mukesh ambani: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಅವರು ಆಂಟಿಲಿಯೊದಲ್ಲಿ ಅತ್ಯಂತ ಐಷಾರಾಮಿ ಜೀವನವನ್ನು ನಡೆಸುತ್ತಾರೆ, ಇದು ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. 


COMMERCIAL BREAK
SCROLL TO CONTINUE READING

ಉದ್ಯಮಿ ಮುಖೇಶ್ ಅಂಬಾನಿ ಅವರ ಜೀವನ ಸರಳತೆಗೆ ಜೀವಂತ ಉದಾಹರಣೆ. ಏಷ್ಯಾದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದರೂ, ಅವರ ಜೀವನಶೈಲಿ ಮತ್ತು ದೇಸಿ ಆಹಾರ ಪದ್ಧತಿಯು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ. ಅಂಬಾನಿ ಗುಜರಾತ್ ನಿವಾಸಿ. ಅವರು ಗುಜರಾತಿ ಆಹಾರವನ್ನು ಇಷ್ಟಪಡುತ್ತಾರೆ. 


ಇದನ್ನೂ ಓದಿ-ನಟ ವಿಕ್ರಮ್ ಪತ್ನಿ ಯಾರು ಗೊತ್ತಾ? ಇವರ ದಾಂಪತ್ಯದಲ್ಲಿದೆ ಇಂತದ್ದೊಂದು ಟ್ವಿಸ್ಟ್!!


ಕೆಲ ಸಮಯದ ಹಿಂದೆ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ವಾರಣಾಸಿಗೆ ಭೇಟಿ ನೀಡಿದ್ದರು. ಅಲ್ಲಿ ಅವರು ವಾರಣಾಸಿಯಲ್ಲಿ ಪ್ರಸಿದ್ಧವಾದ ಚಾಟ್ ಅನ್ನು ಸವಿದಿದ್ದರು.. ಅಷ್ಟೇ ಅಲ್ಲ ಅಲ್ಲಿನ ಸ್ಥಳೀಯ ಜನರೊಂದಿಗೆ ಸಂವಾದ ನಡೆಸಿದರು. ಅವರು ತಮ್ಮ ಪತಿ ಮುಖೇಶ್ ಅಂಬಾನಿ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ತಮ್ಮ ನೆಚ್ಚಿನ ತಿಂಡಿಗಳ ಬಗ್ಗೆ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ-ಬಾಲನಟನಾಗಿ ಜಗಮೆಚ್ಚುವ ಸಾಧನೆ..ಹತ್ತನೇ ವಯಸ್ಸಿನಲ್ಲಿಯೇ ನ್ಯಾಷನಲ್‌ ಅವಾರ್ಡ್‌ ಗೆದ್ದುಕೊಂಡಿದ್ದರು ಅಪ್ಪು..ಯಾವ ಸಿನಿಮಾಗೆ ಗೊತ್ತಾ..?


ತಮ್ಮ ಪತಿ ಮುಖೇಶ್ ಅಂಬಾನಿ ಆಹಾರದ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಿರುತ್ತಾರೆ ಎಂದು ನೀತಾ ಅಂಬಾನಿ ಹೇಳುತ್ತಾರೆ. ಮುಖೇಶ್ ಆರೋಗ್ಯಕರ ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾತ್ರ ತಿನ್ನುತ್ತಾರೆ. ಅವರು ವಾರಕ್ಕೊಮ್ಮೆ ಮಾತ್ರ ಹೊರಗೆ ತಿನ್ನುತ್ತಾರೆ. ಅಕ್ಕಿ ಹಿಟ್ಟಿನಿಂದ ತಯಾರಿಸಿದ ಗುಜರಾತಿ ತಿಂಡಿಯಾದ ಪಾಂಕಿ ಮುಕೇಶ್ ಅಂಬಾನಿ ಅವರ ಫೇವರಿಟ್ ಎನ್ನುತ್ತಾರೆ ನೀತಾ. ಅಂಬಾನಿಯ ಅಚ್ಚುಮೆಚ್ಚಿನ ಗುಜರಾತಿ ತಿಂಡಿ.. ಅಕ್ಕಿ ಹಿಟ್ಟಿನಿಂದ ಪಾಂಕಿ ತಯಾರಿಸಲಾಗುತ್ತದೆ. ಇದರ ತಯಾರಿಕೆಯಲ್ಲಿ ಬಾಳೆ ಎಲೆಗಳನ್ನು ಸಹ ಬಳಸಲಾಗುತ್ತದೆ. ಬಾಳೆ ಎಲೆಗಳಿಂದ ಬೇಯಿಸಿದ ಭಕ್ಷ್ಯಗಳು ನೈಸರ್ಗಿಕ ಪರಿಮಳವನ್ನು ಹೊಂದಿರುತ್ತವೆ ಮತ್ತು ಪೋಷಕಾಂಶಗಳಿಂದ ತುಂಬಿರುತ್ತವೆ.


ಬಾಳೆ ಎಲೆಗಳು ನೈಸರ್ಗಿಕ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿವೆ. ಅವು ಆಹಾರದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತವೆ. ಅದಕ್ಕಾಗಿಯೇ ಪಂಕಿ ಬಾಳೆ ಎಲೆಯಲ್ಲಿ ಬೇಯಿಸಲಾಗುತ್ತದೆ.. ಅಂಬಾನಿ ಕುಟುಂಬ ತಿನ್ನುವ ಹೆಚ್ಚಿನ ತಿಂಡಿಗಳು ಅಕ್ಕಿ ಹಿಟ್ಟಿನಿಂದ ಮಾಡಲ್ಪಟ್ಟಿರುತ್ತದೆ.. ಅಕ್ಕಿ ಹಿಟ್ಟು ಗ್ಲುಟನ್ ಮುಕ್ತವಾಗಿದೆ. ಇದರಲ್ಲಿ ನಾರಿನಂಶ ಕಡಿಮೆ ಇದ್ದರೂ ಇದನ್ನು ತಯಾರಿಸಲು ಬಳಸುವ ಪದಾರ್ಥಗಳಲ್ಲಿ ನಾರಿನಂಶ ಹೆಚ್ಚಿದ್ದು, ಸುಲಭವಾಗಿ ಜೀರ್ಣವಾಗುತ್ತದೆ. ಇದು ಕಡಿಮೆ ಕೊಬ್ಬು, ಕಡಿಮೆ ಕ್ಯಾಲೋರಿ, ಗ್ಲುಟನ್ ಮುಕ್ತವಾಗಿರುವುದರಿಂದ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.