Gold Price: ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ, 10 ಗ್ರಾಂ ದರ ಕೇಳಿದ್ರೆ ಶಾಕ್ ಆಗ್ತೀರಾ! ಬಂಗಾರ ಇನ್ನು ಕನಸು ಮಾತ್ರ

Gold Price 5 April 2023: ಬಂಗಾರದ ಬೆಲೆಯಲ್ಲಿ ದಿಢೀರ್‌ ಏರಿಕೆಯಾಗಿದ್ದು, ಆಭರಣಪ್ರಿಯರಿಗೆ ಶಾಕ್‌ ಆಗಿದೆ. ಇದ್ದಕ್ಕಿದ್ದಂತೆ ಚಿನ್ನದ ಬೆಲೆ ಹೆಚ್ಚಾಗಿದ್ದು, ದಾಖಲೆಯ ಮಟ್ಟ ತಲುಪಿದೆ. ಇದರ ಜೊತೆ ಬೆಳ್ಳಿಯ ಬೆಲೆಯೂ ಏರಿಕೆಯಾಗಿದೆ. 

Written by - Chetana Devarmani | Last Updated : Apr 5, 2023, 09:25 PM IST
  • ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ
  • 10 ಗ್ರಾಂ ದರ ಕೇಳಿದ್ರೆ ಶಾಕ್ ಆಗ್ತೀರಾ!
  • ದಾಖಲೆ ಮಟ್ಟ ತಲುಪಿದ ಬಂಗಾರದ ಬೆಲೆ
Gold Price: ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ, 10 ಗ್ರಾಂ ದರ ಕೇಳಿದ್ರೆ ಶಾಕ್ ಆಗ್ತೀರಾ! ಬಂಗಾರ ಇನ್ನು ಕನಸು ಮಾತ್ರ  title=

Gold Price 5 April 2023: ಚಿನ್ನದ ಬೆಲೆ ಪ್ರತಿದಿನ ಏರುತ್ತಲೇ ಸಾಗುತ್ತಿದೆ. ಇಂದು ಚಿನ್ನದ ಬೆಲೆ ದಾಖಲೆ ಮಟ್ಟ ತಲುಪಿದೆ. ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ 61,000 ಗಡಿ ದಾಟಿದೆ. ಇದರೊಂದಿಗೆ ಬೆಳ್ಳಿ ಬೆಲೆಯಲ್ಲಿ 1800 ರೂ.ಗೂ ಅಧಿಕ ಏರಿಕೆ ಕಾಣುತ್ತಿದೆ. ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ಲೋಹಗಳ ಬೆಲೆಗಳು ಹೊಸ ದಾಖಲೆ ಮಟ್ಟವನ್ನು ತಲುಪಿವೆ. ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಈ ಬಗ್ಗೆ ಮಾಹಿತಿ ನೀಡಿದೆ.

ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 1,025 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಪ್ರತಿ 10 ಗ್ರಾಂಗೆ 61,080 ರೂಪಾಯಿಗಳನ್ನು ತಲುಪಿದೆ. ಅದೇ ಸಮಯದಲ್ಲಿ, ಕಳೆದ ವಹಿವಾಟಿನಲ್ಲಿ, ಚಿನ್ನದ ಬೆಲೆ 10 ಗ್ರಾಂಗೆ 60,055 ರೂ. ಇತ್ತು. ಇದಲ್ಲದೇ ಬೆಳ್ಳಿಯ ಬೆಲೆಯೂ 1,810 ರೂಪಾಯಿ ಏರಿಕೆಯಾಗಿ ಪ್ರತಿ ಕೆಜಿಗೆ 73,950 ರೂಪಾಯಿಗಳಿಗೆ ತಲುಪಿದೆ.

ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಭಾರಿ ಸಂತಸ ನೀಡುವ ಮತ್ತೊಂದು ಹೊಸ ಅಪ್ಡೇಟ್ ಪ್ರಕಟ!

ತಜ್ಞರ ಅಭಿಪ್ರಾಯವೇನು ಗೊತ್ತಾ?

ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಅವರು ದೆಹಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,025 ರೂ.ನಿಂದ 61,080 ರೂ.ಗೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ತನ್ನ ಇತ್ತೀಚಿನ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಅಂದರೆ 10 ಗ್ರಾಂಗೆ 61,000 ರೂ.ಗಳನ್ನು ದಾಟಿದೆ ಎಂದು ಅವರು ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಸ್ಥಿತಿ ಹೇಗಿದೆ?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನ 2,027 ಡಾಲರ್‌ಗೆ ಏರಿಕೆ ಕಂಡರೆ, ಬೆಳ್ಳಿ ಔನ್ಸ್‌ಗೆ 24.04 ಡಾಲರ್‌ಗೆ ಏರಿಕೆಯಾಗಿದೆ.  

ಬೆಲೆ ಏರಿಕೆ ಏಕೆ?

ಅಮೆರಿಕದ ಸ್ಥೂಲ ಆರ್ಥಿಕ ದತ್ತಾಂಶ ಬಿಡುಗಡೆಯಾದ ನಂತರ ಅಮೆರಿಕದ ಡಾಲರ್ ಸೂಚ್ಯಂಕ ಮತ್ತು ಬಾಂಡ್ ಇಳುವರಿ ಇಳಿಕೆಯಾಗಿದೆ ಎಂದು ಸೌಮಿಲ್ ಗಾಂಧಿ ಹೇಳಿದರು. ಇದರಿಂದಾಗಿ ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯು ಫೆಬ್ರವರಿ ಆರಂಭದಲ್ಲಿ ದಾಖಲೆ ಬರೆದಿವೆ. ಆದರೆ, ನಂತರದಲ್ಲಿ ಅದರಲ್ಲಿ ಕುಸಿತ ಕಂಡಿತು. ಈ ವರ್ಷ ದೀಪಾವಳಿಯಂದು ಎರಡೂ ಅಮೂಲ್ಯವಾದ ಲೋಹಗಳು ವೇಗದ ಹೊಸ ದಾಖಲೆಯನ್ನು ಸೃಷ್ಟಿಸಲಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ದೀಪಾವಳಿಯಂದು ಚಿನ್ನ 65,000 ರೂ ಮತ್ತು ಬೆಳ್ಳಿ 80,000 ರೂ ತಲುಪಬಹುದು ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ : ಹಿರಿಯ ನಾಗರಿಕರಿಗೆ ಜಾಕ್‌ಪಾಟ್ ! ಹಿರಿಯ ಪ್ರಯಾಣಿಕರ ಟಿಕೆಟ್ ದರದಲ್ಲಿ ಮತ್ತಷ್ಟು ಇಳಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News