Gratuity Rule Change: ಗ್ರಾಚ್ಯುಟಿ ತೆರಿಗೆ ವಿನಾಯಿತಿ ಮಿತಿ: ನೌಕರರು ಪಡೆಯುವ ಗ್ರಾಚ್ಯುಟಿ ಮಿತಿಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕೇಂದ್ರ ಸಚಿವ ಸಂಪುಟ ಸಭೆ ಗ್ರಾಚ್ಯುಟಿಯ ತೆರಿಗೆ ಮುಕ್ತ ಮಿತಿಯನ್ನು 20 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಿಸಿದೆ. ಇದರಿಂದ ಇನ್ಮುಂದೆ ಮೊತ್ತದ ಗ್ರಾಚ್ಯುಟಿ ಮೇಲೆ ಯಾವುದೇ ತೆರಿಗೆ ಬಾಧ್ಯತೆ ಇರುವುದಿಲ್ಲ. ನೌಕರರು ತಮ್ಮ ಹಕ್ಕುಗಳಿಗಾಗಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಅವರಿಗೆ ಭಾರಿ ಉಡುಗೊರೆಯೇ ಸಿಕ್ಕಂತಾಗಿದೆ. ಇದುವರೆಗೆ ತೆರಿಗೆ ಮುಕ್ತ ಗ್ರಾಚ್ಯುಟಿಯ ಮಿತಿ 20 ಲಕ್ಷ ರೂ. ಗಳಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ, 2019 ರಲ್ಲಿ, ಸರ್ಕಾರವು ತೆರಿಗೆ ಮುಕ್ತ ಗ್ರಾಚ್ಯುಟಿಯ ಮಿತಿಯನ್ನು 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಿತ್ತು. ಆದರೆ, ನಮಗೆ ವೇತನದ ಮೇಲೆ ನಮಗೆ ಎಷ್ಟು ಗ್ರಾಚ್ಯುಟಿ ಸಿಗುತ್ತದೆ ಹಾಗೂ ನಾವು ಯಾವ ಮೊತ್ತದ ಗ್ರ್ಯಾಚೂಟಿಗೆ ಅರ್ಹರಾಗಿದ್ದೇವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. (Business News In Kannada)
ಗ್ರಾಚ್ಯುಟಿ ಹೇಗೆ ಸಿಗುತ್ತದೆ? (Gratuity Calculation)
ಸರ್ವಿಸ್ ಸೇಕ್ಟರ್ ಉದ್ಯೋಗಿಯು 5 ವರ್ಷಗಳ ಸೇವೆಗೆ ಗ್ರಾಚ್ಯುಟಿಯನ್ನು ಪಡೆಯುತ್ತಾನೆ. ಗ್ರಾಚ್ಯುಟಿ ಪಾವತಿ ಕಾಯಿದೆ, 1972 ರ ಅಡಿಯಲ್ಲಿ, 10 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಯ ಉದ್ಯೋಗಿಗಳು ಗ್ರಾಚ್ಯುಟಿಗೆ ಅರ್ಹರಾಗಿರುತ್ತಾರೆ. ಆದಾಗ್ಯೂ, ಇದು ಬದಲಾಗಬಹುದು. ಹೊಸ ಸೂತ್ರದಲ್ಲಿ, ಗ್ರಾಚ್ಯುಟಿಯ ಪ್ರಯೋಜನವನ್ನು 5 ವರ್ಷಗಳ ಬದಲಿಗೆ 1 ವರ್ಷಕ್ಕೆ ನೀಡಬಹುದಾಗಿದೆ. ಸರಕಾರ ಈ ನಿಟ್ಟಿನಲ್ಲಿ ಕಾರ್ಯೋಂಮುಖವಾಗಿದ್ದು. ಹೊಸ ವೇತನ ಸಂಹಿತೆಯಲ್ಲಿ ಈ ಬಗ್ಗೆ ನಿರ್ಧಾರವಾಗುವ ಸಾಧ್ಯತೆ ಇದೆ. ಇದು ಒಂದು ವೇಳೆ ಅನುಷ್ಟಾನಕ್ಕೆ ಬಂದರೆ ಕೋಟ್ಯಂತರ ಖಾಸಗಿ ಮತ್ತು ಸರ್ಕಾರಿ ನೌಕರರಿಗೆ ಅದರಿಂದ ಭಾರಿ ಅನುಕೂಲವಾಗಲಿದೆ.
