ನವದೆಹಲಿ : PNB Account Holders: ದೇಶದ ಕೋಟ್ಯಂತರ ಜನರು ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಆದ್ದರಿಂದ ಬ್ಯಾಂಕ್ ಒದಗಿಸುವ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಪಡೆದುಕೊಳ್ಳುವುದು ಒಳ್ಳೆಯದು. ಇಲ್ಲವಾದರೆ, ಅದೆಷ್ಟೋ ಲಾಭಗಳ ಬಗ್ಗೆ ತಿಳಿಯುವುದೇ ಇಲ್ಲ. ಇದೀಗ, ಪಿಎನ್‌ಬಿ ಬ್ಯಾಂಕ್ (Punjab national bank) ತನ್ನ ಕೆಲವು ವಿಶೇಷ ಖಾತೆದಾರರಿಗೆ 23 ಲಕ್ಷ ರೂಪಾಯಿಗಳ ಲಾಭವನ್ನು ನೀಡುತ್ತಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab national bank) ನೀಡುವ ಈ ಪ್ರಯೋಜನವು ಬ್ಯಾಂಕಿನಲ್ಲಿ ಸ್ಟೈಲ್ ಖಾತೆ ಹೊಂದಿರುವವರಿಗೆ ಸಿಗಲಿದೆ. ನೀವು ಕೂಡಾ ನೌಕರಿ ಮಾಡುತ್ತಿದ್ದು, PNB ಯಲ್ಲಿ ಖಾತೆಯನ್ನು ತೆರೆಯುವ ಮೂಲಕ ಇದರ ಲಾಭವನ್ನು ಪಡೆಯಬಹುದು. ಈ ಖಾತೆಯ ಹೆಸರು PNB My Salary Account.
ಇದನ್ನೂ ಓದಿ : Ujjwala Yojana 2.0: ಪ್ರಧಾನಿ ಮೋದಿಯಿಂದ ಉಜ್ವಲಾ 2.0 ಯೋಜನೆ ಬಿಡುಗಡೆ, ಕೇವಲ ತುಂಬಿದ ಸಿಲಿಂಡರ್ ಅಷ್ಟೇ ಅಲ್ಲ ಒಲೆಯು ಉಚಿತ
ಬ್ಯಾಂಕಿನಿಂದ ಗ್ರಾಹಕರಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ ಅವು ಯಾವುವು ನೋಡೋಣ ..
1.ಈ ಖಾತೆಯಲ್ಲಿ, ಬ್ಯಾಂಕ್ (Bank) ಗ್ರಾಹಕರಿಗೆ 20 ಲಕ್ಷದವರೆಗೆ ಉಚಿತ ವಿಮಾ ಸೌಲಭ್ಯವನ್ನು ಒದಗಿಸುತ್ತದೆ.
2.ತಿಂಗಳಿಗೆ 10 ಸಾವಿರದಿಂದ 25 ಸಾವಿರ ಸಂಬಳ ಇರುವವರನ್ನು ಸಿಲ್ವರ್ ಕೆಟಗೆರಿಯಲ್ಲಿ ಇರಿಸಲಾಗಿಗುತ್ತದೆ.
3.ಇದರ ಹೊರತಾಗಿ, 25,001 ರಿಂದ 75000 ರೂಪಾಯಿಗಳವರೆಗಿನ ಜನರನ್ನು ಗೋಲ್ಡ್ ಕೆಟಗೆರಿಯಲ್ಲಿ ಇರಿಸಲಾಗಿಗುತ್ತದೆ.
4. 75001 ರೂ ಯಿಂದ 150000 ರೂ ವೇತನ ಇರುವವರನ್ನು ಪ್ರೀಮಿಯಂ ವಿಭಾಗದಲ್ಲಿ ಇರಿಸಲಾಗಿಗುತ್ತದೆ.
5. 150001ರೂಗಿಂತ ಹೆಚ್ಚು ಸಂಬಳ ಹೊಂದಿರುವವರನ್ನು ಪ್ಲಾಟಿನಂ ವಿಭಾಗದಲ್ಲಿ ಇರಿಸಲಾಗಿಗುತ್ತದೆ.
ಈ ಬಗ್ಗೆ PNB ಟ್ವೀಟ್ ಮಾಡಿದೆ. ನಿಮ್ಮ ಸಂಬಳವನ್ನು ಉತ್ತಮವಾಗಿ ನಿರ್ವಹಿಸಲು ಬಯಸುವಿರಾದರೆ, PNB MySalary ಖಾತೆ ರೆಯಿರಿ. ಇದಲ್ಲದೇ, ವೈಯಕ್ತಿಕ ಅಪಘಾತ ವಿಮೆ ಹಾಗೂ ಓವರ್ ಡ್ರಾಫ್ಟ್ (Over draft) ಮತ್ತು ಸ್ವೀಪ್ ಸೌಲಭ್ಯವನ್ನು ಕೂಡಾ ಪಡೆಯಿರಿ.
ಇದನ್ನೂ ಓದಿ : ಬ್ಯಾಂಕ್ ಸಿಬ್ಬಂದಿಗೆ RBI ಗಿಫ್ಟ್ : ಪ್ರತಿ ವರ್ಷ ಸಿಗಲಿದೆ ಹತ್ತು ದಿನಗಳ ಸರ್ಪ್ರೈಜ್ ರಜೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