LIC ಪಾಲಿಸಿ ತೆಗೆದುಕೊಳ್ಳುವ ವೇಳೆ ಆಗದಿರಲಿ ಈ ತಪ್ಪು, ಎದುರಿಸಬೇಕಾದೀತು ಭಾರೀ ನಷ್ಟ
Life Insurance Policy Nominee Benefits: ಪಾಲಿಸಿಯನ್ನು ಖರೀದಿ ವೇಳೆ, ನಾಮಿನಿಯ ಹೆಸರನ್ನು ನಿರ್ಧರಿಸಿ. ಪಾಲಿಸಿಗೆ ಸರಿಯಾದ ನಾಮಿನಿಯನ್ನು ಆಯ್ಕೆ ಮಾಡುವುದು ಕೂಡ ಬಹಳ ಮುಖ್ಯ ಎಂಬುದನ್ನು ನೆನಪಿನಲ್ಲಿಡಿ.
ನವದೆಹಲಿ : Life Insurance Policy Nominee Benefits: LIC ಪಾಲಿಸಿಯನ್ನು ತೆಗೆದುಕೊಳ್ಳುತ್ತಿದ್ದರೆ, ಒಂದು ಪ್ರಮುಖ ಸುದ್ದಿ ಇದೆ. ಪಾಲಿಸಿಯನ್ನು ಖರೀದಿಸುವಾಗ, ನಿಮ್ಮ ಕುಟುಂಬದ ಸದಸ್ಯರನ್ನು ನಾಮಿನಿಯಾಗಿ ಮಾಡಬೇಕು (Life Insurance Policy Nominee). ಪಾಲಿಸಿಯನ್ನು ತೆಗೆದುಕೊಳ್ಳುವ ಸಮಯದಲ್ಲಿ ನಾಮಿನಿಯನ್ನು ಮಾಡದಿದ್ದರೆ, ಪಾಲಿಸಿದಾರನ ಹಠಾತ್ ಸಾವಿನ ಸಂದರ್ಭದಲ್ಲಿ ದೊಡ್ಡ ಮೊತ್ತದಿಂದ ವಂಚಿತರಾಗಬಹುದು. ನಾಮಿನಿಯನ್ನು ಮಾಡಿದ್ದರೆ, ಪಾಲಿಸಿ ಕ್ಲೇಮ್ ವೇಳೆ, ಕುಟುಂಬ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ ಅಲ್ಲದೆ, ಅನಗತ್ಯ ವಿವಾದಗಳನ್ನು ಸಹ ತಪ್ಪಿಸಬಹುದು.
ನಾಮಿನಿಯನ್ನು ಆಯ್ಕೆ ಮಾಡುವಾಗ ನೆನಪಿನಲ್ಲಿಡಬೇಕಾದ ಅಂಶಗಳು :
ಪಾಲಿಸಿಯನ್ನು (Policy) ಖರೀದಿ ವೇಳೆ, ನಾಮಿನಿಯ ಹೆಸರನ್ನು ನಿರ್ಧರಿಸಿ. ಪಾಲಿಸಿಗೆ ಸರಿಯಾದ ನಾಮಿನಿಯನ್ನು ಆಯ್ಕೆ ಮಾಡುವುದು ಕೂಡ ಬಹಳ ಮುಖ್ಯ ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಕುಟುಂಬದಲ್ಲಿ ನೀವು ಮಾತ್ರ ಸಂಪಾದನೆ ಮಾಡುವ ಸದಸ್ಯರಾಗಿದ್ದರೆ, ನಿಮ್ಮ ಅನುಪಸ್ಥಿತಿಯಲ್ಲಿ ಹಣಕಾಸಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯವಿರುವ ವ್ಯಕ್ತಿಯನ್ನು ನಾಮಿನಿಯನ್ನಾಗಿ (Nominee) ಮಾಡಿ. ಹೆಚ್ಚಾಗಿ ಈ ಜವಾಬ್ದಾರಿಯನ್ನು ತೆಗೆದುಕೊಳ್ಳುವವರು ನಿಮ್ಮ ಸಂಗಾತಿಯೇ ಆಗಿರುತ್ತಾರೆ. ಹಾಗಾಗಿ ನಿಮ್ಮ ಸಂಗಾತಿಯನ್ನು ನಾಮಿನಿಯನ್ನಾಗಿ ಮಾಡಬಹುದು.
