New Wage Code: ಉದ್ಯೋಗಿಗಳಿಗೆ ವಾರದಲ್ಲಿ 3 ದಿನ ರಜೆ ಮತ್ತು ಗರಿಷ್ಠ 12 ಗಂಟೆ ಕೆಲಸ
ನೂತನ ವೇತನ ಸಂಹಿತೆ ಜಾರಿಯೊಂದಿಗೆ ಉದ್ಯೋಗಿಗಳ ಗಳಿಕೆಯ ರಜೆಯನ್ನು 240 ರಿಂದ 300ಕ್ಕೆ ಹೆಚ್ಚಿಸಬಹುದು.
ನವದೆಹಲಿ: ಉದ್ಯೋಗಿಗಳ ನೂತನ ಕಾರ್ಮಿಕ ವೇತನ ಸಂಹಿತೆ(New Wage Code 2021) ಬಗ್ಗೆ ಒಂದು ದೊಡ್ಡ ಸುದ್ದಿ ಬಂದಿದೆ. ಈ ವಿಷಯದ ಕುರಿತು ಕಾರ್ಮಿಕ ಸಚಿವಾಲಯದ ಮಹತ್ವದ ಸಭೆಯನ್ನು ಶುಕ್ರವಾರ ನಡೆಸಬಹುದು. ಅದಕ್ಕೂ ಮೊದಲು ಕಾರ್ಮಿಕ ಸಂಹಿತೆಗೆ ಸಂಬಂಧಿಸಿದಂತೆ ರಾಜ್ಯಗಳಿಂದ ಅಭಿಪ್ರಾಯಗಳನ್ನು ಕೇಳಲಾಗುವುದು. ಮೂಲಗಳ ಪ್ರಕಾರ ಹೊಸ ಕಾರ್ಮಿಕ ವೇತನ ಸಂಹಿತೆ ಅನುಷ್ಠಾನದಲ್ಲಿ ವಿಳಂಬವಾಗಬಹುದು ಎನ್ನಲಾಗುತ್ತಿದೆ. ಆದರೆ ಇದರ ನಿಯಮಗಳ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ವರದಿಯಾಗಿದೆ.
ಪ್ರಸ್ತುತ ಹಣಕಾಸು ವರ್ಷದಲ್ಲಿ ನಿಯಮಗಳು ಅನ್ವಯ
ಈ ಹಿಂದೆ ಏಪ್ರಿಲ್ 1 ರಿಂದ ನೂತನ ವೇತನ ಸಂಹಿತೆ ಜಾರಿಯ ಬಗ್ಗೆ ಚರ್ಚೆ ನಡೆದಿತ್ತು. ಆದರೆ ರಾಜ್ಯ ಸರ್ಕಾರಗಳ ಊಹಾಪೋಹಗಳಿಂದಾಗಿ ಇದು ವಿಳಂಬವಾಗಬಹುದು ಎನ್ನಲಾಗುತ್ತಿದೆ. ಹೊಸ ಕಾರ್ಮಿಕ ವೇತನ ಸಂಹಿತೆಗೆ ಸಂಬಂಧಿಸಿದಂತೆ ಶುಕ್ರವಾರ ಕಾರ್ಮಿಕ ಸಚಿವಾಲಯ(Labor Ministry)ದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯಗಳಿಂದ ಸ್ವೀಕರಿಸಿದ ಅಭಿಪ್ರಾಯಗಳನ್ನು ಚರ್ಚಿಸಲಾಗುವುದು. ಇದರ ಜೊತೆಗೆ ಸರ್ಕಾರವು ನಿಯಮಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸುತ್ತದೆ. ಬಹುಮುಖ್ಯ ವಿಷಯವೆಂದರೆ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ವೇತನ ಸಂಹಿತೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ: ಫ್ಲಿಪ್‌ಕಾರ್ಟ್ Big Billion Days ಜೊತೆಗೆ Amazon ಪೈಪೋಟಿ : ಸೆಲ್ ದಿನಾಂಕ ಬದಲಾವಣೆ, ಮತ್ತಷ್ಟು ಡಿಸ್ಕೌಂಟ್!
