
- ಪ್ರಯಾಣ ಭತ್ಯೆ ಅಥವಾ ರಜೆ ಭತ್ಯೆ ಪಡೆಯುವಾಗ ಜಿಎಸ್‌ಟಿ ರಶೀದಿಯನ್ನು ಸಲ್ಲಿಸಬೇಕು.
ಮೋದಿ ಸರ್ಕಾರ ರೈತರಿಗೆ ನೀಡುತ್ತಿದೆ 2000 ರೂಪಾಯಿ, ಅದಕ್ಕಾಗಿ ಈ ರೀತಿ ಅಪ್ಲೈ ಮಾಡಿ
28,000 ಕೋಟಿ ಗ್ರಾಹಕರ ಬೇಡಿಕೆ:
ಕೇಂದ್ರ ಸರ್ಕಾರಿ ನೌಕರರು ಈ ಯೋಜನೆಯ ಲಾಭವನ್ನು ಪಡೆದುಕೊಂಡರೆ ಒಟ್ಟು 5675 ಕೋಟಿಗಳ ಪರಿಣಾಮವನ್ನು ಕಾಣಬಹುದು. ಸಾರ್ವಜನಿಕ ವಲಯದ ಬ್ಯಾಂಕ್ ನೌಕರರು ಮತ್ತು ಪಿಎಸ್ಯು ನೌಕರರು ಸಹ ಈ ಯೋಜನೆಯ ಲಾಭವನ್ನು ಪಡೆದುಕೊಂಡರೆ, 1900 ಕೋಟಿ ರೂ. ಖರ್ಚಾಗಲಿದೆ.
ಈ ಯೋಜನೆಯಲ್ಲಿ ಕೇಂದ್ರ, ಸರ್ಕಾರಿ ಬ್ಯಾಂಕ್ ಮತ್ತು ಪಿಎಸ್‌ಯು ನೌಕರರ ಮೂಲಕ ಸುಮಾರು 19000 ಕೋಟಿ ರೂಪಾಯಿಗಳು ಭಾರತದ ಆರ್ಥಿಕತೆಗೆ ಬರಲಿವೆ.
ರಾಜ್ಯ ಸರ್ಕಾರಗಳು ತಮ್ಮ ನೌಕರರಿಗೆ ಕೇಂದ್ರದ ಮಾರ್ಗದಲ್ಲಿ ಈ ಪರಿಹಾರ ಮತ್ತು ತೆರಿಗೆ ರಿಯಾಯಿತಿಗಳನ್ನು ನೀಡಿದರೆ, ಸುಮಾರು 9000 ಕೋಟಿ ರೂಪಾಯಿಗಳು ಆರ್ಥಿಕತೆಗೆ ಬರುತ್ತವೆ. ಈ ರೀತಿಯಾಗಿ ಒಟ್ಟು 28,000 ಕೋಟಿ ರೂ. ಪ್ರತ್ಯೇಕ ಗ್ರಾಹಕ ಬೇಡಿಕೆ ಸೃಷ್ಟಿಸಲಾಗುವುದು.