ಇದನ್ನೂ ಓದಿ : PNB Account Holders: ಈ ಬ್ಯಾಂಕಿನಲ್ಲಿ ನಿಮ್ಮ ಅಕೌಂಟ್ ಇದ್ದರೆ ನಿಮಗೂ ಸಿಗಲಿದೆ 23 ಲಕ್ಷಗಳ ಲಾಭ
ಒಂದಕ್ಕಿಂತ ಹೆಚ್ಚು ನಾಮಿನಿ :
ಕೆಲವರು ತಮ್ಮ ಪಾಲಿಸಿಯ ಹಣವನ್ನು ಇಬ್ಬರು ವ್ಯಕ್ತಿಗಳ ನಡುವೆ ಹಂಚಿಕೊಳ್ಳಲು ಬಯಸುತ್ತಾರೆ. ಹೆಂಡತಿ ಮತ್ತು ಮಗು ಅಥವಾ ಹೆಂಡತಿ ಮತ್ತು ಸಹೋದರ ಅಥವಾ ತಾಯಿಯ ಮಧ್ಯೆ ಹಣವನ್ನು ಹಂಚಲು ಇಷ್ಟ ಪಡುತ್ತಾರೆ. ಹೀಗಿರುವಾಗ ಒಂದಕ್ಕಿಂತ ಹೆಚ್ಚು ಪಾಲಿಸಿಯನ್ನು ಖರೀದಿಸುವ ಮೂಲಕ, ವಿವಿಧ ಪಾಲಿಸಿಗಳಿಗೆ ಪ್ರತ್ಯೇಕ ನಾಮಿನಿಯನ್ನು ಮಾಡಬಹುದು. ಅಥವಾ ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ, ಒಂದಕ್ಕಿಂತ ಹೆಚ್ಚು ಜನರ ಪಾಲನ್ನು ನಿರ್ಧರಿಸಿ ಅವರನ್ನು ನಾಮಿನಿಯಾಗಿ ಮಾಡಬಹುದು. ಇದಕ್ಕಾಗಿ ಪಾಲಿಸಿಯನ್ನು ಖರೀದಿಸುವಾಗ ವಿಮಾದಾರರಿಂದ ಲಿಖಿತ ಒಪ್ಪಂದವನ್ನು ತೆಗೆದುಕೊಳ್ಳಬಹುದು.
ನಾಮಿನಿಯನ್ನು ಬದಲಿಸಬಹುದು :
ಪಾಲಿಸಿದಾರ ಬಯಸಿದ್ದಲ್ಲಿ ನಾಮಿನಿಯನ್ನು ಬದಲಾಯಿಸುವುದು (How To Change Nominee) . ಒಬ್ಬ ನಾಮಿನಿಯು ಸತ್ತರೆ ಅಥವಾ ಉದ್ಯೋಗ ಪಡೆದರೆ ಮತ್ತು ಇನ್ನೊಬ್ಬ ಸದಸ್ಯನಿಗೆ ಹೆಚ್ಚಿನ ಹಣದ ಅಗತ್ಯವಿದ್ದಲ್ಲಿ, ನಾಮಿನಿಯನ್ನು ಬದಲಿಸಬಹುದು (Change nominee). ಇದರ ಹೊರತಾಗಿ, ಮದುವೆ ಅಥವಾ ವಿಚ್ಛೇದನದ ಸಂದರ್ಭದಲ್ಲಿಯೂ ನಾಮಿನಿಯನ್ನು ಬದಲಾಯಿಸಬಹುದು. ಇದಕ್ಕಾಗಿ, ವಿಮಾ ಕಂಪನಿಯ ವೆಬ್‌ಸೈಟ್‌ನಿಂದ ನಾಮಿನಿ ಫಾರ್ಮ್ ಅನ್ನು ಡೌನ್‌ಲೋಡ್ (download) ಮಾಡಿ ಅಥವಾ ಕಚೇರಿಯಿಂದ ಈ ಫಾರ್ಮ್ ಅನ್ನು ಪಡೆದುಕೊಳ್ಳಿ. ಫಾರಂ ನಲ್ಲಿ ನಾಮಿನಿಯ ವಿವರಗಳನ್ನು ಭರ್ತಿ ಮಾಡಿ ಮತ್ತು ಪಾಲಿಸಿ ದಾಖಲೆಯ ಪ್ರತಿಯನ್ನು ಮತ್ತು ನಾಮಿನಿಯೊಂದಿಗಿನ ನಿಮ್ಮ ಸಂಬಂಧದ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಿ. ಒಂದಕ್ಕಿಂತ ಹೆಚ್ಚು ನಾಮಿನಿ ಇದ್ದರೆ, ಪ್ರತಿಯೊಬ್ಬರ ಪಾಲನ್ನು ನಮೂದಿಸುವುದು ಅಗತ್ಯವಾಗಿರುತ್ತದೆ.
ಇದನ್ನೂ ಓದಿ : Ujjwala Yojana 2.0: ಪ್ರಧಾನಿ ಮೋದಿಯಿಂದ ಉಜ್ವಲಾ 2.0 ಯೋಜನೆ ಬಿಡುಗಡೆ, ಕೇವಲ ತುಂಬಿದ ಸಿಲಿಂಡರ್ ಅಷ್ಟೇ ಅಲ್ಲ ಒಲೆಯು ಉಚಿತ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