ಗ್ರಾಚ್ಯುಟಿ ಯಾವಾಗ ಸಿಗುತ್ತದೆ? (How Gratuity Calculated)
ಗ್ರಾಚ್ಯುಟಿ ಎನ್ನುವುದು ಸಂಸ್ಥೆ ಅಥವಾ ಉದ್ಯೋಗದಾತರಿಂದ ಉದ್ಯೋಗಿಗೆ ಸಿಗುವ ಒಂದು ಲಾಂಪ್ಸಮ್ ಮೊತ್ತವಾಗಿದೆ. ಇದಕ್ಕಾಗಿ ನೌಕರರು ಕನಿಷ್ಠ 5 ವರ್ಷಗಳವರೆಗೆ ಉದ್ಯೋಗದಾತರೊಂದಿಗೆ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಸಾಮಾನ್ಯವಾಗಿ ಈ ಮೊತ್ತವನ್ನು ಉದ್ಯೋಗಿ ಕೆಲಸ ಬಿಟ್ಟಾಗ ಅಥವಾ ನಿವೃತ್ತಿಯಾದಾಗ ನೀಡಲಾಗುತ್ತದೆ. ನೌಕರನು ಯಾವುದೇ ಕಾರಣದಿಂದ ಮರಣಹೊಂದಿದ ಸಂದರ್ಭದಲ್ಲಿ ಅಥವಾ ಅಪಘಾತದ ಕಾರಣದಿಂದ ಅವನು ಕೆಲಸವನ್ನು ತೊರೆದರೆ, ಅವನು ಅಥವಾ ಅವನ ನಾಮಿನಿ (Gratuity Nominee) ಗ್ರಾಚ್ಯುಟಿ ಮೊತ್ತವನ್ನು ಹಸ್ತಾಂತರಿಸಲಾಗುತ್ತದೆ.
ಗ್ರಾಚ್ಯುಟಿಗೆ ಅರ್ಹತೆ ಏನು?
ಗ್ರಾಚ್ಯುಟಿ ಪಾವತಿ ಕಾಯ್ದೆ 1972 (Gratuity Payments Act 1972) ರ ನಿಯಮಗಳ ಪ್ರಕಾರ, ಗರಿಷ್ಠ ಮೊತ್ತದ ಗ್ರಾಚ್ಯುಟಿ ಮೊತ್ತವು 20 ಲಕ್ಷ ರೂ. ಗಳಾಗಿದೆ. ಗ್ರಾಚ್ಯುಟಿಗಾಗಿ, ಉದ್ಯೋಗಿ ಕನಿಷ್ಠ 5 ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡುವುದು ಕಡ್ಡಾಯವಾಗಿದೆ. ಇದಕ್ಕಿಂತ ಕಡಿಮೆ ಅವಧಿ ಉದ್ಯೋಗದ ಸಂದರ್ಭದಲ್ಲಿ, ಉದ್ಯೋಗಿ ಗ್ರಾಚ್ಯುಟಿಗೆ ಅರ್ಹರಾಗಿರುವುದಿಲ್ಲ. 4 ವರ್ಷ 11 ತಿಂಗಳೊಳಗೆ ಕೆಲಸ ಬಿಟ್ಟರೂ ಗ್ರಾಚ್ಯುಟಿ ಸಿಗುವುದಿಲ್ಲ . ಆದಾಗ್ಯೂ, ಹಠಾತ್ ಸಾವು ಅಥವಾ ಅಪಘಾತದ ಕಾರಣ ಉದ್ಯೋಗಿ ಕೆಲಸವನ್ನು ತೊರೆದರೆ ಈ ನಿಯಮ ಅನ್ವಯಿಸುವುದಿಲ್ಲ.
