ಟೋಲ್ ತೆರಿಗೆ ಪಾವತಿಯಲ್ಲಿ ವಿನಾಯಿತಿ : ನಿತಿನ್ ಗಡ್ಕರಿ ಘೋಷಣೆ.! ಇಲ್ಲಿದೆ ಹೊಸ ಪಟ್ಟಿ

ಹೊಸ ನಿಯಮಗಳ ಅಡಿಯಲ್ಲಿ, ಟೋಲ್ ತೆರಿಗೆಯಲ್ಲಿ ವಿನಾಯಿತಿಯನ್ನು ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಈ ಕುರಿತು ಸಂಪೂರ್ಣ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಲಾಗಿದೆ. 

Written by - Ranjitha R K | Last Updated : Jan 3, 2023, 01:43 PM IST
  • ಟೋಲ್ ಟ್ಯಾಕ್ಸ್ ಬಗ್ಗೆ ಹೊರ ಬಿಟ್ಟು ಮಾಹಿತಿ
  • ಟೋಲ್ ಟ್ಯಾಕ್ಸ್ ಮೇಲೆ ಸಿಗಲಿದೆ ರಿಯಾಯಿತಿ
  • ಬಿಡುಗಡೆಯಾಗಿದೆ ಹೊಸ ಪಟ್ಟಿ
ಟೋಲ್ ತೆರಿಗೆ ಪಾವತಿಯಲ್ಲಿ ವಿನಾಯಿತಿ : ನಿತಿನ್ ಗಡ್ಕರಿ ಘೋಷಣೆ.! ಇಲ್ಲಿದೆ  ಹೊಸ ಪಟ್ಟಿ  title=
Toll Tax New Rule

ನವದೆಹಲಿ : Toll Tax New Rule : ಕೇಂದ್ರ ಸಚಿವ ನಿತಿನ್ ಗಡ್ಕರಿ ಟೋಲ್ ಟ್ಯಾಕ್ಸ್ ಬಗ್ಗೆ ದೊಡ್ಡ ಮಾಹಿತಿ ನೀಡಿದ್ದಾರೆ. ಇನ್ನು ಮುಂದೆ ಭಾರೀ ಟೋಲ್ ತೆರಿಗೆಯಿಂದ ಮುಕ್ತಿ ಸಿಗಲಿದೆ. ಈ ಕುರಿತು ಸರ್ಕಾರದಿಂದ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ. ಹೊಸ ನಿಯಮಗಳ ಅಡಿಯಲ್ಲಿ, ಟೋಲ್ ತೆರಿಗೆಯಲ್ಲಿ ವಿನಾಯಿತಿಯನ್ನು ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಈ ಕುರಿತು ಸಂಪೂರ್ಣ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಲಾಗಿದೆ. 

ಇವರು ತೆರಿಗೆ ಪಾವತಿಸಬೇಕಾಗಿಲ್ಲ :
ಟೋಲ್ ತೆರಿಗೆಯನ್ನು NHAI ಸಂಗ್ರಹಿಸುತ್ತದೆ. ಹೆದ್ದಾರಿಯಲ್ಲಿ ನಾಲ್ಕು ಚಕ್ರದ ವಾಹನದಲ್ಲಿ ಪ್ರಯಾಣಿಸಿದರೆ  ಟೋಲ್ ತೆರಿಗೆಯನ್ನು  ಪಾವತಿಸಬೇಕಾಗುತ್ತದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವುದಾದರೆ  ಟೋಲ್ ತೆರಿಗೆಯನ್ನು ಪಾವತಿಸಬೇಕಿಲ್ಲ. ದ್ವಿಚಕ್ರ ವಾಹನ ಖರೀದಿಸುವ ಸಂದರ್ಭದಲ್ಲಿ ಮಾತ್ರ ಗ್ರಾಹಕರಿಂದ ರಸ್ತೆ ತೆರಿಗೆ ಸಂಗ್ರಹಿಸಲಾಗುತ್ತದೆ. ಪ್ರಸ್ತುತ, ಟೋಲ್ ತೆರಿಗೆಯ ಮೊತ್ತವು ವಾಹನದ ಉದ್ದವನ್ನು ಅವಲಂಬಿಸಿರುತ್ತದೆ.  

ಇದನ್ನೂ ಓದಿ : BharatPe CEO : ಭಾರತ್ ಪೇ ಸಿಇಒ ಹುದ್ದೆಯಿಂದ ಕೆಳಗಿಳಿದ ಸಮೀರ್ ಸುಹೇಲ್!

