Union Budget 2022: ಮಂಗಳವಾರ ಬೆಳಗ್ಗೆ ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡಿಸಿದ ಬಳಿಕ ಸಂಜೆ ಹಣಕಾಸು ಸಚಿವಾಲಯ (Finance Ministry) ಪತ್ರಿಕಾಗೋಷ್ಠಿ ನಡೆಸಿದ್ದು, ಬಜೆಟ್ (Budget 2022) ಕುರಿತ ಹಲವು ಪ್ರಶ್ನೆಗಳಿಗೆ ನಿರ್ಮಲಾ ಸೀತಾರಾಮನ್ ಉತ್ತರ ನೀಡಿದ್ದಾರೆ. ಜನ ಸಾಮಾನ್ಯರಿಗೆ ಬಜೆಟ್ ಅನುಕೂಲವಾಗಲಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಆದಾಯ ತೆರಿಗೆ (Income Tax) ಕುರಿತು ಕೇಳಿದ ಪ್ರಶ್ನೆಗೆ, ನಾನು ಈ ಬಾರಿಯೂ ತೆರಿಗೆ ಹೆಚ್ಚಿಸಿಲ್ಲ ಎಂದು ಅವರು ಉತ್ತರ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಧಾನಿ ಮೋದಿಯವರ ಆದೇಶ ಪ್ರಸ್ತಾಪಿಸಿದ ಹಣಕಾಸು ಸಚಿವೆ
"ನಾನು ತೆರಿಗೆಯನ್ನು ಹೆಚ್ಚಿಸಿಲ್ಲ, ಅದನ್ನೇ ಪುನರಾವರ್ತಿಸಲು ಬಯಸುತ್ತೇನೆ ಎಂದ ನಿರ್ಮಲಾ ಸೀತಾರಾಮನ್, ಕಳೆದ ವರ್ಷ ಮತ್ತು ಈ ವರ್ಷವೂ ತೆರಿಗೆ ಮೂಲಕ ಒಂದು ಪೈಸೆ ಹೆಚ್ಚು ಗಳಿಸುವ ಪ್ರಯತ್ನ ಮಾಡಿಲ್ಲ, ಕಳೆದ ಬಾರಿ ಪ್ರಧಾನಿಯವರ ಆದೇಶವಿತ್ತು. ಎಷ್ಟೇ ನಷ್ಟವಾದರೂ ಮಹಾಮಾರಿ ಕಾಲದಲ್ಲಿ ಸಾರ್ವಜನಿಕರಿಗೆ ತೆರಿಗೆ ಹೊರೆಯಾಗಬಾರದು ಎಂಬ ಆದೇಶ ನನಗೆ ಈ ಬಾರಿಯೂ ಇತ್ತು.ಅದಕ್ಕಾಗಿಯೇ ತೆರಿಗೆ ಮೂಲಕ ಹಣ ಸಂಪಾದಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಈ ಬಾರಿಯೂ ಮಾಡಿಲ್ಲ. ತೆರಿಗೆ ಹೆಚ್ಚಿಸಿಲ್ಲ" ಎಂದು ಹೇಳಿದ್ದಾರೆ. 


ಕ್ರಿಪ್ಟೋ ಕರೆನ್ಸಿ (Crypto Currency) ಕುರಿತು ನಿರ್ಮಲಾ ಹೇಳಿದ್ದೇನು?
ಈ ಬಾರಿಯ ಬಜೆಟ್ ನಲ್ಲಿ ಕ್ರಿಪ್ಟೋಕರೆನ್ಸಿಗಳ ಮೇಲೆ ಶೇ.30ರಷ್ಟು ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ. ಕೇಂದ್ರವು ಈ ಕರೆನ್ಸಿಯನ್ನು ಕಾನೂನುಬದ್ಧಗೊಳಿಸಿದೆಯೇ ಎಂಬ ಬಗ್ಗೆ ಹಲವು ಅನುಮಾನಗಳು ಇದ್ದವು. ಇದಕ್ಕೆ ಹಣಕಾಸು ಸಚಿವರು, ಕ್ರಿಪ್ಟೋಕರೆನ್ಸಿಯಿಂದ ಬರುವ ಆದಾಯದ ಮೇಲೆ ಶೇ.30ರಷ್ಟು ತೆರಿಗೆ ವಿಧಿಸಿದ್ದೇವೆ, ಏಕೆಂದರೆ ಅದು ಆಸ್ತಿಯಾಗಿದೆ. ಡಿಜಿಟಲ್ ಕರೆನ್ಸಿಯ (Digital Currency) ವಿಷಯ ಏನೆಂದರೆ, ಅದನ್ನು ಆರ್‌ಬಿಐ ನೀಡುತ್ತದೆ. ಈ ಸಂದರ್ಭದಲ್ಲಿ ಅವರು ಕ್ರಿಪ್ಟೋಕರೆನ್ಸಿಗಳನ್ನು ಕಾನೂನು ಕರೆನ್ಸಿ ಎಂದು ಪರಿಗಣಿಸುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.