ಗ್ರಾಚ್ಯುಟಿ ಪಾವತಿ ಕಾಯಿದೆ 1972 ಏನು ಹೇಳುತ್ತದೆ?
>> ನೌಕರರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ 1972 ರಲ್ಲಿ 'ಗ್ರಾಚ್ಯುಟಿ ಪಾವತಿ ಕಾಯಿದೆ' ಜಾರಿಗೆ ತರಲಾಯಿತು.
>> 10 ಅಥವಾ ಅದಕ್ಕಿಂತ ಹೆಚ್ಚು ನೌಕರರು ಕೆಲಸ ಮಾಡುವ ಗಣಿಗಾರಿಕೆ ಪ್ರದೇಶಗಳು, ಕಾರ್ಖಾನೆಗಳು, ತೈಲ ಕ್ಷೇತ್ರಗಳು, ಅರಣ್ಯ ಪ್ರದೇಶಗಳು, ಖಾಸಗಿ ಕಂಪನಿಗಳು ಮತ್ತು ಬಂದರುಗಳಲ್ಲಿ ಕೆಲಸ ಮಾಡುವ ಎಲ್ಲಾ ಸಂಸ್ಥೆಗಳ ನೌಕರರನ್ನು ಈ ಕಾನೂನು ಒಳಗೊಂಡಿದೆ.
>> ಗ್ರಾಚ್ಯುಟಿ ಮತ್ತು ಭವಿಷ್ಯ ನಿಧಿ ಸಂಪೂರ್ಣವಾಗಿ ವಿಭಿನ್ನವಾಗಿವೆ.
>> ಗ್ರಾಚ್ಯುಟಿಯ ಸಂಪೂರ್ಣ ಮೊತ್ತವನ್ನು ಕಂಪನಿಯು (ಉದ್ಯೋಗದಾತ) ನೀಡುತ್ತದೆ. ಇದೇ ವೇಳೆ, ಉದ್ಯೋಗಿ ಭವಿಷ್ಯ ನಿಧಿಗೆ ಶೇ. 12 ರಷ್ಟು ಕೊಡುಗೆಯನ್ನು ಕೂಡ ನೀಡುತ್ತಾನೆ.
ಯಾವ ಸಂಸ್ಥೆಗಳು ಈ ಕಾಯಿದೆಯ ವ್ಯಾಪ್ತಿಗೆ ಬರುತ್ತವೆ?
ಕಳೆದ 12 ತಿಂಗಳುಗಳಲ್ಲಿ ಯಾವುದೇ ಒಂದು ದಿನದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳು ಕೆಲಸ ಮಾಡಿದ ಯಾವುದೇ ಕಂಪನಿ, ಕಾರ್ಖಾನೆ, ಸಂಸ್ಥೆಗಳು ಗ್ರಾಚ್ಯುಟಿ ಪಾವತಿ ಕಾಯ್ದೆಯಡಿ ಬರುತ್ತವೆ. ಒಮ್ಮೆ ಕಂಪನಿ ಅಥವಾ ಸಂಸ್ಥೆಯು ಕಾಯಿದೆಯ ವ್ಯಾಪ್ತಿಗೆ ಬಂದರೆ, ಅದು ಕಾಯಿದೆಯ ವ್ಯಾಪ್ತಿಯಲ್ಲಿಯೇ ಉಳಿಯಬೇಕಾಗುತ್ತದೆ. ಒಂದೊಮ್ಮೆ ಕಂಪನಿಯಲ್ಲಿ ಉದ್ಯೋಗಿಗಳ ಸಂಖ್ಯೆ 10 ಕ್ಕಿಂತ ಕಡಿಮೆ ಇದ್ದರೂ, ಅದು ಕಾಯಿದೆಯ ವ್ಯಾಪ್ತಿಗೆ ಒಳಪಡಲಿದೆ.
