EPFO Proposal Pension: ಭಾರತದಲ್ಲಿ ಅಸಂಘಟಿತ ವಲಯದ ವ್ಯಾಪ್ತಿ ತುಂಬಾ ದೊಡ್ಡದಾಗಿದೆ. ಆದರೂ ಕೂಡ ಈ ಜನರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆಯ ಪ್ರಯೋಜನ ಸಿಗುವುದಿಲ್ಲ. ಇಪಿಎಫ್‌ಒ 10 ವರ್ಷಗಳ ಕಾಲ ಪಿಎಫ್ ಕಡಿತಗೊಳಿಸಿದ ಜನರಿಗೆ ಪಿಂಚಣಿ ಸೌಲಭ್ಯ ಒದಗಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ಮಂದಿ ಪಿಂಚಣಿ ಸೌಲಭ್ಯದಿಂದ ವಂಚಿತರಾಗುತ್ತಾರೆ. EPFO ಈ ಸಮಸ್ಯೆಯನ್ನು ಇದೀಗ ಪರಿಹಾರವೊಂದನ್ನು ಕಂಡು ಹಿಡಿಯುವ ಹಾದಿಯಲ್ಲಿದೆ. ಇತ್ತೀಚೆಗೆ, ಭವಿಷ್ಯ ನಿಧಿ ಸಂಘಟನೆ ಹೊಸ ಯೋಜನೆಯೊಂದನ್ನು ಶಿಫಾರಸು ಮಾಡಿದೆ. ಇದರಿಂದ ಇದುವರೆಗೆ ಪಿಂಚಣಿ ವ್ಯವಸ್ಥೆಗೆ ಒಳಪಡದೆ ಇರುವವರು ಕೂಡ ಪಿಂಚಣಿ ವ್ಯಾಪ್ತಿಗೆ ಬರಲಿದ್ದಾರೆ. ಈ ಯೋಜನೆಯ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಸರ್ಕಾರದಿಂದ ಕಾಯ್ದೆ ಬದಲಾವಣೆಯ ಸಾಧ್ಯತೆ
EPFO ಪ್ರಕಾರ, ಅಸಂಘಟಿತ ವಲಯದ ಎಲ್ಲಾ ಉದ್ಯೋಗಿಗಳು ಮತ್ತು ಸ್ವಯಂ ಉದ್ಯೋಗಿಗಳನ್ನು EPFO ​​ವ್ಯಾಪ್ತಿಗೆ ತರಲು ಉದ್ಯೋಗಿಗಳ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯಿದೆ, 1952ಕ್ಕೆ ತಿದ್ದುಪಡಿ ತರಬೇಕಾಗಿದೆ. ಅಸಂಘಟಿತ ವಲಯದ ಜನರು ನಿವೃತ್ತಿ ಉಳಿತಾಯ ಯೋಜನೆಯ ಲಾಭ ಪಡೆಯಲು, EPFO ​​ವೇತನ ಮತ್ತು ಉದ್ಯೋಗಿ ಮಿತಿಗಳನ್ನು ತೆಗೆದುಹಾಕಲು ಶಿಫಾರಸು ಮಾಡಿದೆ. ಈ ಕಾಯ್ದೆಯಲ್ಲಿ ಉದ್ಯೋಗಿಗಳ ಸಂಖ್ಯೆ ಮತ್ತು ವೇತನದಂತಹ ಮಿತಿಯನ್ನು ತೆಗೆದುಹಾಕಿದರೆ, ವ್ಯಾಪಾರ ಮಾಡುವವರೂ ಕೂಡ ಈ ಹೊಸ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗಲಿದೆ.


ಇದನ್ನೂ ಓದಿ-7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ : ನಿಮ್ಮ ಡಿಎ ಹೆಚ್ಚಳಕ್ಕೆ ಡೇಟ್ ಫಿಕ್ಸ್!


ಪ್ರಸ್ತುತ ಇರುವ ನಿಯಮವೇನು?
EPFO ನಿಯಮಗಳ ಪ್ರಕಾರ, 20 ಅಥವಾ ಅದಕ್ಕಿಂತ ಹೆಚ್ಚು ನೌಕರರನ್ನು ಹೊಂದಿರುವ ಯಾವುದೇ ಒಂದು ಕಂಪನಿ ಅಥವಾ ಸಂಸ್ಥೆಯು EPFO ​​ನಲ್ಲಿ ನೊಂದಾಯಿಸಲ್ಪಡುತ್ತದೆ. ವರದಿಗಳ ಪ್ರಕಾರ, ಇಪಿಎಫ್‌ಒ ತನ್ನ ಈ ಹೊಸ ಯೋಜನೆಗಾಗಿ ಎಲ್ಲಾ ಪಾಲುದಾರರೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ಅದಕ್ಕಾಗಿ ರಾಜ್ಯ ಸರ್ಕಾರಗಳನ್ನು ಸಹ ಸಂಪರ್ಕಿಸುತ್ತಿದೆ ಎನ್ನಲಾಗಿದೆ. ಪ್ರಸ್ತುತ EPFO ​​5.5 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದೆ.


ಇದನ್ನೂ ಓದಿ-Indian Railways: ಕೋಟ್ಯಾಂತರ ರೈಲು ಯಾತ್ರಿಗಳಿಗೊಂದು ಭಾರಿ ಸಂತಸದ ಸುದ್ದಿ


ನೌಕರರ ಭವಿಷ್ಯ ನಿಧಿ ಸಂಘಟನೆಯ ನಿಧಿಯಲ್ಲಿಯೂ ಕೂಡ ಹೆಚ್ಚಳವಾಗಲಿದೆ
ಇಪಿಎಫ್ಒ ತನ್ನ ಖಾತೆದಾರರಿಗೆ ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮೆಯನ್ನು ಇಪಿಎಫ್, ಉದ್ಯೋಗಿ ಪಿಂಚಣಿ ಯೋಜನೆ ಮತ್ತು ಉದ್ಯೋಗಿ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ ಮೂಲಕ ನೀಡುತ್ತದೆ. ಒಂದೊಮ್ಮೆ ಪ್ರಸ್ತುತ ಇರುವ ಕಾಯ್ದೆಗೆ ತಿದ್ದುಪಡಿ ತಂದರೆ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಚಂದಾದಾರರು ಹೆಚ್ಚಾಗಲಿದ್ದಾರೆ ಮತ್ತು ಇದರಿಂದ EPFO ​​ನ ಕಾರ್ಪಸ್ ಕೂಡ ಹೆಚ್ಚಾಗಲಿದೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.