ಬೆಂಗಳೂರು : ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನು ಬದಲಾಯಿಸಬೇಕು ಎನ್ನುವವರಿಗೆ ಇಲ್ಲಿದೆ ಬಿಗ್ ಅಪ್ಡೇಟ್. ಈ ವಿಚಾರವಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಹೊಸ ನಿಯಮ ರೂಪಿಸಿದೆ. ಈ ನಿಯಮದ ಅಡಿಯಲ್ಲಿ, ಕುಟುಂಬದ ಮುಖ್ಯಸ್ಥರ ಒಪ್ಪಿಗೆಯೊಂದಿಗೆ ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್‌ನಲ್ಲಿ ತಮ್ಮ ವಿಳಾಸವನ್ನು ನವೀಕರಿಸುವ ಸೌಲಭ್ಯವನ್ನು ನೀಡಿದೆ. UIDAI ಹೊರಡಿಸಿದ ಹೇಳಿಕೆಯಲ್ಲಿ, ಕುಟುಂಬದ ಮುಖ್ಯಸ್ಥರೊಂದಿಗಿನ ಸಂಬಂಧವನ್ನು ತೋರಿಸುವ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸುವ ಮೂಲಕ ವಿಳಾಸವನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದು. 


COMMERCIAL BREAK
SCROLL TO CONTINUE READING

ಆಧಾರ್ ಕಾರ್ಡ್ ನಲ್ಲಿ ವಿಳಾಸವನ್ನು ಅಪ್ಡೇಟ್ ಮಾಡಲು ಕೆಲವು ದಾಖಲೆಗಳನ್ನು ಬಳಸಲು ಅವಕಾಶ ನೀಡಲಾಗಿದೆ. ಪಡಿತರ ಚೀಟಿ, ಮಾರ್ಕ್-ಶೀಟ್, ಮದುವೆ ಪ್ರಮಾಣಪತ್ರ, ಪಾಸ್‌ಪೋರ್ಟ್ ಇತ್ಯಾದಿಗಳನ್ನು ಆನ್‌ಲೈನ್‌ನಲ್ಲಿ ದಾಖಲೆಗಳಾಗಿ ಬಳಸಬಹುದು. ಈ ದಾಖಲೆಗಳ ಮೇಲೆ ಕುಟುಂಬದ ಮುಖ್ಯಸ್ಥ ಮತ್ತು ವಿಳಾಸ ಬದಲಿಸಬೇಕಿರುವ ವ್ಯಕ್ತಿಯ ಹೆಸರು ಮತ್ತು ಸಂಬಂಧವನ್ನು ಬರೆಯಬೇಕು. ಒಂದು ವೇಳೆ ನಿಮ್ಮ ಬಳಿ ಯಾವುದೇ ದಾಖಲೆ ಇಲ್ಲದೆ ಹೋದಲ್ಲಿ, ಕುಟುಂಬದ ಮುಖ್ಯಸ್ಥರು ನಿಗದಿತ ನಮೂನೆಯಲ್ಲಿ ಸೆಲ್ಫ್ ಡಿಕ್ಲೇರೆಶನ್ ನೀಡಬೇಕು.


ಇದನ್ನೂ ಓದಿ : SBI Latest News: ನೀವೂ ಸ್ಟೇಟ್ ಬ್ಯಾಂಕ್‌ನ ಗ್ರಾಹಕರಾಗಿದ್ದರೆ ಇಲ್ಲಿದೆ ಮಹತ್ವದ ಮಾಹಿತಿ


ಕುಟುಂಬದ ಮುಖ್ಯಸ್ಥರ ಒಪ್ಪಿಗೆಯೊಂದಿಗೆ ಆನ್‌ಲೈನ್‌ನಲ್ಲಿ ವಿಳಾಸವನ್ನು ಅಪ್ಡೇಟ್ ಮಾಡುವ ಸೌಲಭ್ಯವು ನಿಜಕ್ಕೂ ಅನುಕೂಲಕರವಾಗಿದೆ. ಪತ್ನಿ, ಮಕ್ಕಳು, ಅಥವಾ ಪೋಷಕರ ಹೆಸರಿನಲ್ಲಿ ಯಾವುದೇ ದಾಖಲೆಗಳಲ್ಲದ ಸಂದರ್ಭದಲ್ಲಿ ಈ ನಿಯಮ ಸಹಾಯವಾಗಲಿದೆ. ವಿವಿಧ ಕಾರಣಗಳಿಂದ ನಗರಗಳು ಮತ್ತು ಪಟ್ಟಣಗಳನ್ನು ಬದಲಾಯಿಸುತ್ತಿರುವ ಸಂದರ್ಭದಲ್ಲಿ ವಿಳಾಸ ಕೂಡ ಬದಲಾಗುತ್ತದೆ. ಆಗ ಆಧಾರ್ ಕಾರ್ಡ್ ನಲ್ಲಿಯೂ ವಿಳಾಸ ಬದಲಾಯಿಸಿಕೊಳ್ಳಬೇಕಾಗುತ್ತದೆ.  ಹಾಗಾಗಿ ಈ ಸೌಲಭ್ಯವು ಲಕ್ಷಾಂತರ ಜನರಿಗೆ ಸಹಾಯಕವಾಗಿರಲಿದೆ. 


ಹೊಸ ಸೌಲಭ್ಯವು ಈಗಾಗಲೇ ನೀಡಿರುವ ಸೌಲಭ್ಯಕ್ಕಿಂತ ಭಿನ್ನ :  ಆಧಾರ್‌ನಲ್ಲಿ ನಮೂದಿಸಿದ ವಿಳಾಸವನ್ನು ನವೀಕರಿಸುವ ಹೊಸ ಸೌಲಭ್ಯವು ಈಗಾಗಲೇ ನೀಡಿರುವ ಸೌಲಭ್ಯಕ್ಕಿಂತ ಭಿನ್ನವಾಗಿದೆ. ಮಾನ್ಯ ದಾಖಲೆಗಳ ಆಧಾರದ ಮೇಲೆ ವಿಳಾಸವನ್ನು ನವೀಕರಿಸಲು UIDAI ಈಗಾಗಲೇ  ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಯನ್ನು ಕುಟುಂಬದ ಮುಖ್ಯಸ್ಥ ಎಂದು ಪರಿಗಣಿಸಬಹುದು. ಅವನು ತನ್ನ ವಿಳಾಸವನ್ನು ಇತರ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಬಹುದು ಎಂದು UIDAI ಹೇಳಿದೆ. 'ಮೈ ಆಧಾರ್' ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ವಿಳಾಸವನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದು. ಇದಕ್ಕೆ 50 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.


ಇದನ್ನೂ ಓದಿ : PAN Card ಹೊಂದಿರುವವರಿಗೆ ಕಟ್ಟ ಕಡೆಯ ಎಚ್ಚರಿಕೆ ನೀಡಿದ ಆದಾಯ ತೆರಿಗೆ ಇಲಾಖೆ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.