ಗ್ರಾಚ್ಯುಟಿಯನ್ನು ಎರಡು ವಿಭಾಗಗಳಲ್ಲಿ ನಿರ್ಧರಿಸಲಾಗುತ್ತದೆ
ಗ್ರಾಚ್ಯುಟಿ ಪಾವತಿ ಕಾಯಿದೆ 1972 ರಲ್ಲಿ, ನೌಕರರು ಪಡೆಯಬೇಕಾದ ಗ್ರಾಚ್ಯುಟಿ ಮೊತ್ತದ ಸೂತ್ರವನ್ನು ನಿರ್ಧರಿಸಲು, ನೌಕರರನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ಮೊದಲ ವರ್ಗವು ಈ ಕಾಯಿದೆಯ ವ್ಯಾಪ್ತಿಗೆ ಬರುವ ನೌಕರರನ್ನು ಒಳಗೊಂಡಿರುತ್ತದೆ, ಆದರೆ ಎರಡನೇ ವರ್ಗವು ಕಾಯಿದೆಯ ಹೊರಗಿರುವ ನೌಕರರನ್ನು ಒಳಗೊಂಡಿದೆ. ಖಾಸಗಿ ಮತ್ತು ಸರ್ಕಾರಿ ವಲಯಗಳಲ್ಲಿ ಕೆಲಸ ಮಾಡುವ ಎರಡೂ ರೀತಿಯ ನೌಕರರು ಈ ಎರಡು ವಿಭಾಗಗಳಿಗೆ ಒಳಪಡುತ್ತಾರೆ.
ವರ್ಗ 1- ಗ್ರಾಚ್ಯುಟಿ ಪಾವತಿ ಕಾಯಿದೆ 1972 ರ ವ್ಯಾಪ್ತಿಯಲ್ಲಿ ಬರುವ ಉದ್ಯೋಗಿಗಳು.
ವರ್ಗ 2-ಗ್ರಾಚ್ಯುಟಿ ಪಾವತಿ ಕಾಯಿದೆ 1972 ರ ವ್ಯಾಪ್ತಿಗೆ ಬರದ ಉದ್ಯೋಗಿಗಳು.
ಇದನ್ನೂ ಓದಿ-Bathing tips : ತಲೆ ಸ್ನಾನಕ್ಕೆ ಬಿಸಿ ನೀರು ಬಳಸುತ್ತೀರಾ? ಈ ಕಾರಣಕ್ಕೆ ಇದು ತಪ್ಪು!
ಗ್ರಾಚ್ಯುಟಿಯ ಮೊತ್ತವನ್ನು ನಿರ್ಧರಿಸಲು ಯಾವ ನಿಯಮ ಅನ್ವಯಿಸುತ್ತದೆ (ಕಾಯಿದೆಯ ವ್ಯಾಪ್ತಿಯ ಒಳಪಡುವ ನೌಕರರಿಗೆ)
ಕೊನೆಯ ವೇತನ x ಸೇವಾ ಅವಧಿ x 15/26 = ಗ್ರ್ಯಾಚೂಟಿ ಮೊತ್ತ
ಕೊನೆಯ ವೇತನದ ವ್ಯಾಖ್ಯೆ ಏನು?
ಮೂಲ ವೇತನ + ತುಟ್ಟಿಭತ್ಯೆ + ಮಾರಾಟದ ಮೇಲಿನ ಕಮಿಷನ್ (ಯಾವುದಾದರೂ ಇದ್ದರೆ). ಈ ಸೂತ್ರದಲ್ಲಿ, ಒಂದು ತಿಂಗಳಲ್ಲಿ 26 ಕೆಲಸದ ದಿನಗಳನ್ನು ಪರಿಗಣಿಸಲಾಗುತ್ತದೆ, ಉದ್ಯೋಗಿಗೆ ಸರಾಸರಿ 15 ದಿನಗಳನ್ನು ತೆಗೆದುಕೊಳ್ಳುವ ಮೂಲಕ ಪಾವತಿಸಲಾಗುತ್ತದೆ.
