ಬೆಂಗಳೂರು : 7ನೇ ವೇತನ ಆಯೋಗದ ನಂತರ 8ನೇ ವೇತನ ಆಯೋಗವನ್ನು ಜಾರಿಗೆ ತರುವಂತೆ ಒತ್ತಾಯಿಸಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಬಹಳ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸ ವರ್ಷದಲ್ಲಿ ಹೊಸ ಆಯೋಗ ರಚನೆಯಾಗಲಿದೆಯೇ ಎನ್ನುವುದರ ಬಗ್ಗೆ ಇದೀಗ ಚರ್ಚೆ ತೀವ್ರಗೊಂಡಿದೆ. 2024ರಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಕೇಂದ್ರ ಸರ್ಕಾರಿ ನೌಕರರನ್ನು ಓಲೈಸುವ ದೃಷ್ಟಿಯಿಂದ ಸರ್ಕಾರ 8ನೇ ವೇತನ ಆಯೋಗ ರಚನೆಯನ್ನು ಪ್ರಕಟಿಸಬಹುದು ಎಂದು ನೌಕರರ ಸಂಘಟನೆಗಳು ನಿರೀಕ್ಷಿಸುತ್ತಿವೆ.  ಈ ಬಗ್ಗೆ ಸರ್ಕಾರ ಕೂಡಾ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.


COMMERCIAL BREAK
SCROLL TO CONTINUE READING

8ನೇ ವೇತನ ಆಯೋಗದ ಬಗ್ಗೆ ಸರ್ಕಾರದ ನಿಲುವು : 
8ನೇ ವೇತನ ಆಯೋಗ ರಚನೆಯಾಗಿ ಜಾರಿಗೆ ಬಂದರೆ ಸುಮಾರು 48.67 ಲಕ್ಷ ಕೇಂದ್ರ ನೌಕರರು ಮತ್ತು 67.95 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಆದರೆ,  ಎಂಟನೇ ವೇತನ ಆಯೋಗವನ್ನು ರಚಿಸುವ ಬಗ್ಗೆ ಯಾವುದೇ ರೀತಿಯ ಯೋಜನೆ ಸರ್ಕಾರದ ಮುಂದೆ ಇಲ್ಲ ಎನ್ನುವುದನ್ನು ಮುಂಗಾರು ಅಧಿವೇಶನದಲ್ಲಿ ಸರ್ಕಾರ  ಹೇಳಿತ್ತು. 


ಇದನ್ನೂ ಓದಿ : ಭಾರತದಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ: ಡಿಸೆಂಬರ್‌ 28ರ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಪರಿಶೀಲಿಸಿ!


ಹೊಸ ವೇತನ ಆಯೋಗ ರಚನೆ ಅನಿವಾರ್ಯ : 
ಆದರೆ, ಸರ್ಕಾರದ ಈ ನಿಲುವು ಶೀಘ್ರದಲ್ಲೇ ಬದಲಾಗಬಹುದು ಎಂದು ಮೂಲಗಳು ಹೇಳುತ್ತವೆ. ಇದಕ್ಕೆ ಕೆಲವು ಬಲವಾದ ಕಾರಣಗಳಿವೆ. ಜನವರಿಯಲ್ಲಿ ತುಟ್ಟಿಭತ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಶೇ.50ಕ್ಕೆ ತಲುಪಿದರೆ ತುಟ್ಟಿಭತ್ಯೆ ಶೇ.0ಗೆ ಇಳಿಕೆಯಾಗಲಿದ್ದು, ಶೇ.50ರಷ್ಟು ತುಟ್ಟಿಭತ್ಯೆ ಮೂಲ ವೇತನಕ್ಕೆ ಸೇರ್ಪಡೆಯಾಗಲಿದೆ. ಹೀಗಾದರೆ ವೇತನ ಪರಿಷ್ಕರಣೆ ಆಗಲಿದೆ. ವೇತನ ಪರಿಷ್ಕರಣೆಗಾಗಿ ಮುಂದಿನ ವೇತನ ಆಯೋಗ ರಚನೆ ಅಗತ್ಯ. 


2013 ರ ಸಾರ್ವತ್ರಿಕ ಚುನಾವಣೆಗೂ ಮುನ್ನ 7 ನೇ ವೇತನ ಆಯೋಗದ ರಚನೆ : 
ಈ ಹಿಂದೆ 2013ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 7ನೇ ವೇತನ ಆಯೋಗವನ್ನು ರಚಿಸಿತ್ತು. ಮುಂದಿನ ವರ್ಷ ಅಂದರೆ 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಂಟನೇ ವೇತನ ಆಯೋಗದ ಜಾರಿ ಕುರಿತು ಹಲವು ಊಹಾಪೋಹಗಳು ಎದ್ದಿವೆ.


ಇದನ್ನೂ ಓದಿ :  Arecanut today price: ರಾಜ್ಯದಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ!


ದೇಶದಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ ರಚನೆಯನ್ನು ಬದಲಾಯಿಸಲು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸಲಾಗುತ್ತದೆ ಎಂಬುದನ್ನು ಗಮನಿಸಬೇಕು. 


1947 ರಿಂದ 7 ವೇತನ ಆಯೋಗ: 
ದೇಶದ ಮೊದಲ ವೇತನ ಆಯೋಗವನ್ನು ಜನವರಿ 1946 ರಲ್ಲಿ ರಚಿಸಲಾಯಿತು. 1947 ರಿಂದ, 7 ವೇತನ ಆಯೋಗಗಳನ್ನು ರಚಿಸಲಾಗಿದೆ. ಅಂತಿಮವಾಗಿ, 28 ಫೆಬ್ರವರಿ 2014 ರಂದು, ಏಳನೇ ವೇತನ ಆಯೋಗವನ್ನು ರಚಿಸಲಾಯಿತು.


ಶೇ.46  ತುಟ್ಟಿ ಭತ್ಯೆ ಪಡೆಯುತ್ತಿರುವ ಕೇಂದ್ರ ಸರ್ಕಾರಿ ನೌಕರರು : 
7ನೇ ವೇತನ ಆಯೋಗದ ಅಡಿಯಲ್ಲಿ ನೌಕರರ ಕನಿಷ್ಠ ಮೂಲ ವೇತನ 18,000 ರೂ. 7 ನೇ ಕೇಂದ್ರ ವೇತನ ಆಯೋಗದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಮತ್ತು ಡಿಯರ್ನೆಸ್ ರಿಲೀಫ್ (ಡಿಆರ್) ಅನ್ನು ಇತ್ತೀಚೆಗೆ 42% ರಿಂದ 46% ಕ್ಕೆ ಹೆಚ್ಚಿಸಲಾಗಿದೆ. ಈ ಪರಿಷ್ಕೃತ ದರವು ಜುಲೈ 1, 2023 ರಿಂದ ಅನ್ವಯವಾಗುತ್ತದೆ.


ಇದನ್ನೂ ಓದಿ : ಸಿಲಿಂಡರ್ ಬೆಲೆ 450 ರೂಪಾಯಿಗೆ ಇಳಿಕೆ : ಬಡವರಿಗಾಗಿ ಸರ್ಕಾರದ ದಿಟ್ಟ ಕ್ರಮ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.