ತಪ್ಪಿ ಬೇರೆಯವರ ಖಾತೆಗೆ ಹಣ ಟ್ರಾನ್ಸ್ಫರ್ ಆದರೆ ತಕ್ಷಣ ಈ ಕೆಲಸ ಮಾಡಿ, ದುಡ್ಡು ವಾಪಸ್ ಸಿಗಲಿದೆ
ಬ್ಯಾಂಕಿಂಗ್ ಸೌಲಭ್ಯಗಳನ್ನು ಸುಲಭಗೊಳಿಸಲು ಹಲವು ಹೊಸ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಆದರೆ ಇದರೊಂದಿಗೆ ಕೆಲ ಸಮಸ್ಯೆಗಳು ಕೂಡಾ ಎದುರಾಗುತ್ತವೆ. ಆದರೆ ಸಮಸ್ಯೆಗಳು ಎದುರಾದಾಗ ಗಾಬರಿಯಾಗದೆ, ಕೆಲವು ಹಂತಗಳನ್ನು ಅನುಸರಿಸಿದರೆ ಈ ಸಮಸ್ಯೆಯಿಂದ ಸುಲಭವಾಗಿ ಹೊರಬರಬಹುದು.
ನವದೆಹಲಿ : ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಮೊಬೈಲ್ ಬ್ಯಾಂಕಿಂಗ್ (Mobile banking) ಬಳಸುತ್ತಾರೆ. ಹಣ ವರ್ಗಾಯಿಸುವ ಕೆಲಸ ಮೊಬೈಲ್ ನಲ್ಲಿಯೇ ನಡೆದು ಬಿಡುತ್ತದೆ. ಹೀಗೆ ಮಾಡುವಾಗ ಕೆಲವೊಮ್ಮೆ ಯಾರದ್ದೋ ಖಾತೆಗೆ ದುಡ್ಡು ಸೇರುವುದೂ ಉಂಟು. ಒಂದೊಮ್ಮೆ ಹೀಗಾದರೆ ಗಾಬರಿಯಾಗಬೇಕಿಲ್ಲ. ಸುಲಭವಾಗಿ ನಿಮ್ಮ ಹಣವನ್ನು ಮತ್ತೆ ಮರಳಿ ಪಡೆಯಬಹುದು. ಆದರೆ ಇದಕ್ಕಾಗಿ ಸರಳ ಪ್ರಕ್ರಿಯೆಯನ್ನು ಅನುಸರಿಸಬೇಕು.
ಬ್ಯಾಂಕಿಂಗ್ (Banking) ಸೌಲಭ್ಯಗಳನ್ನು ಸುಲಭಗೊಳಿಸಲು ಹಲವು ಹೊಸ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಆದರೆ ಇದರೊಂದಿಗೆ ಕೆಲ ಸಮಸ್ಯೆಗಳು ಕೂಡಾ ಎದುರಾಗುತ್ತವೆ. ಆದರೆ ಸಮಸ್ಯೆಗಳು ಎದುರಾದಾಗ ಗಾಬರಿಯಾಗದೆ, ಕೆಲವು ಹಂತಗಳನ್ನು ಅನುಸರಿಸಿದರೆ ಈ ಸಮಸ್ಯೆಯಿಂದ ಸುಲಭವಾಗಿ ಹೊರಬರಬಹುದು.
