Amazon ಕಂಪನಿಯ ಈ ಸಿಕ್ರೆಟ್ ಸೈಟ್ ನಲ್ಲಿ ಎಂದಾದರು ಶಾಪಿಂಗ್ ಮಾಡಿದ್ದೀರಾ? ಅಗ್ಗದ ಬೆಲೆ ಕಂಡು ನೀವೂ ಬೆಚ್ಚಿಬೀಳುವಿರಿ

Amazon Warehouse - ಒಂದು ವೇಳೆ ನಿಮಗೆ ಅಮೆಜಾನ್ ಕಂಪನಿಯ ವೆಬ್ ಸೈಟ್ ಮೇಲೆ ಸಿಗುತ್ತಿರುವ ಡಿಸ್ಕೌಂಟ್ (Amazon Discount) ನಿಂದ ತೃಪ್ತಿಯಾಗಿಲ್ಲ ಹಾಗೂ ನೀವು ಮತ್ತಷ್ಟು ಡಿಸ್ಕೌಂಟ್ ಬಯಸುತ್ತಿದ್ದರೆ, ನೀವು ಸರಿಯಾದ ಜಾಗಕ್ಕೆ ಬಂದಿರುವಿರಿ. ಏಕೆಂದರೆ, ಇಂದು ನಾವು ನಿಮಗೆ ಹೇಳಲು ಹೊರಟಿರುವ ಸಿಕ್ರೆಟ್ ವೆಬ್ ಸೈಟ್ (Amazon Secrete Website) ನಲ್ಲಿ ಕೊಡುಗೆಗಳನ್ನು ಕಂಡು ನೀವೂ ಕೂಡ ಬೆಚ್ಚಿಬೀಳುವಿರಿ.

Written by - Nitin Tabib | Last Updated : Sep 25, 2021, 07:13 PM IST
  • ಅಮೆಜಾನ್ ನ ಒಂದು ಗುಪ್ತ ವೆಬ್ ಸೈಟ್ ಇದಾಗಿದೆ.
  • ಅದರ ಹೆಸರು ಅಮೆಜಾನ್ ವೆಯರ್ ಹೌಸ್ ಆಗಿದೆ.
  • ಈ ಸೈಟ್ ನಲ್ಲಿ ಭಾರಿ ಡಿಸ್ಕೌಂಟ್ ಸಿಗುತ್ತದೆ.
Amazon ಕಂಪನಿಯ ಈ ಸಿಕ್ರೆಟ್ ಸೈಟ್ ನಲ್ಲಿ ಎಂದಾದರು ಶಾಪಿಂಗ್ ಮಾಡಿದ್ದೀರಾ? ಅಗ್ಗದ ಬೆಲೆ ಕಂಡು ನೀವೂ ಬೆಚ್ಚಿಬೀಳುವಿರಿ title=
Amazon Warehouse (File Photo)

ನವದೆಹಲಿ: Amazon Warehouse - ಆನ್ ಲೈನ್ ಶಾಪಿಂಗ್ (Online Shoppling) ಇಷ್ಟಪಡುವವರಿಗೆ ಅಮೆಜಾನ್ ಹೆಸರು ಗೊತ್ತೇ ಇರದಿರಲು ಸಾಧ್ಯವೇ ಇಲ್ಲ.  ಆನ್‌ಲೈನ್ ಶಾಪಿಂಗ್‌ನ ಹೆಸರನ್ನು ತೆಗೆದುಕೊಂಡ ತಕ್ಷಣ ಅಮೆಜಾನ್‌ನ ಹೆಸರು ಮೊದಲಿಗೆ ಬರುತ್ತದೆ. ಅಮೆಜಾನ್ (Amazon) ತನ್ನ ಬಳಕೆದಾರರಿಗೆ ಹಲವು ಕೊಡುಗೆಗಳನ್ನು ಮತ್ತು ರಿಯಾಯಿತಿಗಳನ್ನು ನೀಡುತ್ತಲೇ ಇದ್ದರೂ, ಈ ಕೊಡುಗೆಗಳ ನಂತರವೂ ನಿಮ್ಮ ನೆಚ್ಚಿನ ವಸ್ತುವಿನ ಬೆಲೆಯಲ್ಲಿ ನಿಮಗೆ ತೃಪ್ತಿಯಿಲ್ಲದಿರಬಹುದು. ಹಾಗಿದ್ದಲ್ಲಿ, ಅಂತಹ 'ರಹಸ್ಯ' ವೆಬ್‌ಸೈಟ್‌ನ ಕುರಿತು ನಾವು ನಿಮಗಾಗಿ ಮಾಹಿತಿಯನ್ನು ನೀಡಲಿದ್ದೇವೆ. ಅದರಲ್ಲಿ ನೀವು ಅಮೆಜಾನ್‌ನಿಂದ ಅಗ್ಗದ ಉತ್ಪನ್ನಗಳನ್ನು ಖರೀದಿಸಬಹುದು. ನಾವು 'ಅಮೆಜಾನ್ ವೇರ್‌ಹೌಸ್' ಬಗ್ಗೆ ಮಾತನಾಡುತ್ತಿದ್ದೇವೆ, ಅಲ್ಲಿ ನೀವು 7 ಸಾವಿರ ಉತ್ಪನ್ನಗಳನ್ನು ಕೇವಲ 2 ಸಾವಿರ ರೂ.ಗಳಿಗೆ ಪಡೆಯಬಹುದು. ಈ ಜಾಲತಾಣದ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಳ್ಳೋಣ ಬನ್ನಿ.

