ನವದೆಹಲಿ: ಇಪಿಎಫ್‌ಒಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಅಥವಾ ದೂರನ್ನು ಈಗ ವಾಟ್ಸಾಪ್‌ನಲ್ಲಿ ಇತ್ಯರ್ಥಪಡಿಸಲಾಗುತ್ತದೆ. ಇಪಿಎಫ್‌ಒ (EPFO) ತನ್ನ ಚಂದಾದಾರರಿಗಾಗಿ ವಾಟ್ಸಾಪ್ (Whatsapp) ಸಹಾಯವಾಣಿಯನ್ನು ಪ್ರಾರಂಭಿಸಿದೆ. ಇಪಿಎಫ್‌ಒನ ಎಲ್ಲಾ ಚಂದಾದಾರರು ಈ ಸೇವೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.


COMMERCIAL BREAK
SCROLL TO CONTINUE READING

ಅಂತಹ ದೂರುಗಳನ್ನು ವಾಟ್ಸಾಪ್‌ನಲ್ಲಿ ಇತ್ಯರ್ಥಪಡಿಸಲಾಗುತ್ತದೆ!
ವಾಟ್ಸಾಪ್ ಬಳಸುವ ಯಾವುದೇ ಚಂದಾದಾರರು ತಮ್ಮ ದೂರುಗಳನ್ನು ಅಥವಾ ಇಪಿಎಫ್‌ಒಗೆ ಸಂಬಂಧಿಸಿದ ಯಾವುದೇ ವಿಚಾರಣೆಯನ್ನು ಈ ಸಹಾಯವಾಣಿ ಮೂಲಕ ನೋಂದಾಯಿಸಿಕೊಳ್ಳಬಹುದು. ಎಲ್ಲಾ ಪ್ರಾದೇಶಿಕ ಕಚೇರಿಗಳ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳು ಇಪಿಎಫ್‌ಒನ ಅಧಿಕೃತ ವೆಬ್‌ಸೈಟ್‌ನ ಮುಖಪುಟದಲ್ಲಿ ಕಂಡುಬರುತ್ತವೆ. ಎಲ್ಲಾ ಪ್ರಾದೇಶಿಕ ಕಚೇರಿಗಳಲ್ಲಿ ಇಪಿಎಫ್‌ಒ ಪ್ರತ್ಯೇಕ ತಜ್ಞರ ತಂಡವನ್ನು ಸ್ಥಾಪಿಸಿದೆ. ಇದರಿಂದ ಚಂದಾದಾರರು ತಮ್ಮ ಕುಂದುಕೊರತೆಗಳಿಗೆ ತಕ್ಷಣದ ಪ್ರತಿಕ್ರಿಯೆ ಮತ್ತು ಪರಿಹಾರವನ್ನು ಪಡೆಯುತ್ತಾರೆ. ಇಪಿಎಫ್‌ಒದ ಎಲ್ಲಾ 138 ಪ್ರಾದೇಶಿಕ ಕಚೇರಿಗಳಲ್ಲಿ ಈ ಸಹಾಯವಾಣಿ ಸಂಖ್ಯೆ ಪ್ರಾರಂಭವಾಗಿದೆ.


ಚಾಟ್ ತೆರೆಯದೆಯೇ ಓದಿರಿ WhatsApp ಮೆಸೇಜ್, ಇಲ್ಲಿದೆ ಸುಲಭ ಟ್ರಿಕ್


ವಾಟ್ಸಾಪ್ ಸಹಾಯವಾಣಿ ಸೇವೆಯ ಮೂಲಕ ಇಪಿಎಫ್‌ಒ ತನ್ನ ಲಕ್ಷಾಂತರ ಚಂದಾದಾರರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಇತರ ವೇದಿಕೆಗಳನ್ನು ಹೊರತುಪಡಿಸಿ ಇಪಿಎಫ್‌ಒ ದೂರುಗಳ ಪರಿಹಾರಕ್ಕಾಗಿ ಈ ಸೌಲಭ್ಯವು ಇದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.


ನಿಮ್ಮ PF ಹಳೆಯ ಕಂಪನಿಯಲ್ಲಿ ಸಿಲುಕಿದೆಯೇ? ಹಣ ಹಿಂಪಡೆಯಲು ಈ ಸುಲಭ ಮಾರ್ಗ ಅನುಸರಿಸಿ


ಮಧ್ಯವರ್ತಿಗಳ ಅಗತ್ಯವಿರುವುದಿಲ್ಲ:-
ಇಪಿಎಫ್‌ಒ ತನ್ನ ಚಂದಾದಾರರನ್ನು ವಾಟ್ಸಾಪ್ ಸಹಾಯವಾಣಿ ಸೇವೆಯ ಮೂಲಕ ಸ್ವಾವಲಂಬಿಯನ್ನಾಗಿ ಮಾಡುತ್ತಿದೆ. ಏಕೆಂದರೆ ಯಾವುದೇ ದೂರುಗಳು ಅಥವಾ ಸಮಸ್ಯೆಗಳನ್ನು ಪರಿಹರಿಸಲು ಮಧ್ಯವರ್ತಿಗಳ ಅಗತ್ಯವಿರುವುದಿಲ್ಲ. ವಾಟ್ಸಾಪ್ ಸಹಾಯವಾಣಿ ಸೇವೆಯೊಂದಿಗೆ ಚಂದಾದಾರರು ಕುಂದುಕೊರತೆಗಳನ್ನು ಪರಿಹರಿಸಲು ಇಪಿಎಫ್‌ಒ ಕಚೇರಿಗಳಿಗೆ ಹೋಗಬೇಕಾಗಿಲ್ಲ.


ESIC ಸದಸ್ಯರಿಗೆ ಗುಡ್ ನ್ಯೂಸ್, ಪ್ರತಿ ತಿಂಗಳು ಸಿಗಲಿದೆ ಈ ಪ್ರಯೋಜನ


ಈ ಸೇವೆ ಚಂದಾದಾರರಲ್ಲಿ ಬಹಳ ಜನಪ್ರಿಯವಾಗುತ್ತಿದೆ. ಇಲ್ಲಿಯವರೆಗೆ ಇಪಿಎಫ್‌ಒ 1,64,040 ದೂರುಗಳು ಮತ್ತು ಪ್ರಶ್ನೆಗಳನ್ನು ಪರಿಹರಿಸಿದೆ. ಇದರಿಂದಾಗಿ ಫೇಸ್‌ಬುಕ್, ಟ್ವಿಟರ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ದೂರುಗಳನ್ನು ಸಲ್ಲಿಸುವಲ್ಲಿ ಶೇಕಡಾ 30 ರಷ್ಟು ಕುಸಿತ ಕಂಡುಬಂದಿದೆ. ಇಪಿಎಫ್‌ಜಿಎಂಎಸ್ (EPFiGMS) ಪೋರ್ಟಲ್ ಮತ್ತು ಸಿಪಿಜಿಆರ್ಎಎಂಎಸ್ನಲ್ಲಿನ (CPGRAMS) ದೂರುಗಳ ಸಂಖ್ಯೆ ಶೇಕಡಾ 16 ರಷ್ಟು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.