ಇದನ್ನೂ ಓದಿ: SBI Platinum Deposits : ಸೆಪ್ಟೆಂಬರ್ 14 ರೊಳಗೆ ಎಸ್ ಬಿಐ ಯಲ್ಲಿ ಈ ವಿಶೇಷ ಡಿಪಾಸಿಟ್ ಮಾಡಿಸಿದರೆ ಸಿಗಲಿದೆ ಅಧಿಕ ಬಡ್ಡಿ
ತಕ್ಷಣ ಬ್ಯಾಂಕ್‌ಗೆ ಮಾಹಿತಿ ನೀಡಿ :
ನೀವು ತಪ್ಪಾಗಿ ಬೇರೊಬ್ಬರ ಖಾತೆಗೆ ಹಣ ವರ್ಗಾಯಿಸಿದರೆ, ತಕ್ಷಣ, ನಿಮ್ಮ ಬ್ಯಾಂಕ್‌ಗೆ (Bank) ಮಾಹಿತಿ ನೀಡಿ. ಕಸ್ಟಮರ್ ಕೇರ್‌ಗೆ ಕರೆ ಮಾಡಿ ಮತ್ತು ಘಟನೆಯನ್ನು ಸಂಪೂರ್ಣವಾಗಿ ವಿವರಿಸಿ. ಇ-ಮೇಲ್ ನಲ್ಲಿ ಬ್ಯಾಂಕ್ ನಿಮ್ಮಿಂದ ಮಾಹಿತಿಗಳನ್ನು ಕೇಳಿದರೆ, ಎಲ್ಲಾ ಮಾಹಿತಿಗಳನ್ನು ವಿವರವಾಗಿ ಸಲ್ಲಿಸಿ. ವಹಿವಾಟಿನ ದಿನಾಂಕ ಮತ್ತು ಸಮಯ, ನಿಮ್ಮ ಖಾತೆ ಸಂಖ್ಯೆ ಮತ್ತು ಹಣವನ್ನು ತಪ್ಪಾಗಿ ವರ್ಗಾಯಿಸಿದ ಖಾತೆಯನ್ನು ನಮೂದಿಸಲು ಮರೆಯಬೇಡಿ.
ನಿಮ್ಮ ಖಾತೆ ಇರುವ ಬ್ಯಾಂಕ್ ನ ಖಾತೆಗೆ ವರ್ಗಾವಣೆಯಾದರೆ ?
ನೀವು ಹಣ ವರ್ಗಾಯಿಸುವುವಾಗ ಖಾತೆಯ ಸಂಖ್ಯೆಯೇ ತಪ್ಪಾಗಿದ್ದರೆ ಅಥವಾ ಐಎಫ್‌ಎಸ್‌ಸಿ ಕೋಡ್ (IFSC) ತಪ್ಪಾಗಿದ್ದರೆ, ಹಣವು ನಿಮ್ಮ ಖಾತೆಗೆ ಬರುತ್ತದೆ. ಆದರೆ ಒಂದುವೇಳೆ ಹಗೆ ಆಗದಿದ್ದಲ್ಲಿ, ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ವ್ಯವಸ್ಥಾಪಕರಿಗೆ ಎಲ್ಲಾ ವಿಷಯಗಳನ್ನು ತಿಳಿಸಿ. ಯಾವ ಬ್ಯಾಂಕ್ ಖಾತೆಗೆ (Bank account) ಹಣ ಹೋಗಿದೆ ಎಂದು ತಿಳಿಸಿ. ಒಂದು ವೇಳೆ, ನಿಮ್ಮ ಖಾತೆ ಇರುವ ಬ್ಯಾಂಕಿನ ಬೇರೆ ಖಾತೆಗೆ ಹಾ ವರ್ಗಾವಣೆಯಾಗಿದ್ದರೆ ನಿಮ್ಮ ಹಣ ಸುಲಭವಾಗಿ ನಿಮ್ಮ ಖಾತೆ ಸೇರುತ್ತದೆ.
