ನವದೆಹಲಿ: ವಿಜಯ್ ಶೇಖರ್ ಶರ್ಮಾ ಒಡೆತನದ ಪೇಟಿಎಂ ಗ್ರಾಹಕರಿಗೆ 5 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ (2 ನಿಮಿಷದಲ್ಲಿ) 2 ಲಕ್ಷ ರೂ.ಗಳವರೆಗೆ ತ್ವರಿತ ಸಾಲ ಪಡೆಯುವ ಅವಕಾಶವನ್ನು ಒದಗಿಸುತ್ತಿದೆ. ಸಾಲದ ಅರ್ಜಿಯ ಸಂಪೂರ್ಣ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿ ನಡೆಯುವುದರಿಂದ ಸಾಲವನ್ನು ಡಿಜಿಟಲ್ ರೀತಿಯಲ್ಲಿ ವಿತರಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಇತ್ತೀಚೆಗೆ ಪೇಟಿಎಂ(Paytm) ಪ್ರಾರಂಭಿಸಿದ ವೈಯಕ್ತಿಕ ಸಾಲ ಸಂಬಳ ಪಡೆಯುವ ವ್ಯಕ್ತಿಗಳು, ಸಣ್ಣ ವ್ಯಾಪಾರಿ ಮಾಲೀಕರು ಮತ್ತು ವೃತ್ತಿಪರರಿಗೆ ಸೇವೆಯನ್ನು ವಿಸ್ತರಿಸಲು ಪ್ಲಾನ್ ಮಾಡಲಾಗುತ್ತಿದೆ. 


ಇದನ್ನೂ ಓದಿ : Gold Rate: ಚಿನ್ನ ಖರೀದಿದಾರರೇ ಗಮನಿಸಿ: ಇಲ್ಲಿದೆ ಇಂದಿನ ಬಂಗಾರ ಬೆಲೆ!


ಈ ಸೇವೆಯನ್ನ ವರ್ಷದ 365 ದಿನಗಳಲ್ಲಿ 24x7 ಗಂಟೆಗಳ ಕಾಲ ಗ್ರಾಹಕರು 2 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು. ಈ ಸಾಲ(Loan) ಪಡೆಯಲು ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 2 ನಿಮಿಷಗಳಿಗಿಂತ ಕಡಿಮೆ  ಸಮಯ ತೆಗೆದುಕೊಳ್ಳುತ್ತದೆ.


ಇದನ್ನೂ ಓದಿ : Disney + Hotstar‌ ನಲ್ಲಿ Free ಆಗಿ IPL ನೋಡುವುದು ಹೇಗೆ ಗೊತ್ತಾ?


ಪೇಟಿಎಂ ನಿಂದ ತ್ವರಿತ ವೈಯಕ್ತಿಕ ಸಾಲ ಯೋಜನೆ(Instant Personal Loan scheme) ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಈ ಸಾಲ ಮರುಪಾವತಿ ಅವಧಿಯು 18-36 ತಿಂಗಳು ಆಗಿದೆ. 


ಇದನ್ನೂ ಓದಿ : CAR ON LEASE: ಪಾವತಿ, ವಿಮಾ ಪ್ರೀಮಿಯಂ ಇಲ್ಲದೆ ಲೀಸ್‌ನಲ್ಲಿ ಲಭ್ಯವಾಗಲಿದೆ 'ಸ್ಮಾರ್ಟ್' ಕಾರು


ಸಾಲಕ್ಕಾಗಿ, ಗ್ರಾಹಕರು ಹಣಕಾಸು ಸೇವೆಗಳ ವಿಭಾಗದ ಅಡಿಯಲ್ಲಿ ಒದಗಿಸಲಾದ ಪೇಟಿಎಂ ನಲ್ಲಿನ ವೈಯಕ್ತಿಕ ಸಾಲ ಆಯ್ಕೆಗೆ ಹೋಗಬೇಕಾಗುತ್ತದೆ ಮತ್ತು ನಂತರ ಅವರು ತಮ್ಮ ಸಾಲದ ಖಾತೆ(Loan Account)ಯನ್ನು ಪೇಟಿಎಂ ಅಪ್ಲಿಕೇಶನ್‌ನಿಂದ ನೇರವಾಗಿ ನಿರ್ವಹಿಸಬಹುದು.


ಇದನ್ನೂ ಓದಿ : LIC ಈ ವಿಶೇಷ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ ವೃದ್ಧಾಪ್ಯದಲ್ಲಿ ಪಡೆಯಿರಿ ₹ 74300 ಪಿಂಚಣಿ!


ಪೇಟಿಎಂ ತನ್ನ ಸಾಲ ಸೇವೆಗಾಗಿ ಹಲವಾರು ಬ್ಯಾಂಕು(Banks)ಗಳು ಮತ್ತು NBFC ಜೊತೆಗೆ ಪಾಲುದಾರಿಕೆ ಹೊಂದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.