ಚಿನ್ನಾಭರಣ ಖರೀದಿಸಲು ಹೊರಟಿದ್ದೀರಾ? ಜಾರಿಗೆ ಬಂದಿರುವ ಹೊಸ ನಿಯಮಗಳು ನಿಮಗೂ ತಿಳಿದಿರಲಿ !
New Gold Rules : ದೇಶದಲ್ಲಿ ನಕಲಿ ಆಭರಣಗಳ ಮಾರಾಟವನ್ನು ತಡೆಗಟ್ಟಲು ಸರ್ಕಾರವು ಈ ಹೊಸ ಹಾಲ್‌ಮಾರ್ಕಿಂಗ್ ನಿಯಮಗಳನ್ನು ಜಾರಿಗೆ ತಂದಿದೆ. ಹಾಲ್‌ಮಾರ್ಕ್ ವಿಶಿಷ್ಟ ಗುರುತಿನ ಸಂಖ್ಯೆ (HUID) ಅದರ ಶುದ್ಧತೆಯನ್ನು ಗುರುತಿಸಲು ಆಭರಣಕ್ಕೆ 6-ಅಂಕಿಯ ಆಲ್ಫಾನ್ಯೂಮರಿಕ್ ಕೋಡ್ ಅನ್ನು ನಿಗದಿಪಡಿಸಲಾಗಿದೆ .
ಬೆಂಗಳೂರು : ಹೊಸ ಹಣಕಾಸು ವರ್ಷದಲ್ಲಿ ಹಲವು ವಲಯಗಳ ನಿಯಮಗಳಲ್ಲಿ ಬದಲಾವಣೆಯಾಗಿದ್ದು, ಈಗ ಚಿನ್ನದ ಹಾಲ್‌ಮಾರ್ಕಿಂಗ್ ನಿಯಮಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. ಚಿನ್ನಾಭರಣ ಮಾರಾಟದ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಾಯಿಸಿದ್ದು, ಏಪ್ರಿಲ್ 1 ರಿಂದ ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಕಡ್ಡಾಯಗೊಳಿಸಿದೆ. ಏಪ್ರಿಲ್ 1, 2023 ರಿಂದ, ಚಿನ್ನದ ಆಭರಣಗಳು 6-ಅಂಕಿಯ ಹಾಲ್‌ಮಾರ್ಕ್ ವಿಶಿಷ್ಟ ಗುರುತಿನ ಸಂಖ್ಯೆಯನ್ನು (HUID) ಹೊಂದಿರಬೇಕು. ಈ ಹೊಸ ಹಣಕಾಸು ವರ್ಷದಲ್ಲಿ, ಯಾವುದೇ ಆಭರಣ 6-ಅಂಕಿಯ ಹಾಲ್‌ಮಾರ್ಕ್ ವಿಶಿಷ್ಟ ಗುರುತಿನ ಸಂಖ್ಯೆ (HUID) ಇಲ್ಲದೆ ಹೋದರೆ ಚಿನ್ನದ ಆಭರಣಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಹೇಳಿದೆ. ಈ ಹಿಂದೆ 4-ಅಂಕಿಯ ಮತ್ತು 6-ಅಂಕಿಯ ಹಾಲ್‌ಮಾರ್ಕ್‌ಗಳ ಬಗ್ಗೆ ಗೊಂದಲವಿತ್ತು. ಆದರೆ ಈಗ 6-ಅಂಕಿಯ ಹಾಲ್‌ಮಾರ್ಕ್ ಮಾತ್ರ ಮಾನ್ಯ ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಹೇಳಿದೆ.
ದೇಶದಲ್ಲಿ ನಕಲಿ ಆಭರಣಗಳ ಮಾರಾಟವನ್ನು ತಡೆಗಟ್ಟಲು ಸರ್ಕಾರವು ಈ ಹೊಸ ಹಾಲ್‌ಮಾರ್ಕಿಂಗ್ ನಿಯಮಗಳನ್ನು ಜಾರಿಗೆ ತಂದಿದೆ. ಆಭರಣದ ಶುದ್ಧತೆಯನ್ನು ಗುರುತಿಸಲು ಆಭರಣಕ್ಕೆ 6-ಅಂಕಿಯ ಆಲ್ಫಾನ್ಯೂಮರಿಕ್ ಕೋಡ್ ಅನ್ನು ನಿಗದಿಪಡಿಸಲಾಗಿದೆ . ಈ 6 ಅಂಕಿಯ ಸಂಖ್ಯೆಯ ಮೂಲಕ ಈ ಆಭರಣದ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಗ್ರಾಹಕರು ತಾವು ಖರೀದಿಸುತ್ತಿರುವ ಚಿನ್ನ ನಕಲಿಯೇ ಅಥವಾ ಕಲಬೆರಕೆಯಾಗಿದೆಯೇ ಎಂಬುದನ್ನು ತಿಳಿಯಲು ಈ ಸಂಖ್ಯೆಯನ್ನು ಸ್ಕ್ಯಾನ್ ಮಾಡಬಹುದು. ಸಂಕ್ಷಿಪ್ತವಾಗಿ, ಹೇಳಬೇಕಾದರೆ ಈ HUID ಚಿನ್ನದ ಶುದ್ಧತೆಯ ಪ್ರಮಾಣಪತ್ರದಂತಿದೆ.
ಇದನ್ನೂ ಓದಿ : Indian Railways New Policy: ಈ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಸಿಗುತ್ತೆ ಫ್ರೀ ಫುಡ್, ವಾಟರ್
ಏಪ್ರಿಲ್ 1, 2023 ರಿಂದ ಚಿನ್ನದ ಆಭರಣಗಳಿಗೆ ಹೊಸ ಹಾಲ್‌ಮಾರ್ಕಿಂಗ್ ನಿಯಮಗಳು ಕಡ್ಡಾಯವಾಗಿದ್ದರೂ, ಹಳೆಯ ಆಭರಣಗಳನ್ನು ಮಾರಾಟ ಮಾಡುವುದಾರೆ ಚಿಂತಿಸಬೇಕಾಗಿಲ್ಲ. ಜನರು ಹಳೆಯ ಆಭರಣಗಳನ್ನು ಮಾರಾಟ ಮಾಡುತ್ತಿದ್ದರೆ ಹಾಲ್‌ಮಾರ್ಕ್ ನ ಅಗತ್ಯವಿಲ್ಲ. ಹಳೆಯ ಆಭರಣಗಳನ್ನು ಮಾರಾಟ ಮಾಡುವ ನಿಯಮಗಳಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ ಎಂಬುದು ಗಮನಾರ್ಹ.
ಇದನ್ನೂ ಓದಿ : ಬ್ಯಾಂಕ್ ಗ್ರಾಹಕರಿಗೆ ಸಂತಸದ ಸುದ್ದಿ ಪ್ರಕಟಿಸಿದ ಆರ್‌ಬಿಐ ! ಸಾಲ ಪಡೆದವರು ಈಗ ನಿರಾಳ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.