ಇದನ್ನೂ ಓದಿ: EPF Withdrawal Claim: ಈ 5 ಕಾರಣಗಳಿಂದಾಗಿ ನಿಮ್ಮ EPF ಕ್ಲೇಮ್ ಅನ್ನು ತಿರಸ್ಕರಿಸಬಹುದು, ಇಲ್ಲಿದೆ ಫುಲ್ ಡೀಟೇಲ್ಸ್
ಇನ್ನೊಂದು ಬ್ಯಾಂಕ್ ಖಾತೆಗೆ ವರ್ಗಾಯಿಸಿದರೆ :
ಒಂದು ವೇಳೆ ತಪ್ಪಾಗಿ ಹಣವನ್ನು ಬೇರೆ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರೆ, ಹಣವನ್ನು ಮರಳಿ ಪಡೆಯಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಕೆಲವೊಮ್ಮೆ ಬ್ಯಾಂಕುಗಳು ಇಂತಹ ಪ್ರಕರಣಗಳನ್ನು ಇತ್ಯರ್ಥಗೊಳಿಸಲು 2 ತಿಂಗಳ ಸಮಯವನ್ನೂ ತೆಗೆದುಕೊಳ್ಳಬಹುದು. ಯಾವ ನಗರದ ಯಾವ ಶಾಖೆಗೆ ಹಣ ವರ್ಗಾಯಿಸಲಾಗಿದೆ ಎಂಬುದನ್ನು ನಿಮ್ಮ ಬ್ಯಾಂಕಿನಿಂದ ನೀವು ತಿಳಿದುಕೊಳ್ಳಬಹುದು. ಆ ಶಾಖೆಯೊಂದಿಗೆ ಮಾತನಾಡುವ ಮೂಲಕ ನಿಮ್ಮ ಹಣವನ್ನು ಮರಳಿ ಪಡೆಯಲು ಸಹ ಪ್ರಯತ್ನಿಸಬಹುದು. ನಿಮ್ಮ ಮಾಹಿತಿಯ ಆಧಾರದ ಮೇಲೆ, ಬ್ಯಾಂಕ್ ಯಾರ ಖಾತೆಗೆ ಹಣವನ್ನು ತಪ್ಪಾಗಿ ವರ್ಗಾಯಿಸಲಾಗಿದೆ ಎಂದು ಬ್ಯಾಂಕ್‌ಗೆ ತಿಳಿಸುತ್ತದೆ.
ಕೂಡಲೇ ಪ್ರಕರಣ ದಾಖಲಿಸಿ
ನಿಮ್ಮ ಹಣವನ್ನು ಮರಳಿ ಪಡೆಯಲು ಇನ್ನೊಂದು ವಿಧಾನವು ಕಾನೂನುಬದ್ಧವಾಗಿದೆ. ಯಾರ ಖಾತೆಗೆ ತಪ್ಪಾಗಿ ಹಣ ವರ್ಗಾಯಿಸಲಾಗಿದೆಯೋ ಅವರು ಅದನ್ನು ಹಿಂದಿರುಗಿಸಲು ನಿರಾಕರಿಸಿದರೆ, ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಬಹುದು. ಆದಾಗ್ಯೂ, ಹಣವನ್ನು ಹಿಂತಿರುಗಿಸದಿದ್ದಲ್ಲಿ, ಈ ಹಕ್ಕು ರಿಸರ್ವ್ ಬ್ಯಾಂಕ್ (RBI) ನಿಯಮಗಳ ಉಲ್ಲಂಘನೆಯ ಅಡಿಯಲ್ಲಿ ಬರುತ್ತದೆ.
ಇದನ್ನೂ ಓದಿ: Sukanya Samriddhi Yojana: ಈ ಬ್ಯಾಂಕಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆದು ಡಬಲ್ ಲಾಭ ಪಡೆಯಿರಿ
ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ :
ತಪ್ಪಾಗಿ ಬೇರೆಯವರ ಖಾತೆಗೆ ಹಣ ಜಮಾ ಮಾಡಿದರೆ, ನಿಮ್ಮ ಬ್ಯಾಂಕ್ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದು ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ನಿಮ್ಮ ಖಾತೆಯನ್ನು ತಪ್ಪಾದ ಖಾತೆಯಿಂದ ಸರಿಯಾದ ಖಾತೆಗೆ ಹಿಂದಿರುಗಿಸುವ ಜವಾಬ್ದಾರಿ ಬ್ಯಾಂಕ್ ಹೊಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.