Amazon Warehouse ನಲ್ಲಿ ಸಿಗುತ್ತದೆ ಭಾರಿ ಡಿಸ್ಕೌಂಟ್
ಅಮೆಜಾನ್ Warehouseನಲ್ಲಿ ಗ್ರಾಹಕರು ಹಲವು ಸಾವಿರ ರೂಪಾಯಿಗಳ ಉಳಿತಾಯ ಮಾಡಬಹುದು. ನೀವು ಅಲ್ಲಿ ಎಲ್ಲಾ ರೀತಿಯ ವಸ್ತುಗಳನ್ನು ಅದ್ಭುತ ಬೆಲೆಯಲ್ಲಿ ಖರೀದಿಸಬಹುದು. ಮಾರ್ಟಿನ್ ಲೂಯಿಸ್ ಅವರ ವೆಬ್‌ಸೈಟ್ ಈ ವೆಬ್‌ಸೈಟ್‌ನಿಂದ ಖರೀದಿ ಮಾಡಿದ ಕೆಲ ಗ್ರಾಹಕರ ಪಟ್ಟಿ ಮಾಡಲಾಗಿದೆ. 20 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಬೆಲೆಬಾಳುವ ಪ್ರೆಶರ್ ವಾಷರ್, ನೀವು ಅಮೆಜಾನ್ (Amazon Warehouse) ಗೋದಾಮಿನಲ್ಲಿ ಸುಮಾರು 13 ಸಾವಿರ ರೂಪಾಯಿಗಳಿಗೆ ಮಾತ್ರ ಖರೀದಿಸಬಹುದು. ಇದರ ಹೊರತಾಗಿ, ನೀವು ಕಾಫಿ ಯಂತ್ರಗಳಂತಹ ಅನೇಕ ಉತ್ಪನ್ನಗಳ ಮೇಲೆ ಉತ್ತಮ ಕೊಡುಗೆಗಳನ್ನು ಪಡೆಯಬಹುದು.

ನಿಮ್ಮ ಖರೀದಿಯನ್ನು (Online Sale) ಇನ್ನಷ್ಟು ಆರಾಮದಾಯಕವಾಗಿಸುತ್ತದೆ ಅಮೆಜಾನ್ ವೇರ್ ಹೌಸ್
ಅಮೆಜಾನ್‌ನ ಈ ರಹಸ್ಯ ವೆಬ್‌ಸೈಟ್, ಅದರ ಮುಖ್ಯ ವೇದಿಕೆಯಂತೆಯೇ ಕಾರ್ಯನಿರ್ವಹಿಸುತ್ತದೆ ಮತ್ತು ತನ್ನ ಗ್ರಾಹಕರಿಗೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಸುಲಭ ರಿಟರ್ನ್ ಪಾಲಿಸಿಯಿಂದ ಗುಣಮಟ್ಟದ ಉತ್ಪನ್ನಗಳವರೆಗೆ, ಇಲ್ಲಿಯೂ ಸಹ ಗ್ರಾಹಕರ ಪ್ರತಿಯೊಂದು ಅಗತ್ಯವನ್ನು ನೋಡಿಕೊಳ್ಳಲಾಗುತ್ತದೆ. ನೀವು ಖರೀದಿಸಿದ ಉತ್ಪನ್ನ ನಿಮಗೆ ಇಷ್ಟವಾಗದಿದ್ದರೆ, ಅದನ್ನು ಹಿಂದಿರುಗಿಸಲು ನಿಮಗೆ 30 ದಿನಗಳ ಸಮಯಾವಕಾಶ ಇರುತ್ತದೆ.

