New PPF Interest Rates: ಸರ್ಕಾರದ ವತಿಯಿಂದ ಹೊಸ ಪಿಪಿಎಫ್ ಬಡ್ಡಿ ದರ ಘೋಷಣೆ, ಏಪ್ರಿಲ್ ನಿಂದ ಅನ್ವಯ!
New PPF Interest Rates: ಹಣಕಾಸು ಸಚಿವಾಲಯವು ಏಪ್ರಿಲ್ 1, 2024 ರಿಂದ ಆರಂಭಗೊಳ್ಳುತ್ತಿರುವ ಹೊಸ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕಕ್ಕೆ ಹೊಸ ಬಡ್ಡಿದರಗಳನ್ನು ಘೋಷಿಸಿದೆ. ಬನ್ನಿ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ, (Business News In Kannada)
PPF Latest Interest Rates: ಸಾರ್ವಜನಿಕ ಭವಿಷ್ಯ ನಿಧಿ (PPF Scheme) ಯೋಜನೆ ಭಾರತದಲ್ಲಿ ಜನಪ್ರಿಯ ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಇದರ ಬಡ್ಡಿ ದರಗಳು ಜನವರಿ-ಮಾರ್ಚ್ 2024ರವರೆಗೆ ಶೇ. 7.1 ರಷ್ಟಿದೆ. ಏಪ್ರಿಲ್ 1, 2024 ರಿಂದ ಜೂನ್ 2024 ರವರೆಗೆ ಇದೇ ಬಡ್ಡಿ ದರ ಮುಂದುವರೆಯಲಿದೆ. ಮುಂದಿನ ತ್ರೈಮಾಸಿಕಕ್ಕೆ ಸರ್ಕಾರ ಹೊಸ ಬಡ್ಡಿ ದರಗಳನ್ನು (PPF Calculator) ಪ್ರಕಟಿಸಿದ್ದು, ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರ (Government Of India) ಹೇಳಿದೆ. ಪಿಪಿಎಫ್ ಅನ್ನು ಮೊದಲ ಬಾರಿಗೆ 1968 ರಲ್ಲಿ ಹಣಕಾಸು ಸಚಿವಾಲಯದ ರಾಷ್ಟ್ರೀಯ ಉಳಿತಾಯ ಸಂಸ್ಥೆಯು ಸಾರ್ವಜನಿಕರಿಗಾಗಿ ಪರಿಚಯಿಸಿತ್ತು ಅಂದಿನಿಂದ ಇದು ದೀರ್ಘಾವಧಿಯ ಆಸೆಟ್ ಹೊಂದಲು ಬಯಸುವ ಹೂಡಿಕೆದಾರರಿಗೆ ಪ್ರಬಲ ಸಾಧನವಾಗಿ ಹೊರಹೊಮ್ಮಿದೆ.(Business News In Kannada)
ಹೂಡಿಕೆದಾರರು ಯಾವುದೇ ಬ್ಯಾಂಕ್ ಅಥವಾ ಹತ್ತಿರದ ಅಂಚೆ ಕಚೇರಿಯಲ್ಲಿ PPF Account ತೆರೆಯಬಹುದು. ಆದಾಗ್ಯೂ ಒಬ್ಬರ PPF ಖಾತೆಯಲ್ಲಿ ವರ್ಷಕ್ಕೆ ಕನಿಷ್ಠ ₹ 500 ಠೇವಣಿ ಇರಿಸುವುದು ಅನಿವಾರ್ಯವಾಗಿದೆ. ನೀವು ಪಿಪಿಎಫ್ ಖಾತೆಯಲ್ಲಿ ಗರಿಷ್ಠ ₹ 1.5 ಲಕ್ಷ ರೂ.ಗಳವರೆಗೆ ಹೂಡಿಕೆಯನ್ನು ಮಾಡಬಹುದು. ಪಿಪಿಎಫ್ ಖಾತೆ ಮೆಚ್ಯೂರ್ ಆಗಲು 15 ವರ್ಷಗಳ ಸಮಯಾವಕಾಶ ತೆಗೆದುಕೊಳ್ಳುತ್ತದೆ. (ppf interest rate 2024-25)
ಇದನ್ನೂ ಓದಿ-Basic Salary Hike: ತುಟ್ಟಿಭತ್ಯೆ ಹೆಚ್ಚಳ ಆಯ್ತು, ಇದೀಗ ಮೂಲ ವೇತನ ಹೆಚ್ಚಳದ ಸರದಿ, ಯಾವಾಗ ಸಿಗಲಿದೆ ಗುಡ್ ನ್ಯೂಸ್?
