Income Tax Slab : 2023-24ರ ಬಜೆಟ್ ನಲ್ಲಿ ತೆರಿಗೆದಾರರಿಗೆ ಅತಿ ದೊಡ್ಡ ರಿಲೀಫ್ ನೀಡಲಾಗಿದೆ. ವೇತನ ವರ್ಗಕ್ಕೆ ಹೊಸ ಆದಾಯ ತೆರಿಗೆ ದರಗಳನ್ನು ಘೋಷಿಸಿದ್ದಾರೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು 7 ಲಕ್ಷ ರೂ.ವರೆಗಿನ ಆದಾಯಕ್ಕೆ ಹೆಚ್ಚಿಸಲಾಗಿದೆ. ತೆರಿಗೆದಾರರಿಗೆ ಹೊಸ ತೆರಿಗೆ ಪದ್ಧತಿಯಡಿ ವಾರ್ಷಿಕ ಆದಾಯ  7 ಲಕ್ಷದವರೆಗೆ ವಿನಾಯಿತಿ ಘೋಷಿಸಲಾಗಿದೆ. 


COMMERCIAL BREAK
SCROLL TO CONTINUE READING

ಹೊಸ ತೆರಿಗೆ ಪದ್ಧತಿ :
ಆದಾಯ ತೆರಿಗೆಗೆ ಸಂಬಂಧಿಸಿದಂತೆ ಈ ಬಜೆಟ್ ನಲ್ಲಿ ಆಗಿರುವುದು ಅತಿ ದೊಡ್ಡ ಘೋಷಣೆ ಎಂದೇ ಹೇಳಬಹುದು. ಇದರ ಪ್ರಕಾರ 2023-24 ರ ಆರ್ಥಿಕ ವರ್ಷದಿಂದ ವರ್ಷಕ್ಕೆ 7 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕೆ ತೆರಿಗೆ ಪಾವತಿಸಬೇಕಾಗಿಲ್ಲ. ಇದುವರೆಗೆ ಈ ಮಿತಿ 5 ಲಕ್ಷ ರೂಪಾಯಿ ಆಗಿತ್ತು. ಆದರೆ ಇಲ್ಲಿ ನೆನಪಿಡಬೇಕಾದ ಅಂಶ ಎಂದರೆ ಈ ಬದಲಾವಣೆಯು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ ಮಾತ್ರ ಅನ್ವಯವಾಗುತ್ತದೆ. 


ಇದನ್ನೂ ಓದಿ : ಕೇಂದ್ರ ಬಜೆಟ್‌ನಲ್ಲಿ ಸಿಂಹಪಾಲು ಪಡೆದ ರಕ್ಷಣಾ ಇಲಾಖೆ


ಪ್ರಸ್ತುತ 5 ಲಕ್ಷದವರೆಗಿನ ಒಟ್ಟು ಆದಾಯ ಹೊಂದಿರುವ ವ್ಯಕ್ತಿ ಹಳೆಯ ಮತ್ತು ಹೊಸ ಪದ್ದತಿಯ  ಅಡಿಯಲ್ಲಿ ಯಾವುದೇ ತೆರಿಗೆಯನ್ನು ಪಾವತಿಸುವಂತಿಲ್ಲ. ಇದೀಗ ಹೊಸ ಪದ್ದತಿಯ ಅಡಿಯಲ್ಲಿ ವಿನಾಯಿತಿಯನ್ನು ಹೆಚ್ಚಿಸಲು ಪ್ರಸ್ತಾಪಿಸಲಾಗಿದ್ದು, ಒಟ್ಟು ಆದಾಯವು 7 ಲಕ್ಷ ರೂ.ವರೆಗೆ ಇದ್ದರೆ ಅವರು ತೆರಿಗೆ ಪಾವತಿಸಬೇಕಾಗಿಲ್ಲ. ಹೊಸ ವೈಯಕ್ತಿಕ ಆದಾಯ ತೆರಿಗೆ  ಪದ್ಧತಿ ಅಡಿಯಲ್ಲಿ, ಸ್ಲ್ಯಾಬ್‌ಗಳ ಸಂಖ್ಯೆಯನ್ನು ಐದಕ್ಕೆ ಇಳಿಸಲಾಗಿದೆ. 


ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳು ಈ ಕೆಳಗಿನಂತಿರುತ್ತವೆ :
 0 ಯಿಂದ 3 ಲಕ್ಷ ದವರೆಗೆ - 0% ತೆರಿಗೆ
3 ಲಕ್ಷದಿಂದ  6 ಲಕ್ಷ ದವರೆಗೆ - 5% ತೆರಿಗೆ
6 ಲಕ್ಷದಿಂದ ರೂ 9 ಲಕ್ಷ ದವರೆಗೆ - 10% ತೆರಿಗೆ
9 ಲಕ್ಷ ರೂ 12 ಲಕ್ಷದವರೆಗೆ - 15% ತೆರಿಗೆ
12 ಲಕ್ಷದಿಂದ 15 ಲಕ್ಷದವರೆಗೆ - 20% ತೆರಿಗೆ
15 ಲಕ್ಷಕ್ಕಿಂತ ಹೆಚ್ಚು - 30% ತೆರಿಗೆ


ಇದನ್ನೂ ಓದಿ : ರಾತ್ರೋ ರಾತ್ರಿ ಅದಾನಿ ಸಂಪತ್ತಿನ ಸಾಮ್ರ್ಯಾಜ್ಯ ಪತನವಾಗಿದ್ದು ಹೇಗೆ ಗೊತ್ತಾ?


ಸ್ಲ್ಯಾಬ್‌ಗಳ ಸಂಖ್ಯೆಯನ್ನು ಐದಕ್ಕೆ ಇಳಿಸುವ ಮೂಲಕ ಮತ್ತು ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಇಲ್ಲಿ ತೆರಿಗೆ  ಸ್ಟ್ರಕ್ಚರ್ ಬದಲಾಯಿಸುವ ಬಗ್ಗೆ ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ.  


concessional tax regime ಭಾಗವಾಗಿ,  3 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ . 3-6 ಲಕ್ಷದ ನಡುವಿನ ಆದಾಯಕ್ಕೆ ಶೇಕಡ 5 ,  .6-9 ಲಕ್ಷದ ನಡುವಿನ ಆದಾಯಕ್ಕೆ ಶೇ.10ರಂತೆ, 9-12 ಲಕ್ಷದ ನಡುವಿನ ಆದಾಯಕ್ಕೆ ಶೇ.15ರಂತೆ, 12-15 ಲಕ್ಷದ ನಡುವಿನ ಆದಾಯಕ್ಕೆ  ಶೇ.20 ರಂತೆ ಮತ್ತು15 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತದೆ.


ಇದೀಗ, 2.5 ಲಕ್ಷದಿಂದ 5 ಲಕ್ಷದವರೆಗಿನ ಒಟ್ಟು ಆದಾಯದ ಮೇಲೆ ಶೇ 5 ತೆರಿಗೆ, 5 ಲಕ್ಷದಿಂದ 7.5 ಲಕ್ಷದವರೆಗೆ ಶೇ 10, 7.5 ಲಕ್ಷದಿಂದ 10 ಲಕ್ಷದವರೆಗೆ ಶೇ 15,  10 ಲಕ್ಷದಿಂದ 12.5 ಲಕ್ಷದವರೆಗೆ ಶೇ 20, 12.5 ಲಕ್ಷದಿಂದ 15 ಲಕ್ಷಕ್ಕೆ ಶೇ 25 ಮತ್ತು 15 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೇಲೆ ಶೇ 30. ರಷ್ಟು ತೆರಿಗೆ ವಿಧಿಸಲಾಗುತ್ತದೆ. ಬಜೆಟ್ ಘೋಷಣೆಯಂತೆ  ಏಪ್ರಿಲ್ 1 ರಿಂದ, ಈ ಸ್ಲ್ಯಾಬ್‌ಗಳನ್ನು ಮಾರ್ಪಡಿಸಲಾಗುತ್ತದೆ.


ಇದನ್ನೂ ಓದಿ : Budget 2023 : ಬಜೆಟ್​ನಲ್ಲಿ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ : ಇನ್ನು ಮುಂದೆ ಈ ಯೋಜನೆಯಲ್ಲಿ ಹೆಚ್ಚಿನ ಲಾಭ!


 ಸ್ಟ್ಯಾಂಡರ್ಡ್ ಡಿಡೆಕ್ಷನ್ :
ನಿರ್ಮಲಾ  ಸೀತಾರಾಮನ್ ಪ್ರಕಾರ,  ಸ್ಟ್ಯಾಂಡರ್ಡ್ ಡಿಡೆಕ್ಷನ್  ವಾರ್ಷಿಕವಾಗಿ 50,000 ರೂ.ನಿಂದ 52,500 ರೂ.ಗೆ ಹೆಚ್ಚಾಗುತ್ತದೆ. ಮೂಲ ವಿನಾಯಿತಿ ಮಿತಿಯ ಜೊತೆಗೆ, ಸ್ಟ್ಯಾಂಡರ್ಡ್ ಡಿಡಕ್ಷನ್ ಎನ್ನುವುದು ತೆರಿಗೆಗೆ ಒಳಪಡದ ಮೂಲ ಮೊತ್ತವಾಗಿದೆ. ಇದರಿಂದ ಎಲ್ಲಾ ತೆರಿಗೆ ಪಾವತಿದಾರರಿಗೆ ಲಾಭವಾಗಲಿದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.