ಸಂಪೂರ್ಣ ಪಟ್ಟಿಯನ್ನು  ಚೆಕ್ ಮಾಡಿಕೊಳ್ಳಿ : 
ಭಾರತದ ರಾಷ್ಟ್ರಪತಿ
ಭಾರತದ ಪ್ರಧಾನ ಮಂತ್ರಿ 
ಭಾರತದ ಮುಖ್ಯ ನ್ಯಾಯಮೂರ್ತಿ
ಭಾರತದ ಉಪ ರಾಷ್ಟ್ರಪತಿ
ಕೇಂದ್ರದ ಕ್ಯಾಬಿನೆಟ್ ಮಂತ್ರಿ
ಸುಪ್ರೀಂ ಕೋರ್ಟ್ ನ್ಯಾಯಾಧೀಶ
ಲೋಕಸಭೆಯ ಸ್ಪೀಕರ್
ಕೇಂದ್ರ ರಾಜ್ಯ ಸಚಿವರು 
ಮುಖ್ಯಮಂತ್ರಿ 
ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್
ರಾಜ್ಯದ ವಿಧಾನಸಭೆಯ ಸ್ಪೀಕರ್
ಮುಖ್ಯ ನ್ಯಾಯಮೂರ್ತಿ ಉಚ್ಚ ನ್ಯಾಯಾಲಯ
ರಾಜ್ಯದ ವಿಧಾನ ಪರಿಷತ್ತಿನ ಸ್ಪೀಕರ್
 ಉಚ್ಚ ನ್ಯಾಯಾಲಯದ ನ್ಯಾಯಾಧೀಶ
ಭಾರತ ಸರ್ಕಾರದ ಕಾರ್ಯದರ್ಶಿ
ಸಂಸತ್ ಸದಸ್ಯ ಸೇನಾ ಕಮಾಂಡರ್, ಸೇನಾ ಸಿಬ್ಬಂದಿಯ ಉಪಾಧ್ಯಕ್ಷ
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ 
ರಾಜ್ಯದ ವಿಧಾನಸಭೆಯ ಸದಸ್ಯರು
 ರಾಜ್ಯ ಭೇಟಿಯಲ್ಲಿರುವ ವಿದೇಶಿ ಗಣ್ಯರು

ಇವರು ಕೂಡಾ ಪಾವತಿಸಬೇಕಿಲ್ಲ ಟೋಲ್ ಟಾಕ್ಸ್ :
ಮೇಲೆ ಹೇಳಿದ ಪಟ್ಟಿಯ ಹೊರತಾಗಿ, ಅಗ್ನಿಶಾಮಕ ಇಲಾಖೆ, ಅರೆಸೇನಾ ಪಡೆಗಳು ಮತ್ತು ಪೊಲೀಸ್ ಸೇರಿದಂತೆ ಸಮವಸ್ತ್ರದಲ್ಲಿರುವ ಕೇಂದ್ರ ಮತ್ತು ರಾಜ್ಯ ಸಶಸ್ತ್ರ ಪಡೆಗಳು ಕೂಡಾ ತೆರಿಗೆ ಪಾವತಿಸಬೇಕಾಗಿಲ್ಲ. ಈ ತೆರಿಗೆಯನ್ನು ರಕ್ಷಣಾ ಸಚಿವಾಲಯ ಮತ್ತು ಅಂಗವಿಕಲರಿಗಾಗಿ ತಯಾರಿಸಿದ ಯಾಂತ್ರಿಕ ವಾಹನಗಳ ಮೇಲೂ ವಿಧಿಸುವಂತಿಲ್ಲ. 

ಇದನ್ನೂ ಓದಿ : Petrol-Diesel Price : ಅಗ್ಗವಾಗಲಿದೆ ಪೆಟ್ರೋಲ್-ಡೀಸೆಲ್ ಬೆಲೆ : ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ!

ಪ್ರಯಾಣದ ಪ್ರಕಾರ  ಪಾವತಿಸಬೇಕು ತೆರಿಗೆ :
ಪ್ರಯಾಣಕ್ಕೆ ಅನುಗುಣವಾಗಿ ಟೋಲ್ ವೆಚ್ಚವು ಕೂಡಾ ವಿಭಿನ್ನವಾಗಿರುತ್ತದೆ. ಮಾತ್ರವಲ್ಲ ಪ್ರಯಾಣದ ವೇಳೆ ರಿಟರ್ನ್ ಟೋಲ್ ತೆರಿಗೆಯನ್ನು ತೆಗೆದುಕೊಳ್ಳುವ ಆಯ್ಕೆಯೂ ಇರುತ್ತದೆ. ಇದಲ್ಲದೇ ಪ್ರತಿದಿನ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಪಾಸ್ ಸೌಲಭ್ಯ ಕೂಡಾ ಇದೆ. 

ಎಸ್‌ಎಂಎಸ್ ಮೂಲಕ ಪಟ್ಟಿಯನ್ನು ಪರಿಶೀಲಿಸಬಹುದು :
ಎಸ್‌ಎಂಎಸ್ ಮೂಲಕ ಟೋಲ್ ತೆರಿಗೆ ಪಟ್ಟಿಯನ್ನು ತಿಳಿದುಕೊಳ್ಳಬಹುದು. ಇದಕ್ಕಾಗಿ, ನಿಮ್ಮ ಫೋನ್‌ನಿಂದ 56070 ಗೆ TIS < ಟೋಲ್ ಪ್ಲಾಜಾ ID ಎಂದು ಟೈಪ್ ಮಾಡಬೇಕು. ಹೀಗೆ ಮೆಸೇಜ್ ಮಾಡಿದ ತಕ್ಷಣ ಟೋಲ್ ತೆರಿಗೆ ದರ ಪಟ್ಟಿಯ ಪಟ್ಟಿ ನಿಮ್ಮ ಫೋನ್‌ನಲ್ಲಿ ಬರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News