ಹೊಸ ವೇತನ ಸಂಹಿತೆಯಲ್ಲಿ ಉದ್ಯೋಗಿಗಳ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ನಿಯಮಗಳನ್ನು ಮಾಡಬಹುದು. ಇದರಡಿ ಉದ್ಯೋಗಿ 12 ಗಂಟೆಗಳ ಕಾಲ ಕೆಲಸ ಮಾಡಿದರೆ ನಂತರ ಅವರು ಪ್ರತಿ ವಾರ 3 ದಿನಗಳ ರಜೆ( Weekly off)ಯನ್ನು ಪಡೆಯುತ್ತಾರೆ. ಇದರ ಹೊರತಾಗಿ ಹೊಸ ವೇತನ ಸಂಹಿತೆಯ ಅಡಿಯಲ್ಲಿ ಭತ್ಯೆಗಳ ಮಿತಿಯು ಶೇ.50ರಷ್ಟು ಆಗಿರುತ್ತದೆ. ಒಟ್ಟು ಸಂಬಳದ ಅರ್ಧದಷ್ಟು ಮೂಲ ವೇತನದ ಅಡಿಯಲ್ಲಿ ಬರುತ್ತದೆ. ಇಪಿಎಫ್ ಕೊಡುಗೆಯನ್ನು ಮೂಲ ಸಂಬಳದಿಂದಲೇ ಲೆಕ್ಕಹಾಕಲಾಗುತ್ತದೆ ಮತ್ತು ಮೂಲ ವೇತನದ ಹೆಚ್ಚಳವು ಪಿಎಫ್ ಕೊಡುಗೆಯನ್ನು ಹೆಚ್ಚಿಸುತ್ತದೆ.
12 ಗಂಟೆಗಳಿಗಿಂತ ಹೆಚ್ಚು ಕೆಲಸವಿಲ್ಲ
ಪ್ರಸ್ತಾವಿತ ನಿಯಮಗಳಲ್ಲಿ ಹೊರಬಂದಿರುವ ಬಹುಮುಖ್ಯ ವಿಷಯವೆಂದರೆ ಕೆಲಸದ ಸಮಯವು ಗರಿಷ್ಠ 12 ಗಂಟೆಗಳಿರುತ್ತದೆ. ಇದರ ಹೊರತಾಗಿ 15-30 ನಿಮಿಷಗಳ ಹೆಚ್ಚುವರಿ ಕೆಲಸವನ್ನು Overtime ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ನಿಯಮದ ಪ್ರಕಾರ 30 ನಿಮಿಷಗಳಿಗಿಂತ ಕಡಿಮೆ ಸಮಯವನ್ನು Overtime ಎಂದು ಪರಿಗಣಿಸಲಾಗುವುದಿಲ್ಲ. ಪ್ರತಿ 5 ಗಂಟೆಗಳ ನಂತರ ಉದ್ಯೋಗಿಗೆ ಅರ್ಧ ಗಂಟೆ ವಿರಾಮ ನೀಡುವ ಪ್ರಸ್ತಾವನೆಯನ್ನು ಈ ನಿಯಮಗಳಲ್ಲಿ ಸೇರಿಸಲಾಗಿದೆ.
ಇದನ್ನೂ ಓದಿ: Amazon ಕಂಪನಿಯ ಈ ಸಿಕ್ರೆಟ್ ಸೈಟ್ ನಲ್ಲಿ ಎಂದಾದರು ಶಾಪಿಂಗ್ ಮಾಡಿದ್ದೀರಾ? ಅಗ್ಗದ ಬೆಲೆ ಕಂಡು ನೀವೂ ಬೆಚ್ಚಿಬೀಳುವಿರಿ
ನೂತನ ವೇತನ ಸಂಹಿತೆ ಜಾರಿಯೊಂದಿಗೆ ಉದ್ಯೋಗಿಗಳ ಗಳಿಕೆಯ ರಜೆ(Earned Leave)ಯನ್ನು 240 ರಿಂದ 300ಕ್ಕೆ ಹೆಚ್ಚಿಸಬಹುದು. ಗಳಿಕೆ ರಜೆಯನ್ನು 240ರಿಂದ 300ಕ್ಕೆ ಹೆಚ್ಚಿಸಲು ಉದ್ಯೋಗಿಗಳಿಂದ ಬೇಡಿಕೆ ಇತ್ತು. ಇದರ ಹೊರತಾಗಿ ಹೊಸ ವೇತನ ಸಂಹಿತೆಯಲ್ಲಿನ ಭತ್ಯೆಗಳು ಯಾವುದೇ ವೆಚ್ಚದಲ್ಲಿ ಒಟ್ಟು ಸಂಬಳದ ಶೇ.50ರಷ್ಟನ್ನು ಮೀರಬಾರದು. ಉದ್ಯೋಗಿಯ ಸಂಬಳ ತಿಂಗಳಿಗೆ 50 ಸಾವಿರ ರೂ. ಆಗಿದ್ದರೆ, ಆತನ ಮೂಲ ವೇತನ 25 ಸಾವಿರ ರೂ. ಆಗಿರಬೇಕು ಮತ್ತು ಉಳಿದ 25 ಸಾವಿರ ರೂ. ಆತನ ಭತ್ಯೆಯ ರೂಪದಲ್ಲಿ ಬರಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.