ITR Filing Process Simplified -  ಮುಂದಿನ ವರ್ಷದಿಂದ ತೆರಿಗೆ ಪಾವತಿದಾರರಿಗೆ (Tax Payers) ತೆರಿಗೆ ಸಲ್ಲಿಸುವುದು ಮತ್ತಷ್ಟು ಸುಲಭವಾಗಲಿದೆ. ವಾಸ್ತವದಲ್ಲಿ, ಕಳೆದ ಕೆಲವು ವರ್ಷಗಳಿಂದ, ಐಟಿಆರ್ ಫೈಲಿಂಗ್ (ITR Filing Process) ಅನ್ನು ಸರಳಗೊಳಿಸಲು ಸರ್ಕಾರವು (Income Tax Department) ತೀವ್ರವಾಗಿ ಕೆಲಸ ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತೆರಿಗೆದಾರರ ಮಾಹಿತಿ ಸಂಗ್ರಹಿಸುವ ಕಸರತ್ತು ನಡೆದಿದೆ. ಇದೀಗ ಸರ್ಕಾರ ಈ ವಿಚಾರದಲ್ಲಿ ಸಾಕಷ್ಟು ಮಾಹಿತಿಗಳನ್ನುಕಲೆ ಹಾಕಿದ್ದು, ಇದರಿಂದಾಗಿ ಮುಂದಿನ ವರ್ಷದಿಂದ ಆದಾಯ ತೆರಿಗೆ ನಮೂನೆಯಲ್ಲಿ ಕೆಲವು ಮಾಮೂಲಿ ಮಾಹಿತಿಗಳನ್ನು ಮಾತ್ರ ಭರ್ತಿ ಮಾಡಬೇಕಾಗುತ್ತದೆ. ಅಂದರೆ ಬ್ಯಾಂಕ್ ಬಡ್ಡಿ ಸೇರಿದಂತೆ ಇತರ ಹಲವು ಮಾಹಿತಿಗಳು ನಿಮ್ಮ ಫಾರ್ಮ್ ನಲ್ಲಿ ಮುಂಚಿತವಾಗಿಯೇ ಗೋಚರಿಸಲಿವೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-RBI Digital Rupee: ಡಿಜಿಟಲ್ ರೂಪಾಯಿ, Cryptocurrency ಗಿಂತ ಹೇಗೆ ಭಿನ್ನವಾಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ


ಈ ಸೌಲಭ್ಯಗಳೊಂದಿಗೆ, ಒಂದು ವಿಧದಲ್ಲಿ ಐಟಿಆರ್ ಸಲ್ಲಿಸುವ ಅರ್ಧದಷ್ಟು ಕೆಲಸವನ್ನು ಆದಾಯ ತೆರಿಗೆ ಇಲಾಖೆಯೇ ನಿಮ್ಮ ಪರವಾಗಿಮಾಡಲಿದೆ. ಇದರೊಂದಿಗೆ ಹೆಚ್ಚು ಹೆಚ್ಚು ಜನರನ್ನು ತೆರಿಗೆ ವ್ಯಾಪ್ತಿಗೆ ತರಲು ದೊಡ್ಡ ತಯಾರಿಯೂ ಆರಂಭವಾಗಿದೆ. ಇದಕ್ಕೆ ಆಧಾರವಾಗಿ ಟಿಡಿಎಸ್ ಅನ್ನು ಪರಿಗಣಿಸಲಾಗುವುದು. ಯಾರ ಆದಾಯದ ಮೇಲೆ ಟಿಡಿಎಸ್  ಅನ್ವಯಿಸುತ್ತದೆ  ಮತ್ತು ಅವರು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುತ್ತಿಲ್ಲ, ಅಂತಹ ಜನರಿಂದ ಡಬಲ್ ಟಿಡಿಎಸ್ ವಸೂಲಿ ಮಾಡಲಾಗುವುದು.


ಇದನ್ನೂ ಓದಿ-7th Pay Commission : ಕೇಂದ್ರ ನೌಕರರಿಗೆ ಕಾದಿದೆ ಅದೃಷ್ಟ : DA ಹೆಚ್ಚಳದ ಜೊತೆ ಸಿಗಲಿದೆ ₹2,32,152 - ಲೆಕ್ಕಾಚಾರ ನೋಡಿ


ಇದರೊಂದಿಗೆ ಆದಾಯ ತೆರಿಗೆ (Business News In Kannada) ಇಲಾಖೆಯು ಆದಾಯ ತೆರಿಗೆ ಸಲ್ಲಿಕೆ ವ್ಯವಸ್ಥೆ ಮತ್ತು ಅದರಲ್ಲಿನ ದೋಷಗಳನ್ನು ಸರಿಪಡಿಸುವ ಮಾರ್ಗವನ್ನೂ ಸರಳಗೊಳಿಸಿದೆ. ಪ್ರಸ್ತುತ ತಪ್ಪನ್ನು ಸರಿಪಡಿಸುವ ಅವಧಿ ತುಂಬಾ ಕಡಿಮೆ ಇರುವುದರಿಂದ ನವೀಕರಿಸಿದ ರಿಟರ್ನ್ಸ್ ಸಲ್ಲಿಸುವ ಆಯ್ಕೆಯು ಜನರಿಗೆ ಪ್ರಯೋಜನಕಾರಿ ಸಾಬೀತಾಗಲಿದೆ ಎಂದು ತಜ್ಞರು ನಂಬಿದ್ದಾರೆ. ನಿಸ್ಸಂಶಯವಾಗಿ ಈ ಸೌಲಭ್ಯ ಬಂದರೆ ತೆರಿಗೆ ಕಟ್ಟುವವರ ಸಂಖ್ಯೆಯೂ ಹೆಚ್ಚುತ್ತದೆ ಹಾಗೂ ಜನರು ತಮ್ಮ ಹಿಂದಿನ ವರ್ಷಗಳ ರಿಟರ್ನ್ಸ್ ತುಂಬಿ ಸರ್ಕಾರದ ಖಜಾನೆಗೆ ಕೊಡುಗೆ ನೀಡಲಿದ್ದಾರೆ. 


ಇದನ್ನೂ ಓದಿ-Pots Office ಈ ಯೋಜನೆಯಲ್ಲಿ ₹150 ಉಳಿತಾಯ ಮಾಡಿ ₹20 ಲಕ್ಷ ಲಾಭ ಪಡೆಯಿರಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.