ಕಡಿಮೆ ಹೂಡಿಕೆಯಲ್ಲಿ ಕೋಟ್ಯಾಂತರ ಆದಾಯ ಗಳಿಕೆ ಮಾಡುವುದು ಕಷ್ಟಸಾಧ್ಯದ ಕೆಲಸ. ಆದರೆ ಪಿಪಿಎಫ್ ಕಾಂಪೌಂಡಿಂಗ್ ಬೆನಿಫಿಟ್ ನಿಂದ ನೀವು ಅದನ್ನು ಸುಲಭವಾಗಿ ಮಾಡಬಹುದು. ವೈಯಕ್ತಿಕ ಹಣಕಾಸು ತಜ್ಞರು. ಹೂಡಿಕೆದಾರರು ತಮ್ಮ PPF ಖಾತೆಯನ್ನು 5 ವರ್ಷಗಳ ಅವಧಿಯಲ್ಲಿ ಹಲವಾರು ಬಾರಿ ಹೆಚ್ಚಿಸಬಹುದು. ತನ್ನ PPF ಖಾತೆಯಲ್ಲಿ ಪ್ರತಿ ವರ್ಷ ₹1.50 ಲಕ್ಷ ಹೂಡಿಕೆ ಮಾಡುವ PPF ಖಾತೆದಾರನು ಮಾಸಿಕ ಪಾವತಿಯನ್ನು ರೂ 8333.3 ಕಂತುಗಳಾಗಿ ವಿಂಗಡಿಸಬಹುದು, ನಂತರ 25 ವರ್ಷಗಳ ಹೂಡಿಕೆಯ ನಂತರ, ಒಬ್ಬರ PPF ಮುಕ್ತಾಯ ಮೊತ್ತವು ₹1,03,08,015 ಗಳಾಗಿರುತ್ತದೆ ಅಥವಾ ಅದರ ಆಸುಪಾಸು ಇರುತ್ತದೆ.(New ppf interest rate 2024 india)
PPF ಖಾತೆಯು EEE ವರ್ಗದ ಅಡಿಯಲ್ಲಿ ಬರುತ್ತದೆ, ಅಲ್ಲಿ ಓರ್ವ ವ್ಯಕ್ತಿಯು ತನ್ನ ವಾರ್ಷಿಕ ಠೇವಣಿ 1.5 ಲಕ್ಷದವರೆಗೆ ಸೆಕ್ಷನ್ 80C ಅಡಿಯಲ್ಲಿ ಆದಾಯ ತೆರಿಗೆ ಪ್ರಯೋಜನವನ್ನು ಪಡೆಯಬಹುದು. PPF ಜನಪ್ರಿಯ ಯೋಜನೆಯಾಗಿದೆ ಏಕೆಂದರೆ ಇದು ಸುರಕ್ಷಿತ ಹೂಡಿಕೆ ಉತ್ಪನ್ನಗಳಲ್ಲಿ ಒಂದಾಗಿದೆ. ಅಂದರೆ ಭಾರತ ಸರ್ಕಾರವು ನಿಮ್ಮ ಹೂಡಿಕೆಗೆ ಖಾತರಿ ನೀಡುತ್ತದೆ. ಬಡ್ಡಿ ದರವನ್ನು ಪ್ರತಿ ತ್ರೈಮಾಸಿಕಕ್ಕೆ ಸರ್ಕಾರ ಪರಿಷ್ಕರಿಸುತ್ತದೆ. PPF ಇತರ ಹಲವು ಹೂಡಿಕೆ ಆಯ್ಕೆಗಳಿಗಿಂತ ಉತ್ತಮವಾಗಿದೆ ಏಕೆಂದರೆ ನಿಮ್ಮ ಹೂಡಿಕೆಯು ಆದಾಯ ತೆರಿಗೆ ಕಾಯ್ದೆಯ (ITA) ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಮುಕ್ತವಾಗಿದೆ ಮತ್ತು PPF ನಿಂದ ಬರುವ ಆದಾಯಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