ಸೇವಾ ಅವಧಿ ವ್ಯಾಖ್ಯೆ
ಸೇವಾ ಅವಧಿ ವರ್ಷದಲ್ಲಿ, 6 ತಿಂಗಳುಗಳಿಗಿಂತ ಹೆಚ್ಚಿನ ಉದ್ಯೋಗವನ್ನು ಒಂದು ಪೂರ್ಣ ವರ್ಷವೆಂದು ಪರಿಗಣಿಸಲಾಗುತ್ತದೆ, ಉದಾಹರಣೆಗೆ 6 ವರ್ಷಗಳು ಮತ್ತು 8 ತಿಂಗಳ ಸೇವೆಯ ಸಂದರ್ಭದಲ್ಲಿ ಅದನ್ನು 7 ವರ್ಷಗಳು ಎಂದು ಪರಿಗಣಿಸಲಾಗುತ್ತದೆ.
ಉದಾಹರಣೆ-ಯಾರಾದರೂ ಕಂಪನಿಯಲ್ಲಿ 6 ವರ್ಷ 8 ತಿಂಗಳು ಕೆಲಸ ಮಾಡಿದ್ದಾರೆ ಎಂದು ಭಾವಿಸೋಣ. ಕೆಲಸ ಬಿಡುವ ಸಮಯದಲ್ಲಿ ಅವರ ಮೂಲ ವೇತನ ತಿಂಗಳಿಗೆ 15 ಸಾವಿರ ರೂ. ಆಗಿದೆ ಎಂದಿಟ್ಟುಕೊಳ್ಳಿ ಇಂತಹ ಪರಿಸ್ಥಿತಿಯಲ್ಲಿ, ಸೂತ್ರದ ಪ್ರಕಾರ, ಅವರ ಗ್ರಾಚ್ಯುಟಿ ಮೊತ್ತವನ್ನು ಈ ರೀತಿ ಲೆಕ್ಕಹಾಕಲಾಗುತ್ತದೆ.
15000x7x15/26= ರೂ 60,577
ಗ್ರಾಚ್ಯುಟಿ ಮೊತ್ತವನ್ನು ಕಂಡುಹಿಡಿಯಲು ಸೂತ್ರ (ಗ್ರಾಚ್ಯುಟಿ ಫಾರ್ಮುಲಾ) (ಕಾಯ್ದೆಯ ಅಡಿಯಲ್ಲಿ ಒಳಪಡದ ನೌಕರರಿಗೆ)
ಕೊನೆಯ ಸಂಬಳ x ಸೇವೆಯ ಉದ್ದ x 15/30
ಕೊನೆಯ ಸಂಬಳ ವ್ಯಾಖ್ಯೆ
ಮೂಲ ವೇತನ + ತುಟ್ಟಿಭತ್ಯೆ + ಮಾರಾಟದ ಮೇಲಿನ ಕಮಿಷನ್ (ಯಾವುದಾದರೂ ಇದ್ದರೆ). ಸೂತ್ರದಲ್ಲಿ, ಒಂದು ತಿಂಗಳಲ್ಲಿ 30 ಕೆಲಸದ ದಿನಗಳನ್ನು ಪರಿಗಣಿಸಿ, ಉದ್ಯೋಗಿಗೆ ಸರಾಸರಿ 15 ದಿನಗಳನ್ನು ತೆಗೆದುಕೊಳ್ಳುವ ಮೂಲಕ ಪಾವತಿಸಲಾಗುತ್ತದೆ.
ಸೇವಾ ಅವಧಿ ವ್ಯಾಖ್ಯೆ
ಅಂತಹ ಉದ್ಯೋಗಿಗಳಿಗೆ, ಉದ್ಯೋಗದ ಕೊನೆಯ ವರ್ಷಕ್ಕೆ 12 ತಿಂಗಳಿಗಿಂತ ಕಡಿಮೆಯಿಲ್ಲದ ಅವಧಿಯನ್ನು ಸೇರಿಸಲಾಗುವುದಿಲ್ಲ. ಉದಾಹರಣೆಗೆ, ಒಬ್ಬ ಉದ್ಯೋಗಿ 6 ವರ್ಷ ಮತ್ತು 8 ತಿಂಗಳು ಕೆಲಸ ಮಾಡಿದರೆ, ಅದನ್ನು 6 ವರ್ಷಗಳವರೆಗೆ ಮಾತ್ರ ಪರಿಗಣಿಸಲಾಗುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