"ನಾವು ಆರ್‌ಬಿಐ ನೀಡುವ ಡಿಜಿಟಲ್ ಕರೆನ್ಸಿಯನ್ನು ಮಾತ್ರ ಅರ್ಥೈಸುತ್ತೇವೆ, ಉಳಿದ ಕ್ರಿಪ್ಟೋ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಯಾವುದೇ ಅರ್ಥವಿಲ್ಲ. ಕ್ರಿಪ್ಟೋ ಖರೀದಿ ಮತ್ತು ಮಾರಾಟದಿಂದ ಬರುವ ಆದಾಯ ಎಂದು ಮಾತ್ರ ಹೇಳಲಾಗಿದೆ. ಇದು ಒಂದು ರೀತಿಯ ಆಸ್ತಿಯಾಗಿದ್ದು, ಅದರ ಮೇಲೆ ನಾವು ಶೇ 30% ತೆರಿಗೆಯನ್ನು ವಿಧಿಸಿದ್ದೇವೆ" ಎಂದು ಸೀತಾರಾಮನ್ ಹೇಳಿದ್ದಾರೆ. 


ಇದನ್ನೂ ಓದಿ-Budget 2022: 49 ವರ್ಷಗಳ ಹಿಂದೆ Black Budget ಮಂಡನೆಯಾಗಿತ್ತು, ಕಾರಣ ಏನು ಗೊತ್ತಾ?


ಉದ್ಯೋಗಾವಕಾಶ (Job Creation) ಸೃಷ್ಟಿ ಹಾಗೂ 80 ಲಕ್ಷ ಮನೆ ನಿರ್ಮಾಣ ಹೇಗೆ?
80 ಲಕ್ಷ ಜನರಿಗೆ ಮನೆ ಮತ್ತು ಉದ್ಯೋಗ ನೀಡುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವೆ, “ನಾವು ಮೂಲಸೌಕರ್ಯಕ್ಕಾಗಿ ಈ ವರ್ಷಐದೂವರೆ ಲಕ್ಷ ಕೋಟಿ ರೂ. ವೆಚ್ಚ ಮಾಡಲಿದ್ದೇವೆ.  ಕಳೆದ ವರ್ಷಕ್ಕಿಂತ ಇದು ಶೇ. 34  ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಇಂದು ಮಂಡಿಸಿದ ಬಜೆಟ್‌ನಲ್ಲಿ ನಾವು ಮುಂದಿನ ವರ್ಷದಲ್ಲಿ ವರ್ಷದಲ್ಲಿ, ಐದೂವರೆ ಲಕ್ಷ ಕೋಟಿಗಳಿಂದ ಏಳೂವರೆ ಲಕ್ಷ ಕೋಟಿಗಳ ಸಾರ್ವಜನಿಕ ಹೂಡಿಕೆಯನ್ನು ಉತ್ತೇಜಿಸುತ್ತಿದ್ದೇವೆ, ಅಂದರೆ ಆ ಮೊತ್ತದ ಕ್ಯಾಪಿಟಲ್ ಎಕ್ಸ್ಪಿಂಡಿಚರ್ ಅನ್ನು ನಾವು ಉತ್ತೆಜಿಸುತ್ತಿದ್ದೇವೆ. ಅದು ತಕ್ಷಣವೇ ಉದ್ಯೋಗಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ" ಎಂದು ಹೇಳಿದ್ದಾರೆ. 


ಇದನ್ನೂ ಓದಿ-Budget 2022: ದೇಶದ ಯುವಕರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ, 60 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ


"ಏಕೆಂದರೆ ನಾವು ಖರ್ಚುಗಳನ್ನು ಭರಿಸುತ್ತಿದ್ದೇವೆ. ರಸ್ತೆ ನಿರ್ಮಾಣಕ್ಕೆ, ಏರ್ಪೋರ್ಟ್ ಗಳಿಗಾಗಿ. ಸೀಪೋರ್ಟ್ ಗಳಿಗಾಗಿ ಇತ್ಯಾದಿ. ಈ ಎಲ್ಲಾ ಕೆಲಸಗಳಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಮತ್ತು ಅದು ಅವಶ್ಯಕತೆ ಕೂಡ ಹೌದು. ಇದರಿಂದ ನೌಕರಿಗಳು ಸೃಷ್ಟಿಯಾಗಲಿವೆ ಮತ್ತು ಅದರ ಜೊತೆಗೆ 14 ಸೆಕ್ಟರ್ ಗಳಲ್ಲಿ  ನಾವು ಪ್ರೊಡಕ್ಷನ್ ಲಿಂಕ್ಡ್  ಇನ್ಸೆಂಟೀವ್ ಕೂಡ ನೀಡುತ್ತಿದ್ದೇವೆ. ಇದರರ್ಥ ಉತ್ಪಾದನೆಗಾಗಿ ಇರುವ ಮತ್ತು ಉತ್ಪಾದನೆ ಮಾಡುವ ಪ್ರತಿಯೊಂದು ಯುನಿಟ್ ಗೆ ನಾವು ಇನ್ಸೆಂಟೀವ್ ನೀಡಲಿದ್ದೇವೆ. ಏಕೆಂದರೆ ಉತ್ಪಾದನೆ ಹೆಚ್ಚಾದಂತೆ ಉದ್ಯೋಗಾವಕಾಶಗಳು ಕೂಡ ಹೆಚ್ಚಾಗಲಿವೆ" ಎಂದು ನಿರ್ಮಲಾ ಹೇಳಿದ್ದಾರೆ.


ಇದನ್ನೂ ಓದಿ-Budgetಗೆ 'ಬಜೆಟ್' ಅಂತಾನೆ ಏಕೆ ಕರೆಯುತ್ತಾರೆ? ಯಾರು ಅದನ್ನು ಆರಂಭಿಸಿದರು, 289 ವರ್ಷಗಳ ಹಿಂದಿನ ಕಥೆ ಇಲ್ಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.