ಆದರೆ, ನೆನಪಿರಲಿ ಈ ವೇದಿಕೆಯಲ್ಲಿ ದೊರೆಯುವ ಉತ್ಪನ್ನಗಳು ಅಗ್ಗದ ದರದಲ್ಲಿರುತ್ತವೆ ಆದರೆ, ಬ್ರಾಂಡ್ ನ್ಯೂ ಆಗಿರುವುದಿಲ್ಲ. ಈ ವೆಬ್ ಸೈಟ್ ನಲ್ಲಿ ಸಿಗುವ ಉತ್ಪನ್ನಗಳು ರೀಫರ್ಬಿಶ್ಡ್ ಹಾಗೂ ಸೆಕೆಂಡ್ ಹ್ಯಾಂಡ್ ಆಗಿರುತ್ತವೆ. ಇಲ್ಲಿ ದೊರೆಯುವ ಎಲ್ಲ ಉತ್ಪನ್ನಗಳನ್ನು ಮೊದಲು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆಯೇ ಅಥವಾ ಇಲ್ಲವೇ, ನೋಡಲು ಸರಿಯಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ಪರೀಶೀಲಿಸಲಾಗುತ್ತದೆ.

ಇದನ್ನೂ ಓದಿ-Amazon Offers: ಅಮೆಜಾನ್‌ನಲ್ಲಿ ಬಂಪರ್ ಕೊಡುಗೆ, ಕೇವಲ 99 ರೂ.ಗೆ ಬಲವಾದ ಬ್ಯಾಟರಿಯೊಂದಿಗೆ ಸ್ಮಾರ್ಟ್‌ಫೋನ್ ಖರೀದಿಸುವ ಅವಕಾಶ

ನಿಮ್ಮ ಅವಶ್ಯಕತೆಯನ್ನು ಪೂರೈಸಲಿದೆ ಅಮೆಜಾನ್ ವೆಯರ್ ಹೌಸ್
ಈ ಗುಪ್ತ ವೆಬ್ ಸೈಟ್ ನಲ್ಲಿ ಯಾವ ಸರಕುಗಳು ಸಿಗುತ್ತವೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿಯೂ ಮೂಡಿದ್ದರೆ, ಕೇಳಿ... ಈ ವೆಬ್ ಸೈಟ್ ನಲ್ಲಿ 40 ಸಾವಿರಕ್ಕೂ ಅಧಿಕ ಉತ್ಪನ್ನಗಳು ದೊರೆಯುತ್ತವೆ. ಇಲ್ಲಿರುವ ಎಲ್ಲ ಐಟಂಗಳನ್ನೂ ಮನೆ, ಕಿಚನ್, ಇಲೆಕ್ಟ್ರಾನಿಕ್ಸ್ ಇತ್ಯಾದಿ ಎಂಬ ಒಟ್ಟು 34 ಕೆಟಗರಿಯಲ್ಲಿ ವಿಂಗಡಿಸಲಾಗಿದೆ. ಅವುಗಳನ್ನು ಹುಡುಕುವುದು ಮತ್ತು ಖರೀದಿಸುವುದು ತುಂಬಾ ಸುಲಭವಾಗಿದೆ.

ಇದನ್ನೂ ಓದಿ-iPhone 12, iPhone 12 mini ಭಾರೀ ರಿಯಾಯಿತಿಗಳಲ್ಲಿ ಲಭ್ಯ

ಹಾಗಾದರೆ ಒಂದು ವೇಳೆ ಅಮೆಜಾನ್ ಮೂಲ ವೇದಿಕೆಯಲ್ಲಿ ಸಿಗುತ್ತಿರುವ ಡಿಸ್ಕೌಂಟ್ ನಿಂದ ಒಂದು ವೇಳೆ ನೀವೂ ಕೂಡ ಸಂತುಷ್ಟರಾಗಿರದಿದ್ದರೆ, ಅಮೆಜಾನ್ ವೆಯರ್ ಹೌಸ್ ನಿಮಗೆ ಮತ್ತೊಂದು ಉತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ-Amazon Deal of the Day: ಇಂದು 5G Smartphones ಮೇಲೆ ಪಡೆಯಿರಿ ಬಂಪರ್ ರಿಯಾಯಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News